• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಪಾಕ್‌ ಜೊತೆಗಿನ ಪಂದ್ಯ ರದ್ದು ಮಾಡಬೇಕೆಂದು, ಕಾಮೆಂಟರಿಗೆ ಕೂತ ಗಂಭೀರ್:‌ ನೆಟ್ಟಿಗರಿಂದ ಛೀಮಾರಿ!

ಪ್ರತಿಧ್ವನಿ by ಪ್ರತಿಧ್ವನಿ
September 3, 2023
in Uncategorized
0
ಪಾಕ್‌ ಜೊತೆಗಿನ ಪಂದ್ಯ ರದ್ದು ಮಾಡಬೇಕೆಂದು, ಕಾಮೆಂಟರಿಗೆ ಕೂತ ಗಂಭೀರ್:‌ ನೆಟ್ಟಿಗರಿಂದ ಛೀಮಾರಿ!
Share on WhatsAppShare on FacebookShare on Telegram

ಇಂಡಿಯಾ ಹಾಗೂ ಪಾಕಿಸ್ತಾನದ ನಡುವೆ ನಡೆದ ಏಷ್ಯಾಕಪ್‌ ಪಂದ್ಯಾಟದಲ್ಲಿ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್‌ ಗಂಭಿರ್‌ ಪಾಲ್ಗೊಂಡಿರುವುದು ವ್ಯಾಪಕ ವ್ಯಂಗ್ಯಕ್ಕೆ ಗುರಿಯಾಗಿದೆ.

ADVERTISEMENT

ಕೇವಲ ಮೂರು ವಾರಗಳ ಹಿಂದೆಯಷ್ಟೇ ಪಾಕಿಸ್ತಾನದ ಜೊತೆಗೆ ಯಾವುದೇ ಕಾರಣಕ್ಕೂ ಭಾರತ ಆಟ ಆಡಬಾರದು ಎಂದು ಕರೆ ನೀಡಿದ್ದ ಗಂಭೀರ್‌, ಇದೀಗ ಕಾಮೆಂಟರಿ ಮಾಡಲು ಕುಳಿತುಕೊಂಡಿರುವುದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.

ಆಗಸ್ಟ್‌ ಮೊದಲ ವಾರದಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಹಣಾಹಣಿಯನ್ನು ರದ್ದುಗೊಳಿಸಬೇಕು. ಪಾಕಿಸ್ತಾನದ ಸಮಸ್ಯೆಗಳು ಬಗೆ ಹರಿಯುವವರೆಗೆ ಯಾವುದೇ ಕ್ರೀಡಾಕೂಟ ನಡೆಯಲು ಸಾಧ್ಯವಿಲ್ಲ ಎಂದು ಗಂಭೀರ್ ಹೇಳಿದ್ದರು.

https://twitter.com/Politics_2022_/status/1698003746935214358

“ನನ್ನನ್ನು ಪದೇ ಪದೇ ಟೀಕಿಸಬಹುದು, ಆದರೆ ಕ್ರಿಕೆಟ್ ಪಂದ್ಯ ಸೇರಿದಂತೆ ಯಾವುದೂ ಕೂಡ ನಮ್ಮ ಸೈನಿಕನ ಪ್ರಾಣಕ್ಕಿಂತ ನನಗೆ ಹೆಚ್ಚು ಮೌಲ್ಯಯುತವಾಗಿಲ್ಲ.  ಕ್ರಿಕೆಟ್ ಅನ್ನು ರಾಜಕೀಯದಿಂದ ಬೇರ್ಪಡಿಸಲು ಸಾಧ್ಯವಿಲ್ಲ, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಿಗೆ ಬಂದಾಗ ಎಂದು ಗಂಭೀರ ಒತ್ತಿ ಹೇಳಿದ್ದರು. ‌

“ಎರಡೂ ದೇಶಗಳ ನಡುವಿನ ಪರಿಸ್ಥಿತಿ ಸುಧಾರಿಸುವವರೆಗೆ ಭಾರತವು ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಆಡಬೇಕು ಎಂದು ನಾನು ನಂಬುವುದಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶದ ಆಟಗಾರರೊಂದಿಗೆ ಭಾರತೀಯ ಆಟಗಾರರು ಆಡುತ್ತಾರೆ ಎಂದು ನಿರೀಕ್ಷಿಸುವುದು ಸಮಂಜಸವಲ್ಲ” ಎಂದು ಗಂಭೀರ್‌ ಹೇಳಿದ್ದರು.

 ಆದರೆ, ಸ್ವತಃ ಅವರದೇ ಹೇಳಿಕೆಯನ್ನು ಮರೆತಂತೆ ನಟಿಸಿದ ಗೌತಮ್‌ ಗಂಭೀರ್‌ ಯಾವುದೇ ಅಳುಕಿಲ್ಲದೆ ಶ್ರೀಲಂಕಾದ ಪಲ್ಲೆಕೆಲೆ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023 ರ ಭಾರತ-ಪಾಕಿಸ್ತಾನ ಪಂದ್ಯಾಟದಲ್ಲಿ ಪಾಕ್‌ ಮಾಜಿ ಆಟಗಾರ ವಸೀಮ್‌ ಅಕ್ರಮ್‌ ಜೊತೆಗೆ ಕಾಮೆಂಟರಿ ಬಾಕ್ಸ್‌ ಕುಳಿತು ಕಾಮೆಂಟರಿ ಮಾಡಿದ್ದಾರೆ.

ಮಾತ್ರವಲ್ಲ, ಪಾಕಿಸ್ತಾನದ ಬೌಲರ್‌ಗಳನ್ನು ಹೊಗಳಿದ ಅವರು, ಪಾಕ್‌ ಬೌಲರ್‌ಗಳ ಆಟವನ್ನು ನೋಡಲು ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.

 ಗಂಭೀರ್‌ ಇಬ್ಬಂದಿತನದ ನಡೆಗೆ ಟ್ವಿಟರ್‌ ಬಳಕೆದಾರರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಅವರ ವಿರುದ್ಧ ಟ್ರೋಲ್‌ ಮಾಡಿದ್ದಾರೆ.

“ಇದು ಬಿಜೆಪಿ ಸಂಸದ ಗೌತಮ್ ಗಂಭೀರ್. ಕೆಲವು ವಾರಗಳ ಹಿಂದೆ, ಭಾರತವು ಪಾಕಿಸ್ತಾನದೊಂದಿಗೆ ಆಡುವುದನ್ನು ಅವರು ತೀವ್ರವಾಗಿ ವಿರೋಧಿಸಿದ್ದರು. ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಅವರು ಹೇಳಿದ್ದರು. ಆದರೆ, ಇಂದು ಅವರು ಕಾಮೆಂಟರಿ ಬಾಕ್ಸ್‌ನಲ್ಲಿ ಪಾಕಿಸ್ತಾನಿ ವೇಗದ ಬೌಲರ್‌ಗಳ ಕಡೆಗೆ ವಿಪರೀತವಾಗಿ ಇಷ್ಟವನ್ನು ತೋರುತ್ತಿದ್ದಾರೆ. ಇಂದಿನ ಭಾರತದಲ್ಲಿರುವ ಅತ್ಯಂತ ನಾಚಿಕೆಯಿಲ್ಲದ ವ್ಯಕ್ತಿ” ಎಂದು ರೋಷನ್‌ ರೈ ಎಂಬವರು ಟ್ವೀಟ್‌ ಮಾಡಿದ್ದಾರೆ.

This is Gautam Gambhir, BJP MP.

A few weeks ago, he strongly objected to India playing Pakistan and said that India vs Pakistan match should be called off.

Today, he is seen orgasming to Pakistani fast bowlers in the commentary box.

The most shameless person in India today… pic.twitter.com/Q4Cks2uR7s

— Roshan Rai (@RoshanKrRaii) September 2, 2023

ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೋರ್ವ ನೆಟ್ಟಿಗ, “ಅವತ್ತು ಮಾತನಾಡಿರುವುದು ಬಿಜೆಪಿ ರಾಜಕಾರಣಿ ಗೌತಮ್‌ ಗಂಭೀರ್‌, ಇವತ್ತಿರುವುದು ಕ್ರಿಕೆಟಿಗ ಗಂಭಿರ್”‌ ಎಂದು ಟ್ರೋಲ್‌ ಮಾಡಿದ್ದಾರೆ.

ಇನ್ನು ಕೆಲವರು, ಗಂಭೀರ್ ಪಾಕ್‌ ಜೊತೆಗಿನ ಪಂದ್ಯ ರದ್ದು ಪಡಿಸಬೇಕು ಎಂದು ಕರೆ ನೀಡಿರುವುದರ ಹಿಂದೆ ರಾಜಕೀಯದ ಅಜೆಂಡಾ ಇತ್ತು. ಕಾಮೆಂಟರಿ ಮಾಡುವುದರ ಹಿಂದೆ ಕೇವಲ ದುಡ್ಡಿನ ಅಜೆಂಡಾ ಇದೆ ಎಂದು ಟೀಕಿಸಿದ್ದಾರೆ.   

On 12 August gambhir was Acting like bjp MP
Today he is acting like former cricketer #INDvPAK pic.twitter.com/VrVtdLfZHt

— Rehan Ashraf (@Rehanspeeks) September 2, 2023
Tags: asia cupBJPCricketGautam GambhirIndiaPakistan
Previous Post

ಸೌಜನ್ಯಾ ಕೊಲೆ ಪ್ರಕರಣ: ನಾಳೆಯ ಪ್ರತಿಭಟನೆ ರದ್ದಾಗಲಿಲ್ಲ: ತಿಮರೋಡಿ ಸ್ಪಷ್ಟನೆ

Next Post

ಅಂಕಣ | ತಮಿಳುನಾಡು: ಸುಧಾರಣಾವಾದಿ ಅಚ್ಚ ದ್ರಾವಿಡ ನೆಲ

Related Posts

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 
Uncategorized

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 

by Chetan
July 3, 2025
0

ಇಂದಿನಿಂದ ಜಮ್ಮು ಕಾಶ್ಮೀರದಲ್ಲಿ (Jammu Kashmir) ಅಮರನಾಥ ಯಾತ್ರೆ (Amaranatha yatra) ಆರಂಭವಾಗಲಿದೆ. ಈ ಯಾತ್ರೆಯ ಯಾತ್ರಾರ್ಥಿಗಳು ಕಾಶ್ಮೀರದ ಪಹಲ್ಗಾಮ್ (Pahalgam) ಮೂಲಕವೇ ಸಾಗಿ ಹೋಗಬೇಕಿದೆ. ಹೀಗಾಗಿ...

Read moreDetails
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ನೇರಪ್ರಸಾರ

June 7, 2025
ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

June 4, 2025
Next Post
ಬಂಗಾಳ ಮತ್ತು ಉತ್ತರ ಭಾರತದಲ್ಲಿ ಫುಲೆ, ಅಂಬೇಡ್ಕರ್, ಪೆರಿಯಾರ್‌ಗಳಂತಹ ನಾಯಕರೇಕೆ ಹುಟ್ಟಲಿಲ್ಲ?

ಅಂಕಣ | ತಮಿಳುನಾಡು: ಸುಧಾರಣಾವಾದಿ ಅಚ್ಚ ದ್ರಾವಿಡ ನೆಲ

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada