ಮನ್ಸೂರ್ ಅಲಿಖಾನ್(mansoor ali khan) ಉತ್ತಮ ಹಿನ್ನಲೆ ಹೊಂದಿದ್ದು, ರಾಜಕಾರಣಿ(politician), ಶಿಕ್ಷಣತಜ್ಞ(Educationist) ಮತ್ತು ಸಮುದಾಯದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಕಾರಣ, ಬೆಂಗಳೂರು ಕೇಂದ್ರ (Bangalore central) ಲೋಕಸಭಾ ಕ್ಷೇತ್ರದಲ್ಲಿ ಕಠಿಣ ಸವಾಲನ್ನು ಎದುರಿಸಲು ಅಖಾಡಕ್ಕಿಳಿದಿದ್ದಾರೆ. ಈ ಕಳೆದ 2009 ರಿಂದ ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಉಳಿಸಿಕೊಂಡಿರುವ ಬಿಜೆಪಿಯನ್ನು(BJP) ಸೋಲಿಸಿ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಮರ್ಥ ಅಭ್ಯರ್ಥಿ ಮನ್ಸೂರ್.

ಸಜ್ಜನ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಖಾನ್ ಅವರ ಹಿನ್ನಲೆ ನೋಡೋದಾದ್ರೆ, ಕೆಕೆ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್‌ನ (KK education and charitable trust) ಟ್ರಸ್ಟಿಯಾಗಿದ್ದಾರೆ. ಇದನ್ನು ಅವರ ತಂದೆ, ರಾಜ್ಯಸಭೆಯ ಮಾಜಿ ಉಪ ಅಧ್ಯಕ್ಷ ಕೆ ರೆಹಮಾನ್ ಖಾನ್ (K rehaman khan) ಸ್ಥಾಪಿಸಿದ್ದರು. ದೆಹಲಿ ಪಬ್ಲಿಕ್ ಸ್ಕೂಲ್ (Delhi public school) ಸ್ಥಾಪನೆಯೂ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಈ ಟ್ರಸ್ಟ್ ಮಹತ್ವದ ಕೊಡುಗೆ ನೀಡಿದೆ. ಮನ್ಸೂರ್ ಅಲಿ ಖಾನ್ ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka congress) ಪ್ರಮುಖ ಪಾತ್ರ ವಹಿಸಿದ್ದಾರೆ ಮಾತ್ರವಲ್ಲದೆ, ತೆಲಂಗಾಣದ ಎಐಸಿಸಿ (Telangana AICC) ಕಾರ್ಯದರ್ಶಿಯಾಗಿ 2023 ರಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿರುವ ಹೆಗ್ಗಳಿಕೆ ಕೂಡ ಅವರಿಗಿದೆ.

2009 ರಿಂದಲೂ ಕ್ಷೇತ್ರ ಬಿಜೆಪಿ(BJP) ಹಿಡಿತದಲ್ಲಿ ಇದೆಯಾದ್ರೂ , 2023ರ ವಿಧಾನಸಭೆ ಫಲಿತಾಂಶದಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚು ಮತಗಳನ್ನು ಪಡೆದಿದೆ. ಇದು ಮನ್ಸೂರ್ ಅಲಿ ಖಾನ್ (Mansoor ali khan)ಗೆ ದೊಡ್ಡ ಸಾಮರ್ಥ್ಯ ತಂದುಕೊಟ್ಟಿದೆ. ಮತ್ತೊಂದು ಕಡೆ ಸತತವಾಗಿ ೩ ಬಾರಿ ಬಿಜೆಪಿಯಿಂದ ಆಯ್ಕೆಯಾಗಿರುವ ಪಿ.ಸಿ.ಮೋಹನ್ (PC Mohan) ಕೇವಲ ಪ್ರಧಾನಿ ಮೋದಿ ಹೆಸರಲ್ಲಿ (PM modi) ಆಯ್ಕೆಯಾಗಿದ್ದರೆ ಹೊರತು 15 ವರ್ಷದಲ್ಲಿ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಆಗಿಲ್ಲ ಎಂಬ ಜನಾಭಿಪ್ರಾಯ ಕೂಡ ಮನ್ಸೂರ್ ಅಲಿ ಖಾನ್ ಗೆ ವರವಾಗಿ ಪರಿಣಮಿಸಬಹುದು.

ಜಾತಿ ಧರ್ಮದ ವಿಚಾರಗಳ ಮೇಲೆ ರಾಜಕಾರಣ ಮಾಡದೆ ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ಮೂಲಭೂತ ನಾಗರಿಕ ಸೌಕರ್ಯಗಳಿಗೆ ಆದ್ಯತೆ ನೀಡುವ ಭರವಸೆ ಮನ್ಸೂರ್ ಅವರಕ್ ಮೇಲಿದೆ. ಈ ಸಮಸ್ಯೆಗಳಿಗೆ ತಕ್ಷಣದ ಗಮನ ಹರಿಸಬೇಕು ಮತ್ತು ಬೆಂಗಳೂರು ಸೆಂಟ್ರಲ್ ಅನ್ನು ಮಾದರಿ ಲೋಕಸಭಾ ಕ್ಷೇತ್ರವನ್ನಾಗಿ ಪರಿವರ್ತಿಸಬೇಕು, ಏಕೆಂದರೆ ಇದು ನಗರದ ಪ್ರಮುಖ ಭಾಗ ಮಾತ್ರವಲ್ಲದೆ ಭಾರತದ ಐಟಿ ಹಬ್ ಮತ್ತು ಹೆಮ್ಮೆಯಾಗಿದೆ ಎಂಬ ಅಭಿಪ್ರಾಯ ಮತದಾರರಲ್ಲಿದ್ದು , ಇದೆಲ್ಲದಕ್ಕೂ ಸರಿ ಹೊಂದುವ ಹಾಗೆ ಅಳೆದು ತೂಗಿ ಹೈಕಮಾಂಡ್ ಮನ್ಸೂರ್ ಅಲಿ ಖಾನ್ ಗೆ ಮಣೆ ಹಾಕಿದೆ.