
ಕಾಂಗ್ರೆಸ್ ಪಕ್ಷಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಂದ ಭಾರೀ ಮುಜುಗರ ಉಂಟಾಗಿದೆ. ವಕ್ಫ್ ಆಸ್ತಿ ವಿಚಾದದ ಬಳಿಕ ಕರಿಯಾ ಕುಮಾರಸ್ವಾಮಿ ಎಂದಿದ್ದು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬವನ್ನು ಪೈಸೆ ಪೈಸೆ ಕೂಡಿಹಾಕಿ ಖರೀದಿ ಮಾಡ್ತೀವಿ ಅಂದಿದ್ದು, ಕಾಂಗ್ರೆಸ್ ನಾಯಕರಿಗೂ ಸಹಿಸಲಾರದ ವಿಚಾರ ಆಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುತ್ತಿರುವ ಸಚಿವ ಜಮೀರ್ ಅಹಮದ್ ಹೇಳಿಕೆಗಳ ವಿರುದ್ದ ತಿರುಗಿಬಿದ್ದಿದ್ದಾರೆ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು. ಸಚಿವ ಜಮೀರ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ ಪತ್ರ ಬರೆದಿದ್ದಾರೆ.
ಜಮೀರ್ ಅಹ್ಮದ್ ಖಾನ್ ಸಚಿವ ಸ್ಥಾನದ ಘನತೆ ಹಕ್ಕು ಬದ್ದತೆಯ ಜವಾಬ್ದಾರಿ ಅರಿಯದೆ ಮಾತನಾಡಿದ್ದಾರೆ. ಜಮೀರ್ ಅಮಾನವೀಯ ಹೇಳಿಕೆಗಳಿಂದ ವಿವಾದ ಉಂಟಾಗಿದೆ. ರಾಜ್ಯದಲ್ಲಿ ಕೆಟ್ಟ ವಾತಾವರಣ ಸೃಷ್ಟಿ ಆಗಿದೆ. ಚನ್ನಪಟ್ಟಣದಲ್ಲಿ ನೀಡಿದ ಹೇಳಿಕೆ ಪಕ್ಷದ ಮೇಲೆ ದುಷ್ಪರಿಣಾಮ ಬೀರಿರುವುದೂ ಸ್ಪಷ್ಟವಾಗಿದೆ ಎಂದು ದೂರಿದ್ದಾರೆ.

ರಾಜಕೀಯ ಬೌದ್ದಿಕತೆ ಕಳೆದುಕೊಂಡಿರುವ ಜಮೀರ್ ಅಹ್ಮದ್ ಅವರನ್ನು ಕಾಂಗ್ರೆಸ್ ಪಕ್ಷ ಹಾಗು ರಾಜ್ಯ ಸರ್ಕಾರ ಮುಖ್ಯ ವಾಹಿನಿಯಲ್ಲಿ ಬಿಂಬಿಸಬಾರದು. ಮುಸ್ಲಿಂ ಅಗ್ರಗಣ್ಯನಾಯಕ ಎನ್ನುವಂತೆ ಪಕ್ಷ ಪರಿಗಣಿಸಬಾರದು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಒತ್ತಾಯ ಮಾಡಿದ್ದಾರೆ.