ಬೆಂಗಳೂರಿನ (Bengaluru) ನಾಗರಿಕರು ಬಹಳ ದಿನಗಳಿಂದ ನಿರೀಕ್ಷಿಸುತ್ತಿರುವ ನಮ್ಮ ಮೆಟ್ರೋ (Namma metro) ಹಳದಿ ಮಾರ್ಗದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಬೆಂಗಳೂರಿನ ಆರ್.ವಿ.ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ಮಾರ್ಗದ 19.5 ಕಿಮೀ ಉದ್ದದ ಹಳದಿ ಮಾರ್ಗದ ಮೆಟ್ರೋ ಸಂಚಾರ ಲೋಕಾರ್ಪಣೆಯ ಹಿನ್ನಲೆಯಲ್ಲಿ ಆಗಸ್ಟ್ 10 ರಂದು ಬೆಂಗಳೂರಿಗೆ ನರೇಂದ್ರ ಮೋದಿ (Pm modi) ಆಗಮಿಸಲಿದ್ದಾರೆ.

ಆದ್ರೆ ಈ ಯೆಲ್ಲೋ ಲೇನ್ ಮೆಟ್ರೋ ಈಗಾಗಲೇ ಅತ್ಯಂತ ತಡವಾಗಿ ಲೋಕಾರ್ಪಣೆಯಾಗುತ್ತಿದೆ,ಈ ಮಧ್ಯೆ ಈಗ ಈ ವಿಚಾರದಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ಕೂಡ ಶುರುವಾಗಿದೆ. ಒಂದಡೆ, ಪ್ರಧಾನಿ ಮೋದಿ ಮೆಟ್ರೋ ಲೋಕಾರ್ಪಣೆ ಮಾಡೋದು ಕನ್ಸರ್ಮ್ ಆಗ್ತಿದ್ದಂತೆ ತೇಜಸ್ವಿ ಸೂರ್ಯ ಅಂಡ್ ಟೀಮ್ ಆಕ್ಟಿವ್ ಆಗಿದೆ.

ಆದ್ರೆ ಆಗಸ್ಟ್ 10ಕ್ಕೆ ಹಳದಿ ಮಾರ್ಗದ ಆರಂಭದ ಬಗ್ಗೆ ಬಿಎಂಆರ್ಸಿಎಲ್ ಆಗಲಿ ಅಥವಾ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಆಗಲಿ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ.ಆದ್ರೆ, ಆಗಸ್ಟ್ 15ಕ್ಕೆ ಲೋಕಾರ್ಪಣೆ ಮಾಡುವ ಆಲೋಚನೆಯಲ್ಲಿ ರಾಜ್ಯ ಸರ್ಕಾರ ಇತ್ತು ಎನ್ನಲಾಗಿದೆ.

ಆದ್ರೆ ರಾಜ್ಯ ಸರ್ಕಾರಕ್ಕಿಂತ ಮೊದಲೇ ಸಂಸದ ತೇಜಸ್ವಿ ಸೂರ್ಯ ಯೆಲ್ಲೋ ಲೈನ್ ಆರಂಭದ ಬಗ್ಗೆ ಘೋಷಣೆ ಮಾಡಿದ್ದು, ಹಲವು ರೀತಿಯ ಚರ್ಚೆಗೆ ಗ್ರಾಸವಾಗ್ತಿದೆ. ಯೆಲ್ಲೋ ಲೈನ್ ಮೆಟ್ರೋ ವಿಚಾರದಲ್ಲಿ, ಸಿಗಂದೂರು ಸೇತ್ಯವೆಯಂತೆ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗಿದ್ದು, ಬಿಎಂಆರ್‌ಸಿಎಲ್ ತಟಸ್ಥವಾಗಿದೆ.