ಬೆಂಗಳೂರು : ಕೇಂದ್ರ ಸರ್ಕಾರ(Central Government) ಇತ್ತೀಚಿನ ವರ್ಷಗಳಲ್ಲಿ ದೇಶದ ದಕ್ಷಿಣ ಭಾಗದಲ್ಲಿ ಹಿಂದಿ (Hindi) ಹೇರಿಕೆ ಮಾಡಲು ಮುಂದಾಗುತ್ತಿದೆ. ಇದಕ್ಕೆ ಬಹುತೇಕ ರಾಜ್ಯಗಳ ವಿರೋಧವೂ ಇದೆ. ಆದರೆ ಇದೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಹಿಂದಿ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ.

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಯೋಜನೆಗಳು ಹಾಗೂ ಕಾಯ್ದೆಗಳ ಹೆಸರು ಬದಲಾಯಿಸುವ ಕೆಲಸ ಮಾಡಿದೆ. ಅದರಂತೆ ಇದೀಗ ಮತ್ತೊಂದು ಪ್ರಮುಖ ಯೋಜನೆಯ ಹೆಸರು ಬದಲಾಯಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿದೆ. ಆದರೆ ಇದಕ್ಕೆ ವಿಪಕ್ಷಗಳು ತೀವು ವಿರೋಧ ವ್ಯಕ್ತಪಡಿಸಿವೆ.


ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗದ ಭರವಸೆಯಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾಯಿಸಲು ಮುಂದಾಗಿದೆ. ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ,2025ನ್ನು ಲೋಕಸಭೆಯಲ್ಲಿ ಮಂಡಿಸಿದೆ ಪ್ರಮುಖವಾಗಿ ಈ ಮಸೂದೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ 2025 (ಎಂಜಿಎನ್‌ಆರ್‌ಇಜಿಎ) ಬದಲಿಸಲುವ ಯೋಚನೆಯಿಂದ ಈ ನೂತನ ಹೆಸರನ್ನು ಮುನ್ನೆಲೆಗೆ ಕೇಂದ್ರ ಸರ್ಕಾರ ತಂದಿದೆ.

ಇದೇ ವಿಚಾರಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೇಂದ್ರ ಸರ್ಕಾರದ ಮಸೂದೆಯ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿವೆ. ಹಳೆಯ ಸಂಸತ್ ಭವನದ ಕಟ್ಟಡದ ಮೇಲೆ ನಿಂತು ಮೋದಿ ಸರ್ಕಾರದ ನಡೆಯನ್ನು ಖಂಡಿಸಿವೆ.

ಅಲ್ಲದೇ ಶಿಕ್ಷಣದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಯಲ್ಲಿ “ವಿಕ್ಷಿತ್ ಭಾರತ್ ಶಿಕ್ಷಾ ಅಧಿಷ್ಠಾನ” ಮಸೂದೆಯನ್ನು ಮಂಡಿಸಿದ್ದರು. ಅಲ್ಲದೆ ವಿಮಾ ಕಾನೂನುಗಳ ತಿದ್ದುಪಡಿಗಾಗಿ ಸಬ್ಕಾ ಬಿಮಾ, ಸಬ್ಕಿ ರಕ್ಷಾ ಮಸೂದೆ ಎಂಬ ಇನ್ನೊಂದು ಮಸೂದೆಯನ್ನು ಹೆಸರಿಸಿದೆ. ಹೀಗೆ ಹಲವು ಹೆಸರುಗಳನ್ನು ಬದಲಾವಣೆ ಮಾಡಿ ಹಿಂದಿ ಭಾಷೆಯನ್ನು ಹೆಚ್ಚು ಪಸರಿಸಲು ಮುಂದಾಗುತ್ತಿದೆ.








