ಪ್ರತಿಪಕ್ಷಗಳಿಗೆ ದೇಶಕ್ಕಿಂತ ತಮ್ಮ ರಾಜಕೀಯ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಹರ್ ಮೋಹನ್ ಸಿಂಗ್ ಯಾದವ್ ಅವರ 10ನೇ ಜಯಂತಿ ಅಂಗವಾಗಿ ನಡೆದ ವರ್ಚಯೂವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರಿ ಕಾರ್ಯಕ್ರಮಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳು ಸಂಸತ್ ಅಧಿವೇಶನದಲ್ಲಿ ಗದ್ಧಲ ಸೃಷ್ಟಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳು ಸರಕಾರದ ಕಾರ್ಯಕ್ರಮಗಳನ್ನು ವಿರೋಧಿಸುವ ಮೂಲಕ ದೇಶಕ್ಕಿಂತ ತಮ್ಮ ರಾಜಕೀಯ ಹಿತಾಸಕ್ತಿಯೇ ಎಂಬುದನ್ನು ತೋರಿಸಿಕೊಡುತ್ತಿವೆ. ತಾವು ಅಧಿಕಾರದಲ್ಲಿ ಇದ್ದಾಗ ತಾವೇ ನಿರ್ಧರಿಸಿದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಅವರಿಗೆ ಆಗಲಿಲ್ಲ. ಆದರೂ ಮತ್ತೊಬ್ಬರಿಂದ ಆಗುವಾಗ ಸಹಿಸಲು ಅವರಿಗೆ ಆಗುತ್ತಿಲ್ಲ ಎಂದು ಮೋದಿ ಹೇಳಿದರು.

ಸರಕಾರದ ಕಾರ್ಯಕ್ರಮ ಇಷ್ಟವಾಗಲಿಲ್ಲ ಎಂದು ವಿರೋಧಿಸುತ್ತಿವೆ. ಈ ರೀತಿ ವಿರೋಧ ವ್ಯಕ್ತಪಡಿಸುವುದು ಜನರಿಗೆ ಇಷ್ಟವಾಗುವುದಿಲ್ಲ ಎಂದು ಅವರು ಹೇಳಿದರು.
ಇತ್ತೀಚೆಗೆ ಪಕ್ಷದ ಸಿದ್ಧಾಂತ ಮತ್ತು ರಾಜಕೀಯ ಉದ್ದೇಶಗಳು ದೇಶದ ಹಿತಾಸಕ್ತಿಗಿಂತ ಮುಖ್ಯವಾಗಿರುವ ಟ್ರೆಂಡ್ ಸೃಷ್ಟಿಯಾಗುತ್ತಿವೆ ಎಂದು ಮೋದಿ ಅಭಿಪ್ರಾಯಪಟ್ಟರು.












