• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Opinions expressed by writers : ಸಿಎಂ ಅವರನ್ನ ಭೇಟಿಯಾದ ಸಾಹಿತಿಗಳು ಹಾಗೂ ಚಿಂತಕರು ವ್ಯಕ್ತಪಡಿಸಿದ ಅಭಿಪ್ರಾಯಗಳು..!

Any Mind by Any Mind
May 29, 2023
in Top Story, ಇತರೆ / Others, ಇದೀಗ, ರಾಜಕೀಯ
0
CM Siddaramaiah ; ದ್ವೇಷದ ರಾಜಕಾರಣವನ್ನು ಕೊನೆಗಾಣಿಸ್ತೀವಿ ;  ಕಾನೂನು ಕೈಗೆತ್ತಿಕೊಂಡು ಕೋಮು ಪುಂಡಾಟ ನಡೆಸುವವರಿಗೆ ತಕ್ಕ ಶಾಸ್ತಿ ; ಸಿಎಂ
Share on WhatsAppShare on FacebookShare on Telegram

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಗೆಲುವು ಕೋಮುವಾದದ ವಿರುದ್ಧದ ಐತಿಹಾಸಿಕ ಸಂಘರ್ಷ. ಹಿಂದಿನ ಸರ್ಕಾರ ಕೋಮುವಾದವನ್ನು ನಿರ್ಲಜ್ಜ ರೀತಿಯಲ್ಲಿ ಜಾರಿಗೆ ತರಲು ಮುಂದಾಗಿದ್ದು ನಿಜಕ್ಕೂ ಭಯ ಹುಟ್ಟಿಸುವಂತಿತ್ತು. ಆದರೆ ಇವರ ಪ್ರೊಪಗಾಂಡಾ ಅಜೆಂಡಾದಿಂದ ರೋಸಿ ಹೋದ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಇಂದು ಭೇಟಿಯಾದ ಸಾಹಿತಿಗಳು ಹಾಗೂ ಚಿಂತಕರು ಪಠ್ಯ ಪುಸ್ತಕದ ಬಗ್ಗೆ ಹಲವಾರು ರೀತಿಯ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.

ADVERTISEMENT

ಹೊಸ ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ

• ಈ ನಿಟ್ಟಿನಲ್ಲಿ ಸಂವಿಧಾನ ವಿರೋಧಿ, ಕೋಮುವಾದಿ ಪಠ್ಯಪುಸ್ತಕಕ್ಕೆ ಕೂಡಲೇ ತಿದ್ದುಪಡಿ ಮಾಡಿ, ಮಕ್ಕಳ ಮನಸಿನ ಮೇಲೆ ಬೀರುವ ದುಷ್ಪರಿಣಾಮವನ್ನು ತಡೆಯಬೇಕು. ಮುಂದಿನ ವರ್ಷದ ವೇಳೆಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕು.

• ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು.

• ಪ್ರೌಢಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ ವಿತರಣೆಯನ್ನು ಮುಂದುವರೆಸಬೇಕು. ಬೈಸಿಕಲ್‌ ವಿತರಣೆ ಯೋಜನೆಯನ್ನು ಮುಂದುವರೆಸಬೇಕು.

• ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ DERA ವನ್ನು ಸಕ್ರಿಯಗೊಳಿಸಬೇಕು.

• ರದ್ದಾಗಿರುವ ವಿದ್ಯಾರ್ಥಿವೇತನ ಯೋಜನೆ ಮರುಜಾರಿಯಾಗಬೇಕು.

• UUCMS ವ್ಯವಸ್ಥೆಯ ಮರುಪರಿಶೀಲನೆ ಮಾಡಬೇಕು.

• ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು. ಸಮ ಸಮಾಜಕ್ಕಾಗಿ ಸಮಾನ ಶಿಕ್ಷಣ ಆಶಯವನ್ನು ಸಾಕಾರಗೊಳಿಸಬೇಕು.

• ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ NEET ವ್ಯವಸ್ಥೆಯಿಂದ ಹೊರ ಬರುವ ಅಗತ್ಯವಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ಅನುಷ್ಠಾನ ಸಮರ್ಪಕವಾಗಿ ಆಗಬೇಕು.

• ವಿವಿಧ ಸಾಂಸ್ಕೃತಿಕ ಪ್ರತಿಷ್ಠಾನಗಳಲ್ಲಿ ಹೊಸ ಪ್ರತಿಭಾವಂತರಿಗೆ ಅವಕಾಶ ನೀಡಬೇಕು.

• ಗ್ರಂಥಾಲಯ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಪುಸ್ತಕ ಖರೀದಿ ಆಗಿಲ್ಲ. ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಬೇಕು.

• ಹೆಣ್ಣುಮಕ್ಕಳ ದೌರ್ಜನ್ಯ ಅಧ್ಯಯನ ಸಮಿತಿಯ ವರದಿಯ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಬೇಕು.

• ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ರಕ್ಷಣೆ ಮಾಡಲು ಮಸೂದೆ ಮಂಡಿಸಬೇಕು.

• ಹಿಜಾಬ್‌ ವಿವಾದದಿಂದಾಗಿ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಕುರಿತ ಸರ್ಕಾರಿ ಆದೇಶವನ್ನು ಪರಿಷ್ಕರಿಸಬೇಕು.

• ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕುರಿತ ಸರ್ಕಾರಿ ಆದೇಶವನ್ನು ಹಿಂಪಡೆಯಬೇಕು.

• ಎಸ್‌.ಸಿ.ಎಸ್‌.ಪಿ/ ಟಿ.ಎಸ್.ಪಿ. ಮೇಲ್ವಿಚಾರಣಾ ಸಮಿತಿ ಪ್ರತಿ ತಿಂಗಳೂ ಈ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ಸಮರ್ಪಕ ಅನುಷ್ಠಾನ ಖಾತರಿಪಡಿಸಬೇಕು.

• ಹಲವರು ಸಾಹಿತಿ, ಚಿಂತಕರಿಗೆ ನಿರಂತರವಾಗಿ ಬೆದರಿಕೆ ಪತ್ರಗಳು ಬರುತ್ತಿದ್ದು, ಭಯದ ವಾತಾವರಣ ನಿರ್ಮಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

• ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಹಾಗೂ ಅಕಾಡೆಮಿಕ್‌ ಕೌನ್ಸಿಲ್‌ ಗಳಲ್ಲಿ ನಿರ್ದಿಷ್ಟ ಸಮುದಾಯದ ಜನರೇ ನೇಮಕಗೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು.
ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳ ಪಠ್ಯಕ್ರಮಕ್ಕೆ ಪೂರಕವಾದ ಪುಸ್ತಕಗಳನ್ನಷ್ಟೇ ಖರೀದಿಸಲು ಕ್ರಮ ವಹಿಸಬೇಕು. ಕೆಲವೆಡೆ ಅಪ್ರಸ್ತುತ ಪುಸ್ತಕಗಳನ್ನು ಖರೀದಿಸಲಾಗುತ್ತಿದೆ.

• ಗ್ರಾಮೀಣ ಪ್ರದೇಶದ ಸಮುದಾಯ ಭವನಗಳಲ್ಲಿ ಸಂವಿಧಾನದ ಬಗ್ಗೆ, ಸಾಮರಸ್ಯದ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.

Tags: BJPBJP familybjpkarnatakaBreaking NewsbsbommaibsyediyurappacmsiddaramiahCongress PartyDCM DK ShivakumardcmmeetingKPCClatestnewsliterary writersliterary-writers for takinglivenews
Previous Post

CM Siddaramaiah ; ದ್ವೇಷದ ರಾಜಕಾರಣವನ್ನು ಕೊನೆಗಾಣಿಸ್ತೀವಿ ; ಕಾನೂನು ಕೈಗೆತ್ತಿಕೊಂಡು ಕೋಮು ಪುಂಡಾಟ ನಡೆಸುವವರಿಗೆ ತಕ್ಕ ಶಾಸ್ತಿ ; ಸಿಎಂ

Next Post

Accident near Kuruburu : ಟಿ.ನರಸೀಪುರದ ಕುರುಬೂರು ಬಳಿ ಅಪಘಾತ : ಚೆಲುವಾಂಭ ಆಸ್ಪತ್ರೆಗೆ ಸಚಿವರ ಭೇಟಿ

Related Posts

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?
Top Story

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

by ಪ್ರತಿಧ್ವನಿ
January 13, 2026
0

ಬಿಗ್ ಬಾಸ್ ಕನ್ನಡ ಸೀಸನ್ 12( Bigg Boss Kannada season 12) ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಚರ್ಚೆ ಜೋರಾಗಿದ್ದು, ಬಿಗ್ ಬಾಸ್ ಮನೆಯ ...

Read moreDetails
ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

January 12, 2026
Next Post
Accident near Kuruburu : ಟಿ.ನರಸೀಪುರದ ಕುರುಬೂರು ಬಳಿ ಅಪಘಾತ : ಚೆಲುವಾಂಭ ಆಸ್ಪತ್ರೆಗೆ ಸಚಿವರ ಭೇಟಿ

Accident near Kuruburu : ಟಿ.ನರಸೀಪುರದ ಕುರುಬೂರು ಬಳಿ ಅಪಘಾತ : ಚೆಲುವಾಂಭ ಆಸ್ಪತ್ರೆಗೆ ಸಚಿವರ ಭೇಟಿ

Please login to join discussion

Recent News

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?
Top Story

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

by ಪ್ರತಿಧ್ವನಿ
January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ
Top Story

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

by ಪ್ರತಿಧ್ವನಿ
January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!
Top Story

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

by ಪ್ರತಿಧ್ವನಿ
January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ
Top Story

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 12, 2026
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ
Top Story

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

by ಪ್ರತಿಧ್ವನಿ
January 12, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

January 13, 2026
ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!