ಹಾವೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಇದ್ದರೂ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ನಾಯಕರ ಮಾಸ್ಟರ್ ಪ್ಲ್ಯಾನ್ ವರ್ಕ್‌ಔಟ್ ಆಗಿದೆ. ಬಹುಮತ ಇದ್ದರೂ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಡದ ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡಿದ್ದಾರೆ.
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆಗೆ ಹೀನಾಯ ಸೋಲುಂಟಾಗಿದೆ. ಪಕ್ಷೇತರ ಅಭ್ಯರ್ಥಿಗಳಿಗೆ ಸಹಕಾರ ನೀಡಿದ ಬಿಜೆಪಿ, ರೆಸಾರ್ಟ್ ರಾಜಕೀಯದಿಂದ ಕಾಂಗ್ರೆಸ್ ಸೋಲಿಸಿದ್ದಾರೆ. ಕಾಂಗ್ರೆಸ್‌ನ 6 ಮಂದಿ ಸದಸ್ಯರಿಗೆ ಗಾಳ ಹಾಕಿದ್ದ ಬಿಜೆಪಿ ನಾಯಕರು ಪಕ್ಷೇತರ ಟೀಂ ಜೊತೆಗೆ ಅಧಿಕಾರ ಹಿಡಿಯುವಲ್ಲಿ ಸಕ್ಸಸ್ ಆಗಿದ್ದಾರೆ.
ಹಾವೇರಿ ನಗರಸಭೆಯಲ್ಲಿ ಒಟ್ಟು 31 ಸದಸ್ಯ ಬಲವಿದ್ದು, ಕಾಂಗ್ರೆಸ್‌ನ 15 ಮಂದಿ, BJP ಯ 9 ಜನ, ಪಕ್ಷೇತರರು 07 ಸದಸ್ಯರು ಆಯ್ಕೆಯಾಗಿದ್ದರು. ಪಕ್ಷೇತರ ಅಭ್ಯರ್ಥಿ ಶಶಿಕಲಾ ಮಾಳಗಿ 16 ಮತ ಪಡೆದು ನೂತನ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ್ರೆ ಪಕ್ಷೇತರ ಸದಸ್ಯರಾದ ಮಲ್ಲಿಕಾರ್ಜುನ ಸಾತೇನಹಳ್ಳಿ ಉಪಾಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ. ಸಂಖ್ಯಾಬಲವಿದ್ದರು ಹಣದ ಆಸೆಗೆ ಕಾಂಗ್ರೆಸ್‌ನ 6 ಸದಸ್ಯರು ಸೇಲ್ ಆಗಿದ್ದಾರೆ.
ಕಾಂಗ್ರೆಸ್ ನಾಯಕರು ಸೋಲುಂಡ ಬಳಿಕ ಪೆಚ್ಚು ಮೋರೆ ಹಾಕಿಕೊಂಡು ನಗರಸಭೆಯಿಂದ ಹೊರಟಿದ್ದಾರೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಸಿಎಂ ರಾಜಕೀಯ ಕಾರ್ಯದರ್ಶಿ ಸಲೀಂ ಅಹ್ಮದ್ ಹಾಗೂ ಜಿಲ್ಲಾಧ್ಯಕ್ಷ ಸಂಜೀವ್ ನೀರಲಗಿ. ಅತ್ತ ಗೆದ್ದ ಖುಷಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು.. ಮತ್ತೊಂದು ಸ್ಫೋಟಕ ರಹಸ್ಯ ಬಿಚ್ಚಿಟ್ಟಿದ್ದಾರೆ.
ಹಾವೇರಿ ನಗರಸಭೆ ಬಿಜೆಪಿ ತೆಕ್ಕೆಗೆ ಬಂದಿದೆ. ಹಾವೇರಿ ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುತ್ತೇವೆ. ಹಾವೇರಿ ನಗರಸಭೆಯಲ್ಲಿ ಆದ ಬದಲಾವಣೆ ರಾಜ್ಯ ಸರ್ಕಾರದಲ್ಲೂ ಆಗುತ್ತಾ..? ಅನ್ನೋ ಮಾಧ್ಯಮಗಳ ಪ್ರಶ್ನೆಗೆ ಕರ್ನಾಟಕದಲ್ಲಿ ರಾಜಕೀಯ ಒಂದು ಪರಿವರ್ತನೆ ಕಾಲ ನಡೆಯುತ್ತಿದೆ. ಎಲ್ಲಾ ಹಂತದಲ್ಲೂ ಬದಲಾವಣೆ ಆಗುತ್ತೆ. ರಾಜ್ಯದ ಚುಕ್ಕಾಣಿ ಬದಲಾವಣೆ ಆದರೂ ಆಶ್ಚರ್ಯ ಏನು ಇಲ್ಲ. ಮುಂಬರುವ ದಿನಗಳಲ್ಲಿ ರಾಜ್ಯದ ಚುಕ್ಕಾಣಿ ಬದಲಾವಣೆ ಆಗಲಿದೆ ಎಂದಿದ್ದಾರೆ.