• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕುಮಾರಸ್ವಾಮಿಗೆ ಓಪನ್‌ ಚಾಲೆಂಜ್‌‌.. ನಾ ರೆಡಿ.ನೀ ರೆಡಿನಾ..?:ಸಚಿವ ಚಲುವರಾಯಸ್ವಾಮಿ

ಪ್ರತಿಧ್ವನಿ by ಪ್ರತಿಧ್ವನಿ
November 18, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
ಕುಮಾರಸ್ವಾಮಿಗೆ ಓಪನ್‌ ಚಾಲೆಂಜ್‌‌.. ನಾ ರೆಡಿ.ನೀ ರೆಡಿನಾ..?:ಸಚಿವ ಚಲುವರಾಯಸ್ವಾಮಿ
Share on WhatsAppShare on FacebookShare on Telegram

ಕುಮಾರಸ್ವಾಮಿ ಬಾಯಿಗೆ ಬಂದ ಹಾಗೆ ಮಾತನಾಡಿದ್ರೆ ಕೇಳಿಸಿಕೊಳ್ಳೋಕೆ ನಾವು ತಯಾರಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.ಸ್ನೇಹಿತರನ್ನ ಬಿಟ್ಟು ಇವಾಗ ಜೆಡಿಎಸ್ ಪಕ್ಷ ಕುಟುಂಬದ ಪಕ್ಷವಾಗಿದೆ.ಇತಿಹಾಸ ಚರ್ಚೆ ಅವಶ್ಯಕತೆ ಇದ್ರೆ ಆಹ್ವಾನ ಕೊಡ್ತೇನೆ ವೇದಿಕೆ ಸಿದ್ದಪಡಿಸಲಿ ಎಂದು ಕೇಂದ್ರ ಸಚಿವ ಹೆಚ್​ಡಿಕೆಗೆ ಬಹಿರಂಗ ಸವಾಲ್ ಹಾಕಿದ್ದಾರೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ.

ADVERTISEMENT

ಮದ್ದೂರಿನ ಹೊಸಗಾವಿ ಗ್ರಾಮದಲ್ಲಿ ಮಾತನಾಡಿರುವ ಸಚಿವ ಎನ್.ಚಲುವರಾಯಸ್ವಾಮಿ, ಚನ್ನಪಟ್ಟಣ ಚುನಾವಣೆ ಚೆನ್ನಾಗಿ ಆಗಿದೆ. ಜೆಡಿಎಸ್‌ನವರು ನಾವು ಗೆಲ್ತೇವೆ ಅಂತಾರೆ. ಯೋಗೇಶ್ವರ್ ಗೆದ್ದೆ ಗೆಲ್ತಾರೆ, ಇನ್ನೆರಡು ದಿನ ಫಲಿತಾಂಶ ಬರುತ್ತೆ. ಅಲ್ಲಿವರೆಗೂ ಸ್ವಲ್ಪ ತಾಳ್ಮೆಯಿಂದ ಇರೋಣ ಎಂದಿದ್ದಾರೆ. ಇನ್ನು ಕುಮಾರಸ್ವಾಮಿ ಬಗ್ಗೆ ಸಚಿವ ಜಮೀರ್ ಹೇಳಿಕೆ ವಿಚಾರದ ಬಗ್ಗೆ ಯೋಗೇಶ್ವರ್ ಅಭ್ಯರ್ಥಿಯಾಗಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ.ಜಮೀರ್ ಹೇಳಿರುವುದು ತಪ್ಪೊ ಸರಿಯೋ ಅದರ ಎಫೆಕ್ಟ್ ಆಗಲ್ಲ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ, ದೇಶ ಆಳಿದ ಪ್ರಧಾನಿ ಮಗ ಬಾಯಿಗೆ, ನಾಲಿಗೆ ಮೇಲೆ ಹಿಡಿತ ಇಲ್ಲದೆ ಮಾತನಾಡ್ತಾರೆ. ನಾನು ಉತ್ತರ ಕೊಡೋದು ಸೂಕ್ತ ಅಲ್ಲ. ಮಾತನಾಡೋರೆಲ್ಲ ಮಾತಿನಿಂದ ದೊಡ್ಡವರಾಗಲು ಸಾಧ್ಯವಿಲ್ಲ.ನಡಾವಳಿಕೆಯಿಂದ ದೊಡ್ಡವರಾಗೋದು. ನಾನು ಶಾಶ್ವತವಾಗಿ ಮಂತ್ರಿಯಲ್ಲ, ಜನರು ತಾತ್ಕಾಲಿಕವಾಗಿ ಅಧಿಕಾರ ಕೊಟ್ಟಿದ್ದಾರೆ.ನಾನು ಮಂತ್ರಿ ಅಂತ ಬಾಯಿಗೆ ಬಂದಾಗೆ ಮಾತನಾಡೋಕ್ಕಾಗುತ್ತಾ? ಕುಮಾರಸ್ವಾಮಿ ಅವರಿಗೆ ಅಸೆಂಬ್ಲಿಯಲ್ಲೆ ಉತ್ತರ ಕೊಟ್ಟಿದ್ದೇನೆ.ಇತಿಹಾಸ ಚರ್ಚೆ ಮಾಡಬೇಕಿದ್ರೆ ಒಂದು ಟೈಮ್ ನಿಗದಿ ಮಾಡಿ ಅಂತ ರಿಕ್ವೆಸ್ಟ್‌ ಮಾಡಿದ್ದೆ.ಇವಾಗ ಅವರು ಪಾರ್ಲಿಮೆಂಟ್‌ಗೆ ಹೋಗಿದ್ದಾರೆ ನಾನು ಅಸೆಂಬ್ಲಿಯಲ್ಲಿದ್ದೇನೆ.ಅವರು ಇಲ್ಲಿಗೆ ಬರಲು ಆಗಲ್ಲ, ನಾನು ಪಾರ್ಲಿಮೆಂಟ್‌ಗೆ ಹೋಗಲು ಆಗಲ್ಲ.

ಮಾಧ್ಯಮ, ಸಾರ್ವಜನಿಕರ ಮುಂದೆ ನನ್ನ ನಾಲಿಗೆ ಹರಿಬಿಡಲ್ಲ. ನನ್ನ ಆಸ್ತಿ ಅವರಿಗೆ ಕೊಟ್ಟಿಲ್ಲ, ಅವರ ಆಸ್ತಿ ನನಗೆ ಕೊಟ್ಟಿಲ್ಲ. ನನ್ನ ಅವರ ನಡುವೆ ಕಮಿಟ್ಮೆಂಟ್ ಇಲ್ಲ, ರಾಜಕೀಯ ಅಷ್ಟೆ. ಯಾರ ಇತಿಹಾಸವನ್ನ ಬುಕ್‌ನಲ್ಲಿ ಪ್ರಿಂಟ್ ಮಾಡಬೇಕು. ಅಸೆಂಬ್ಲಿಯಲ್ಲಿ ಚರ್ಚೆಯಾದರೆ ಮುಂದಿನ ಪೀಳಿಗೆಗೆ ಉಪಯೋಗ. ಕುಮಾರಸ್ವಾಮಿ ಬಾಯಿಗೆ ಬಂದಾಗೆ ಮಾತನಾಡಿದ್ರೆ ಕೇಳಿಸಿಕೊಳ್ಳೋಕೆ ತಯಾರಿಲ್ಲ. ನಾನು ಲಘುವಾಗಿ ಮಾತನಾಡಿದ್ರೆ..? ನನ್ನ ಕ್ಷೇತ್ರದ ಜನರ ಗೌರವ ಕೊಟ್ಟು ಎರಡು ಸಲ ಸೋಲಿಸಿ 6 ಬಾರಿ ಗೆಲ್ಲಿಸಿದ್ದಾರೆ. ಕುಮಾರಸ್ವಾಮಿ ಜೊತೆ ಚರ್ಚೆ ಮಾಡಬೇಕು ಅಂದ್ರೆ ಹೇಳಿ, ನನ್ನ ಐದು ಜನ ಸ್ನೇಹಿತರನ್ನ ಕರೆದುಕೊಂಡು ಬರ್ತಿನಿ. ಎದುರುಗಡೆ ಕುಳಿತು ಚರ್ಚೆ ಮಾಡೋಣ. ಯಾರು ಹೊಲಸು, ಕಚಾಡ, ಕೊಚ್ಚೆ ಎಲ್ಲವನ್ನೂ ಚರ್ಚೆ ಮಾಡೋಣ ಎಂದಿದ್ದಾರೆ.

20 ವರ್ಷ ಇಬ್ಬರು ಜೊತೆಯಲ್ಲಿ ರಾಜಕಾರಣ ಮಾಡಿದ್ದೇವೆ. ಯಾಕೆ ಪಕ್ಷ ಬಿಟ್ಟೋ ಹೇಗೆ ನಡೆದುಕೊಂಡ್ರು ಎದುರುಗಡೆ ಉತ್ತರ ಕೊಡ್ತೇನೆ. ಈ ಎಲ್ಲಾ ಸ್ನೇಹಿತರಿಂದ ಮುಖ್ಯಮಂತ್ರಿ ಆಗಿದ್ದೇನೆ ಅಂತಾನು ಮಾತನಾಡಿದ್ದಾರೆ. ಕರಾಳ ದಿನ ಅಂತನಾ? ಅಷ್ಟು ದಿನ ನಾವು ಕೊಳಚೆ ಆಗಿದ್ವಾ? 20 ವರ್ಷ ಕೊಳಚೆ ಒಳಗೆ ಹೇಗಿದ್ರಂತೆ? ಇತಿಹಾಸ ದೊಡ್ಡ ಪುರಾಣ, ಅವರ ಎದುರುಗಡೆ ಹೇಳ್ತೇನೆ. 25 ಪರ್ಸೆಂಟ್‌ ಇದೆ , ನಾನು ಬಾಲು, ಎಲ್ಲರೂ ಹೋಗ್ತೇವೆ. ದೇವೇಗೌಡ್ರು, ರೇವಣ್ಣ ಸಿಕ್ಕಾಗ ಇವತ್ತು ಸಹ ನನ್ನ ಜೊತೆ ಮಾತನಾಡ್ತಾರೆ.

ಕುಮಾರಸ್ವಾಮಿ ಅವರದು ಬೇಕಾದಷ್ಟು ಇತಿಹಾಸ ಇದೆ ಅಸೆಂಬ್ಲಿಯಲ್ಲಿ ಚರ್ಚೆಯಾದ್ರೆ ಸೂಕ್ತ.ಕೇಂದ್ರ ಮಂತ್ರಿಯಾಗಿ ಉನ್ನತ ಮಟ್ಟಕ್ಕೆ ಹೋಗಿದ್ದಾರೆ.ಚರ್ಚೆ ಅವಶ್ಯಕತೆ ಇದ್ರೆ ಆಹ್ವಾನ ಕೊಡ್ತೇನೆ ವೇದಿಕೆ ಮಾಡಲಿ. ಎಲ್ಲಾದರೂ ಚರ್ಚೆಗೆ ಬರ್ತೇನೆ.ನಾನು ಹಿಟ್ ಅಂಡ್ ರನ್ ತರ ಎಷ್ಟು ಬೇಕಾದ್ರ ಹೇಳಬಹುದು.ಇತಿಹಾಸ ಎಲ್ಲವೂ ನನ್ನ ತಲೆಯಲ್ಲೆ ಇದೆ, ಬುಕ್ ಬರೆಯಬಲ್ಲೆ. ಕ್ಷೇತ್ರದ ಮತದಾರರ ಗೌರವ ಕಾಪಾಡುವುದು ನನ್ನ ಧರ್ಮ.ಕುಮಾರಸ್ವಾಮಿ ಅವರ ಗೌರವ ಕಳೆಯೋಕೆ ನಾನು ರೆಡಿ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

Tags: are you ready..?I don't run my tongueMinister ChaluvarayaswamyMy propertyOpen challenge to Kumaraswamy..Union minister HD Kumaraswamy
Previous Post

ಜಯನಗರಕ್ಕೆ ಅನುದಾನ ಕೊಟ್ಟಿಲ್ಲ..ಡಿಕೆ ಶಿವಕುಮಾರ್‌ ವಿರುದ್ಧ ಸಭೆ

Next Post

ನಮ್ಮ ಶಾಸಕರಿಗೆ 50 ಕೋಟಿಯಲ್ಲ..100 ಕೋಟಿ ಆಫರ್ ಬಂದಿದೆ ! ಶಾಸಕ ಗಣಿಗ ರವಿ ಸ್ಫೋಟಕ ಹೇಳಿಕೆ !

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
ನಮ್ಮ ಶಾಸಕರಿಗೆ 50 ಕೋಟಿಯಲ್ಲ..100 ಕೋಟಿ ಆಫರ್ ಬಂದಿದೆ ! ಶಾಸಕ ಗಣಿಗ ರವಿ ಸ್ಫೋಟಕ ಹೇಳಿಕೆ !

ನಮ್ಮ ಶಾಸಕರಿಗೆ 50 ಕೋಟಿಯಲ್ಲ..100 ಕೋಟಿ ಆಫರ್ ಬಂದಿದೆ ! ಶಾಸಕ ಗಣಿಗ ರವಿ ಸ್ಫೋಟಕ ಹೇಳಿಕೆ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada