ಬಿಪಿಎಲ್ ಕಾರ್ಡ್ ರದ್ದು ಬಗ್ಗೆ ರಾಜ್ಯಾದ್ಯಂತ ಆಕ್ರೋಶ ಹೆಚ್ಚಾಗ್ತಿದೆ. ರೇಷನ್ ಕಾರ್ಡ್ ರದ್ದು ವಿಚಾರದಲ್ಲಿ ಯಾರೂ ಗಾಬರಿ ಬೀಳುವ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೇಂದ್ರದಿಂದ ಕೆಲವು ನಿಯಮಗಳು ಇರುತ್ತವೆ. ಅದರಂತೆ ಪರಿಶೀಲನೆ ಮಾಡ್ತಿದ್ದಾರೆ. ನಮ್ಮ ಸರ್ಕಾರ ಇರೋದೇ ಬಡವರಿಗಾಗಿ. ಕಾರ್ಡ್ನಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿರಬಹುದು. ಇದಕ್ಕೆ ಎಲ್ಲರೂ ಸಹಕಾರ ಕೊಡಬೇಕು ಎಂದಿದ್ದಾರೆ ಡಿಸಿಎಂ.
ಸದಾಶಿವನಗರದಲ್ಲಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಬಡವರ ರೇಷನ್ ಕಾರ್ಡ್ ಕಟ್ ಆಗಲ್ಲ. ಅವರಿಗೆ ಸಿಗದಿದ್ರೆ ಕೊಡುವ ಕೆಲಸ ಆಗುತ್ತೆ. ಬೇರೆ ರಾಜ್ಯಗಳಲ್ಲಿ ಶೇಕಡ 4೦ ರಷ್ಟು ಕಾರ್ಡ್ಗಳಿವೆ. ನಮ್ಮಲ್ಲಿ ಶೇಕಡಾ 80ರಷ್ಟು ಕಾರ್ಡ್ಗಳು ಇವೆ. ಯಾರು ತೆರಿಗೆ ಕಟ್ತಾರೆ ಅವರ ಕಾರ್ಡ್ ಕಟ್ ಆಗುತ್ತೆ. ಕಾರ್ಡ್ ತಿದ್ದುಪಡಿಗೆ ಗ್ಯಾರಂಟಿ ಯೋಜನೆಗೆ ಸಂಬಂಧ ಅಲ್ಲ ಅಂತ ಎಂ.ಬಿ.ಪಾಟೀಲ್ ಹೇಳಿದ್ದಾರೆ.
BPL ರಾದ್ದಾಂತ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಅನರ್ಹರ ಕಾರ್ಡ್ಗಳನ್ನು ಮಾತ್ರ ರದ್ದು ಮಾಡಿ ಅಂತ ಹೇಳಲಾಗಿದೆ. ಕೆಲವೊಂದು ಲೋಪಗಳಾಗಿರಬಹುದು, ಇದರ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಧಿಕಾರಿಗಳು ಲೋಪಗಳನ್ನು ಮಾಡಿದ್ರೆ, ಅನರ್ಹ ಕಾರ್ಡ್ಗಳು ಮಾತ್ರ ನಿಯಮಾನುಸಾರ ಪರಿಷ್ಕರಿಸಲಾಗುತ್ತೆ ಅಂತ ಹೇಳಿದ್ದಾರೆ.