ದೇಶಾದ್ಯಂತ ಸಂಚಲನ ಮೂಡಿಸಿದ ಚಲಿಸುವ ರೈಲಿನಲ್ಲಿ ಆರ್ಪಿಎಫ್ ( RPF ) ಕಾನ್ಸ್ಟೆಬಲ್ ನಡೆಸಿದ ಗುಂಡಿನ ದಾಳಿ ಮತ್ತು ಹರ್ಯಾಣದಲ್ಲಿನ (Haryana) ರಾಜ್ಯದಲ್ಲಿ ನಡೆದ ಕೋಮು ಸಂಘರ್ಷ ( communal violence ) ಬಳಿಕ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಆಡಳಿತಾರೂಢ ಬಿಜೆಪಿ ( BJP ) ಸರ್ಕಾರದ ( Government ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈ ಕುರಿತು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ( Social media ) ಟ್ವಿಟ್ ಮಾಡಿದ್ದು, ಪ್ರೀತಿಯಿಂದ ಮಾತ್ರ ಈ ಬೆಂಕಿಯನ್ನು ನಂದಿಸಲು ಸಾಧ್ಯ ಎಂದು ಬರೆದುಕೊಂಡಿದ್ದಾರೆ.
ಇದೀಗ ರಾಹುಲ್ ಗಾಂಧಿ ಟ್ವಿಟ್ ( Twit ) ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಈ ಟ್ವಿಟ್ನ್ನು ನೋಡಿದ್ದಾರೆ. ಸಾವಿರಾರು ಮಂದಿ ರೀಟ್ವಿಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ; ಸೌಜನ್ಯ ಹತ್ಯೆ ಪ್ರಕರಣ | ನ್ಯಾಯ ಸಿಗುವವರೆಗೆ ಮಂಜುನಾಥನ ದರ್ಶನ ಇಲ್ಲ ಎಂದ ನಟ ದುನಿಯಾ ವಿಜಯ್
ಈ ಕುರಿತು ಸೋಶಿಯಲ್ ಮಿಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ಬಿಜೆಪಿ, ಮಾಧ್ಯಮಗಳು ಮತ್ತು ಅವರೊಂದಿಗೆ ನಿಂತಿರುವ ಶಕ್ತಿಗಳು ದೇಶದಾದ್ಯಂತ ದ್ವೇಷದ ಸೀಮೆಎಣ್ಣೆಯನ್ನು ಹರಡಿವೆ. ಪ್ರೀತಿಯಿಂದ ಮಾತ್ರ ದೇಶದಲ್ಲಿ ಈ ದ್ವೇಷದ ಬೆಂಕಿಯನ್ನು ನಂದಿಸಲು ಸಾಧ್ಯ ಎಂದಿದ್ದಾರೆ

ಕೋಮುಗಲಭೆ ಮತ್ತು ಆರ್ಪಿಎಫ್ ಕಾನ್ಸ್ಟೆಬಲ್ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರ ಹತ್ಯೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ, ಭಾರತದಲ್ಲಿ ಒಂದಲ್ಲ ಒಂದು ರೀತಿಯಾದ ಹೀನಾಯ ಪರಿಸ್ಥಿತಿ ತಲೆದೂರಿದ್ದು, ಈ ಕುರಿತಾಗಿ ಈಗ ರಾಹುಲ್ ಗಾಂಧಿ ಟ್ವಿಟ್ ಭಾರೀ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.