• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಉಕ್ರೇನ್ ಬಿಕ್ಕಟ್ಟು | ಭಾರತ ಮಾತ್ರ ತನ್ನ ನಾಗರಿಕರನ್ನು ಮರಳಿ ಕರೆತರಲು ಕ್ರಮ ತೆಗೆದುಕೊಳ್ಳುತ್ತಿದೆ : ಯೋಗಿ ಆದಿತ್ಯನಾಥ್

Any Mind by Any Mind
March 9, 2022
in ದೇಶ
0
ಉಕ್ರೇನ್ ಬಿಕ್ಕಟ್ಟು | ಭಾರತ ಮಾತ್ರ ತನ್ನ ನಾಗರಿಕರನ್ನು ಮರಳಿ ಕರೆತರಲು ಕ್ರಮ ತೆಗೆದುಕೊಳ್ಳುತ್ತಿದೆ : ಯೋಗಿ ಆದಿತ್ಯನಾಥ್
Share on WhatsAppShare on FacebookShare on Telegram

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಉಕ್ರೇನ್ನಿಂದ ಹಿಂದಿರುಗಿದ ಗೋರಖಾಪುರದ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು ಮತ್ತು ಭಾರತ ಮಾತ್ರ ಯುದ್ಧ ಪೀಡಿತ ದೇಶದಿಂದ ತನ್ನ ನಾಗರಿಕರನ್ನು ಮರಳಿ ಕರೆತರಲು ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ರಷ್ಯಾದ ಸೇನಾ ದಾಳಿಯಿಂದಾಗಿ ಫೆಬ್ರವರಿ 24 ರಿಂದ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮತ್ತು ಪೋಲೆಂಡ್ಗೆ ದಾವಿಸಿ ನಂತರ ಅವರನ್ನು ವಿಮಾನದಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ.

ಇತರ ದೇಶಗಳ ವಿದ್ಯಾರ್ಥಿಗಳು ತಮ್ಮದೇ ಆದ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಆದರೆ “ಭಾರತ ಮಾತ್ರ ಅವರ ನಿವಾಸಿಗಳಿಗೆ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿದೆ.” “ಈ ಸೌಲಭ್ಯವು ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿತ್ತು. ನಿಮ್ಮೊಂದಿಗೆ ಓದುತ್ತಿರುವ ಇತರ ದೇಶಗಳ ವಿದ್ಯಾರ್ಥಿಗಳು ದೇವರ ದಯೆಯಿಂದ ತಮ್ಮಷ್ಟಕ್ಕೆ ಉಳಿದಿರುವುದನ್ನು ನೀವು ನೋಡಿರಬೇಕು. ಅವರ ಸರ್ಕಾರಗಳು ಕರೆತರುವ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು.

ರೊಮೇನಿಯಾ, ಹಂಗೇರಿ ಮತ್ತು ಪೋಲೆಂಡ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಬಾಂಧವ್ಯದಿಂದಾಗಿ ಎಲ್ಲಿಯೂ ಯಾವುದೇ ಸಮಸ್ಯೆ ಉಂಟಾಗಿಲ್ಲ, ಈ ದೇಶಗಳ ಗಡಿಯಲ್ಲಿ ಭಾರತದ ನಾಗರಿಕರಿಗೆ ಸಿಗುತ್ತಿದ್ದ ಸೌಲಭ್ಯಗಳು ಬೇರೆ ರಾಷ್ಟ್ರಗಳ ಜನರಿಗೆ ಸಿಗುತ್ತಿಲ್ಲ ಎಂದು ಆದಿತ್ಯನಾಥ್ ಹೇಳಿದರು. ,” ಎಂದು ಮುಖ್ಯಮಂತ್ರಿ ಹೇಳಿದರು.

ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ತಕ್ಷಣ, ಪ್ರಧಾನಿ ಮೋದಿ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸಭೆ ನಡೆಸಿದರು ಎಂದು ಮುಖ್ಯಮಂತ್ರಿ ಹೇಳಿದರು.

“ಉತ್ತರ ಪ್ರದೇಶ ಸರ್ಕಾರವು ನೋಡಲ್ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಉಕ್ರೇನ್ನಲ್ಲಿ ಓದುತ್ತಿರುವ ರಾಜ್ಯದ ಎಲ್ಲಾ ಜನರ ಮಾಹಿತಿಯನ್ನು ಸಂಗ್ರಹಿಸಿದೆ. ಪ್ರಧಾನಿ ಮೋದಿ ಅವರೇ ಆಸಕ್ತಿ ವಹಿಸಿ ನಾಲ್ವರು ಕೇಂದ್ರ ಸಚಿವರನ್ನು ಭಾರತಕ್ಕೆ ಕರೆತರಲು ಕಳುಹಿಸಿದ್ದಾರೆ” ಎಂದು ಅವರು ಹೇಳಿದರು.

ಉತ್ತರ ಪ್ರದೇಶದ ಒಟ್ಟು 2,290 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಓದುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಅವರಲ್ಲಿ 2078 ಮಂದಿಯನ್ನು ವಾಪಸ್ ಕರೆತರಲಾಗಿದೆ. ಉಳಿದಿರುವವರನ್ನು ಕರೆತರಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ಗೋರಖ್ಪುರದ 74 ವಿದ್ಯಾರ್ಥಿಗಳಲ್ಲಿ 70 ಮಂದಿಯನ್ನು ವಾಪಸ್ ಕರೆತರಲಾಗಿದೆ. ಉಳಿದ ನಾಲ್ವರನ್ನು ಸಹ ಕರೆತರಲಾಗುತ್ತಿದೆ,’’ ಎಂದುದ್ದಾರೆ.

ಯುದ್ಧವು ಎಷ್ಟು ದಿನಗಳವರೆಗೆ ಇರುತ್ತದೆ ಎಂಬುದರ ಕುರಿತು ಏನನ್ನೂ ಹೇಳಲಾಗುವುದಿಲ್ಲ ಆದರೆ ಉಕ್ರೇನ್ನಿಂದ ಹಿಂದಿರುಗಿದ ವಿದ್ಯಾರ್ಥಿಗಳು ಇಲ್ಲಿ ತಮ್ಮ ಕೋರ್ಸ್ಗಳಿಗೆ ತಯಾರಿ ನಡೆಸುವುದನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

Tags: BJPCongress PartyCovid 19ಉಕ್ರೇನ್‌ಉಕ್ರೇನ್ಉಕ್ರೇನ್ - ರಷ್ಯಾಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕೀಉಕ್ರೇನ್ ಗಡಿ ದಾಟಿಉಕ್ರೇನ್ ಬಿಕ್ಕಟ್ಟುಉಕ್ರೇನ್ ಮೇಲೆ ರಷ್ಯಾ ದಾಳಿಉಕ್ರೇನ್-ರಷ್ಯಾಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿರಷ್ಯಾ - ಉಕ್ರೇನ್ ಬಿಕ್ಕಟ್ಟುರಷ್ಯಾ ಉಕ್ರೇನ್‌ ಸಮರರಷ್ಯಾ ಮತ್ತು ಉಕ್ರೇನ್ಸಿದ್ದರಾಮಯ್ಯ
Previous Post

ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ : ಪಾರ್ಥೀವ ಶರೀರ ತರಿಸಲು ಪ್ರಧಾನಿ ಮೋದಿಗೆ ಪತ್ರ

Next Post

ರೈತರಿಗೆ ಸಿಹಿ ಸುದ್ದಿ : ಮಾರ್ಚ್ 12ರಿಂದ ರೈತರ ಮನೆ ಬಾಗಿಲಿಗೆ ದಾಖಲೆ : ಸಚಿವ ಆರ್. ಅಶೋಕ್

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
ದಳಪತಿ ವಿಜಯ್ ರ‍್ಯಾಲಿಯಲ್ಲಿ ಮತ್ತೊಂದು ದುರಂತ: ಹೀಟ್‌ಸ್ಟ್ರೋಕ್‌ದಿಂದ ವ್ಯಕ್ತಿ ಸಾ**

ದಳಪತಿ ವಿಜಯ್ ರ‍್ಯಾಲಿಯಲ್ಲಿ ಮತ್ತೊಂದು ದುರಂತ: ಹೀಟ್‌ಸ್ಟ್ರೋಕ್‌ದಿಂದ ವ್ಯಕ್ತಿ ಸಾ**

February 13, 2026
ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

February 13, 2026
Next Post
ರೈತರಿಗೆ ಸಿಹಿ ಸುದ್ದಿ : ಮಾರ್ಚ್ 12ರಿಂದ ರೈತರ ಮನೆ ಬಾಗಿಲಿಗೆ ದಾಖಲೆ : ಸಚಿವ ಆರ್. ಅಶೋಕ್

ರೈತರಿಗೆ ಸಿಹಿ ಸುದ್ದಿ : ಮಾರ್ಚ್ 12ರಿಂದ ರೈತರ ಮನೆ ಬಾಗಿಲಿಗೆ ದಾಖಲೆ : ಸಚಿವ ಆರ್. ಅಶೋಕ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada