• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, July 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಆನ್ಲೈನ್ ಜೂಜಿಗೆ ಜಾಹಿರಾತು: ಸ್ಟಾರ್ ನಟರ ವಿರುದ್ಧ ಪ್ರಶ್ನೆಯೆತ್ತಿದ ಚೇತನ್

by
September 7, 2021
in ಕರ್ನಾಟಕ
0
ಆನ್ಲೈನ್ ಜೂಜಿಗೆ ಜಾಹಿರಾತು: ಸ್ಟಾರ್ ನಟರ ವಿರುದ್ಧ ಪ್ರಶ್ನೆಯೆತ್ತಿದ ಚೇತನ್
Share on WhatsAppShare on FacebookShare on Telegram

ಸಕ್ರಿಯ ಚಳವಳಿಗಳಲ್ಲಿ ಪಾಲ್ಗೊಳ್ಳುವ ನಟ ಚೇತನ್‌ ಅಹಿಂಸಾ, ತಮಗೆ ತಪ್ಪು ಎಂದು ಅನಿಸಿದ್ದನ್ನು ನೇರವಾಗಿ ಹೇಳುತ್ತಾ ಬಂದವರು. ಸಾಮಾನ್ಯವಾಗಿ ನಟರು ಚಳವಳಿಗಳಿಂದ, ಸಕ್ರಿಯ ರಾಜಕಾರಣವನ್ನು ಪ್ರಶ್ನಿಸುವುದರಿಂದ ದೂರವೇ ಉಳಿಯುತ್ತಾರೆ. ತಮ್ಮ ಕೆರಿಯರ್‌ ಹಾಳಾಗುವ ಭಯವು ಅವರನ್ನು ಕಾಡುತ್ತಿರುತ್ತದೆ. ಆದರೆ ನಟ ಚೇತನ್‌, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಸಾಮಾಜಿಕ ಜವಾಬ್ದಾರಿಯನ್ನು ಎಲ್ಲೂ ಬಿಟ್ಟುಕೊಟ್ಟವರಲ್ಲ. ಯಾವುದೇ ಮುಲಾಜಿಗೆ ಒಳಗಾಗದೆ ಚಿತ್ರರಂಗದ ಪ್ರಭಾವಿಗಳನ್ನು ಎದುರಿಸಿದವರು.

ತಮ್ಮ ಫೈರ್‌ ಸಂಸ್ಥೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಮಾನತೆ ಮೂಡಿಸಲು ಪ್ರಯತ್ನಿಸುತ್ತಿರುವ ಚೇತನ್‌, ಸ್ಯಾಂಡಲ್‌ವುಡ್‌ನಲ್ಲಿರುವ ಹುಳುಕುಗಳ ಕಡೆಗೂ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದ ವಿರುದ್ಧ ಡ್ರಗ್‌ ಮಾಫಿಯಾದ ಆರೋಪ ಬರುತ್ತಿರುವ ಹಿನ್ನಲೆಯಲ್ಲಿ ಚೇತನ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಪ್ರಸ್ತುತವಾಗಿ ಎಲ್ಲರ ಗಮನ ಮಾದಕವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲನಚಿತ್ರ ಸಿಬ್ಬಂದಿ ಮತ್ತು ನಟರನ್ನು ಬಹಿರಂಗಪಡಿಸುವುದರ ಮೇಲಿದೆ…

ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ/ಪಾನ್ ಮಸಾಲಾ, ಜೂಜು (ರಮ್ಮಿ), ಇನ್ನು ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ‘ಸ್ಟಾರ್ಸ್’ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಇವರು ಸಾಮಾಜಿಕ ದುಷ್ಕೃತ್ಯಗಳ ‘ರಾಯಭಾರಿಗಳಲ್ಲವೇ’?” ಎಂದು ಚೇತನ್‌ ಪ್ರಶ್ನಿಸಿದ್ದಾರೆ.

ಆನ್‌ಲೈನ್‌ ಜೂಜು ಜಾಹಿರಾತಿನಲ್ಲಿ ಕನ್ನಡ ಸೇರಿದಂತೆ ಭಾರತ ಚಿತ್ರರಂಗದ ದಿಗ್ಗಜ ನಟ, ನಟಿಯರು ನಟಿಸುತ್ತಿದ್ದಾರೆ. ಇದು ಅವರ ಅಭಿಮಾನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಹಾಗಾಗಿ ನಟರು ಸಾಮಾಜಿಕ ಕಳಕಳಿಯಿಂದ ಇಂತಹ ಜಾಹಿರಾತುಗಳಿಂದ ದೂರವಿರಬೇಕೆಂದು ಆಗ್ರಹಿಸಿ ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಆಗ್ರಹಿಸಿದ್ದರು.

pic.twitter.com/Z4dTha54hQ

— Chetan Kumar / ಚೇತನ್ (@ChetanAhimsa) August 30, 2020

ADVERTISEMENT

ಸುದೀಪ್‌, ಪ್ರಕಾಶ್‌ ರಾಜ್‌, ಬಾಹುಬಲಿಯ ಖ್ಯಾತಿಯ ರಾಣಾ ದಗ್ಗುಬಾಟಿ ಮೊದಲಾದ ಖ್ಯಾತ ನಟರು ಆನ್‌ಲೈನ್‌ ಜೂಜಿನ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಈ ಹಿಂದೆ ಸೋಡಾದ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.

ನಮ್ಮೊಂದಿಗೆ ಇಲ್ಲದವರ ವಿರುದ್ಧ ಕೆಸರೆರಚುವುದನ್ನು ನಾನು ಖಂಡಿಸುತ್ತೇನೆ- ಚೇತನ್‌

ಡ್ರಗ್‌ ಮಾಫಿಯಾದ ಕುರಿತಂತೆ ವದಂತಿಗಳು ಹಬ್ಬುತ್ತಿದ್ದ ಹಿನ್ನಲೆಯಲ್ಲಿ ಇಂದ್ರಜಿತ್‌ ಲಂಕೇಶ್‌ ಇತ್ತೀಚೆಗೆ ಮೃತಪಟ್ಟ ನಟನ ಮರಣೋತ್ತರ ಪರೀಕ್ಷೆ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದರು. ಇತ್ತೀಚೆಗೆ ಮೃತಪಟ್ಟ ಯುವ ನಟ ಚಿರು, ಹಾಗಾಗಿ ಚಿರು ಅವರ ವಿರುದ್ಧವೇ ಆರೋಪ ಮಾಡಲಾಗುತ್ತಿದೆ ಎಂದು ಇಂದ್ರಜಿತ್‌ ವಿರುದ್ಧ ಅಪಸ್ವರಗಳು ಎದ್ದಿದ್ದವು.

ಇದನ್ನು ಖಂಡಿಸಿರುವ ಚೇತನ್‌ ನಮಗೆ ಬೇಕಾಗಿರುವುದು ಮಾದಕ ವಸ್ತುವಿನ ಜಾಗೃತಿ ಅಭಿಯಾನ, ಪುನರ್ವಸತಿ ಕಾರ್ಯಕ್ರಮಗಳು, ಸರ್ಕಾರದ ಉತ್ತಮ ನೀತಿಗಳು, ಮತ್ತು ಸರಿಯಾದ ತನಿಖೆಗಳು. ಬೇಡವಾದದ್ದು: ಮಸಿ ಬಳಿಯುವುದು/ಉದ್ರೇಕಕಾರಿ ಹೇಳಿಕೆಗಳು ಎಂದು ಹೇಳಿದ್ದಾರೆ. ಅಲ್ಲದೆ ಕನ್ನಡ ಚಿತ್ರರಂಗದ ಯಾವುದೇ ಸಾಮಾಜಿಕ ಅಭ್ಯಾಸಗಳ ಬಗ್ಗೆ ಗೊತ್ತಿಲ್ಲದ ನನಗೆ ನಮ್ಮ ನಡುವೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಾಚಾಟ ಮಾಡುತ್ತಿರುವುದರ ಬಗ್ಗೆ ದುಃಖವಿದೆ. ನಾವು ಯಾವುದೇ ಆರೋಪಗಳನ್ನು ಹೋರಿಸಿದರೂ ಅದನ್ನು ಸಮರ್ಥಿಸಲು ಅಥವಾ ಉತ್ತರಿಸಲು ಆ ಧ್ವನಿಯೇ ಇಲ್ಲದಿರುವ ಸಮಯದಲ್ಲಿ ಅವರ ಮೇಲೆ ಕೆಸರು ಎರಚುವುದನ್ನು ನಾನು ಖಂಡಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.

Tags: ಕನ್ನಡ ಚಿತ್ರರಂಗಚೇತನ್‌ ಅಹಿಂಸಾನಟ ಚೇತನ್‌
Previous Post

ಜನರ ವಿಶ್ವಾಸ ಗಳಿಸುವ ಪಾರದರ್ಶಕ ವ್ಯವಸ್ಥೆ ಬರದೇ ಕರೋನಾಕ್ಕೆ ಕಡಿವಾಣ ಸಾಧ್ಯವಿಲ್ಲ!

Next Post

ಮೈತ್ರಿ ಸರ್ಕಾರ ಉರುಳಿಸಲು ಡ್ರಗ್ ಮಾಫಿಯಾ ಹಣ: ಸಚಿವ ಸುಧಾಕರ್ ಪ್ರತಿಕ್ರಿಯೆ

Related Posts

AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?
Top Story

AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

by ಪ್ರತಿಧ್ವನಿ
July 14, 2026
0

ಬೆಂಗಳೂರು: ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಆರಂಭಿಸುವುದಾಗಿ ಸಿಎಂ ಡಿ.ಕೆ ಶಿವಕುಮಾರ್ ಘೋಷಿಸಿದರು. https://youtu.be/_88MGrTJXb0?si=TMbaKMg2Dn5lzJUR ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ...

Read moreDetails
FIFA World Cup 2026: ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗಾಗಿ ಸರ್ಕಾರದಿಂದ ಗುಡ್ ನ್ಯೂಸ್!

FIFA World Cup 2026: ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗಾಗಿ ಸರ್ಕಾರದಿಂದ ಗುಡ್ ನ್ಯೂಸ್!

July 14, 2026
H.D Deve Gowda:ಬಿಡದಿ ಟೌನ್​​ಶಿಪ್​​ ಯೋಜನೆ ಕೈಬಿಡುವಂತೆ ಸಿಎಂಗೆ ದೇವೇಗೌಡರ ಪತ್ರ: ಹೋರಾಟದ ಎಚ್ಚರಿಕೆ!

H.D Deve Gowda:ಬಿಡದಿ ಟೌನ್​​ಶಿಪ್​​ ಯೋಜನೆ ಕೈಬಿಡುವಂತೆ ಸಿಎಂಗೆ ದೇವೇಗೌಡರ ಪತ್ರ: ಹೋರಾಟದ ಎಚ್ಚರಿಕೆ!

July 14, 2026
Bidadi Township: ಬಿಡದಿ ಟೌನ್‌ಶಿಪ್‌ ವಿವಾದ: 20ಕ್ಕೂ ಹೆಚ್ಚು ರೈತರ ವಿರುದ್ಧ FIR

Bidadi Township: ಬಿಡದಿ ಟೌನ್‌ಶಿಪ್‌ ವಿವಾದ: 20ಕ್ಕೂ ಹೆಚ್ಚು ರೈತರ ವಿರುದ್ಧ FIR

July 14, 2026
ದುರಂತದ ಮಧ್ಯೆಯೂ ರಾಜಕೀಯ! ವಯನಾಡ್‌ನಿಂದ ಮಣಿಪುರದವರೆಗೆ ವಾಗ್ಯುದ್ಧ

ದುರಂತದ ಮಧ್ಯೆಯೂ ರಾಜಕೀಯ! ವಯನಾಡ್‌ನಿಂದ ಮಣಿಪುರದವರೆಗೆ ವಾಗ್ಯುದ್ಧ

July 14, 2026
Next Post
ಮೈತ್ರಿ ಸರ್ಕಾರ ಉರುಳಿಸಲು ಡ್ರಗ್ ಮಾಫಿಯಾ ಹಣ: ಸಚಿವ ಸುಧಾಕರ್ ಪ್ರತಿಕ್ರಿಯೆ

ಮೈತ್ರಿ ಸರ್ಕಾರ ಉರುಳಿಸಲು ಡ್ರಗ್ ಮಾಫಿಯಾ ಹಣ: ಸಚಿವ ಸುಧಾಕರ್ ಪ್ರತಿಕ್ರಿಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada