ಈ ಜೀವ ವೈವಿಧ್ಯದ ಜಗತ್ತಿನಲ್ಲಿ ನಾನಾ ರೀತಿಯ ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತವೆ ಅದರಲ್ಲೂ ಇಡೀ ಸೌರಮಂಡಲದಲ್ಲಿ ಬದುಕಲು ಯೋಗ್ಯವಾದಂತಹ ಗ್ರಹ ಜೀವಿಗಳಿಗೆ ಉಗಮವಾಗಲು ಸಹಕಾರಿಯದಂತಹ ಗ್ರಹ ಅಂದ್ರೆ ಈ ಭೂಮಿ ಮಾತ್ರ. ಇವತ್ತು ಈ ಭೂಮಿಯ ಮೇಲೆ ನಾನಾ ತರಹದ ಜೀವಸಂಕುಲಗಳು ನೆಲೆಯನ್ನ ಕಂಡುಕೊಂಡಿವೆ.
ಇವತ್ತು ಈ ಜಗತ್ತಿನಲ್ಲಿ ಮನುಷ್ಯರೂ ಸೇರಿದ ಹಾಗೆ ನಾನಾ ಬಗೆಯ ಜೀವಸಂಕುಲಗಳು ಈ ಪ್ರಕೃತಿಯ ನಿಯಮಕ್ಕೆ ತಕ್ಕಂತೆ ದೈಹಿಕ ರಚನೆಯನ್ನ, ವಿವಿಧ ಅಂಗಗಳನ್ನು ಕೂಡ ಪಡೆದಿರುತ್ತವೆ. ಕೆಲವೊಮ್ಮೆ ಈ ಪ್ರಕೃತಿ ಸೃಷ್ಟಿಸುವ ವಿಸ್ಮಯಗಳು ಜೀವಸಂಕುಲದ ವೈವಿಧ್ಯತೆಯ ಎಂಥಹದ್ದು ಅನ್ನೋದನ್ನ ಸಾಬೀತು ಮಾಡುವುದರ ಜೊತೆಗೆ, ಇಡೀ ಜೀವ ಸಂಕುಲದಲ್ಲಿ ಬುದ್ದಿಜೀವಿಯಾಗಿರುವ ಮಾನವನನ್ನ ಅಚ್ಚರಿಗೆ ದೂಡುತ್ತೆ. ಇದೀಗ ಇಂತಹದೇ ಅಚ್ಚರಿಗೆ ಇಡೀ ಮಾನವ ಸಂಕುಲವೇ ಒಳಗಾಗಿದೆ ಈ ಹಿಂದೆ ನೀವು ಎರಡು ತಲೆಯ ಹಾವು, ಮೂರು ಕೊಂಬಿನ ಹಸು, ಮೂರು ಕಣ್ಣುಗಳಿರುವ ಎತ್ತು, ಅಷ್ಟೇ ಯಾಕೆ ಎರಡು ತಲೆಗಳು ಇರುವ ಮನುಷ್ಯರ ಬಗ್ಗೆ ಕೂಡ ನೀವು ಕೇಳಿರುತ್ತೀರಿ. ಇಂತಹದೇ ಘಟನೆಗೆ ಇದೀಗ ಕೇರಳ ಸಾಕ್ಷಿಯಾಗಿ ನಿಂತಿದೆ
ಹೌದು.. ಕೇರಳದಲ್ಲಿ ಎರಡು ಮುಖ ಹಾಗೂ ಮೂರು ಕಣ್ಣುಗಳಿರುವ ವಿಚಿತ್ರ ಕುರಿಯೊಂದು ಜನಿಸಿದ್ದು, ಜನ ಸಮಾನ್ಯರು ಅಚ್ಚರಿಗೆ ಒಳಗಾಗಿದ್ದಾರೆ. ಕುರಿ ಮರಿಗೆ ಎರಡು ಮುಖ ಹಾಗೂ ಮೂರು ಕಣ್ಣುಗಳಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸಿರೊದಂತು ಸುಳ್ಳಲ್ಲ. ಅಷ್ಟಕ್ಕೂ ಈ ಘಟನೆ ನಡೆದಿರೋದು, ಕೇರಳದ ಕೆಲಕಂನ ಮನಯಪರಂಬು ಎಂಬಲ್ಲಿ, ಕುರಿಯೊಂದು ಈ ವಿಚಿತ್ರವಾದ ಕುರಿ ಮರಿಗೆ ಜನ್ಮ ನೀಡಿರುವ ಸುದ್ದಿತಿಳಿತಾ ಇದ್ದ ಹಾಗೆ ಸಾಕಷ್ಟು ಮಂದಿ ಈ ಕುರಿಯನ್ನ ನೋಡೋದಕ್ಕೆ ಮುಗಿ ಬಿದ್ದಿದ್ದಾರೆ..
ಒಟ್ಟಾರೆಯಾಗಿ ಇದೀಗ ಕೇರಳದ ಅತ್ಯಂತ ಈ ವಿಚಿತ್ರ ಕುರಿಮರಿಯ ವಿಚಾರವೇ ಬಹುದೊಡ್ಡ ಮಟ್ಟಿಗೆ ಚರ್ಚೆಗೆ ಕಾರಣವಾಗಿದ್ದು ಸಾಕಷ್ಟು ಜನ ಆರೋಗ್ಯ ತಜ್ಞರು ಮತ್ತು ಜೀವ ವಿಜ್ಞಾನಿಗಳು ವಿವಿಧ ರೀತಿಯಾದಂತ ಕಾರಣಗಳನ್ನ ನೀಡುತ್ತಿದ್ದು ಇದು ಅಪರೂಪದ ಪ್ರಕರಣವಾದರೂ, ಇತ್ತೀಚಿನ ದಿನಮಾನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ ಅಂತ ಹೇಳ್ತಾ ಇದ್ದಾರೆ