• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನಿಗದಿತ ವೇಳೆಗೆ ಚುನಾವಣೆ ನಡೆಸಲು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಂದ ಆಗ್ರಹ

Any Mind by Any Mind
December 30, 2021
in ದೇಶ, ರಾಜಕೀಯ
0
ನಿಗದಿತ ವೇಳೆಗೆ ಚುನಾವಣೆ ನಡೆಸಲು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಂದ ಆಗ್ರಹ
Share on WhatsAppShare on FacebookShare on Telegram

ದೇಶದಲ್ಲಿ ದಿನದಿಂದ ದಿನಕ್ಕ ಹೆಚ್ಚುತ್ತಿರುವ ಕೋವಿಡ್ ಮತ್ತು ಓಮಿಕ್ರಾನ್ ರೂಪಾಂತರಿ ಪ್ರಕರಣಗಳು ಮೂರನೇ ಅಲೆಯ ಮುನ್ಸೂಚನೆಯನ್ನು ನೀಡಿವೆ. ಈಗಷ್ಟೇ ಜನಜೀವನ ಸಹಜ ಸ್ಥಿತಿಗೆ ಬರುತ್ತಿದ್ದು ಆರ್ಥಿಕ ಪರಿಸ್ಥಿ ಕೂಡ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ. ಈ ಮಧ್ಯೆ ದೇಶದಲ್ಲಿ ಪಂಚರಾಜ್ಯ ಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳು ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದಂತೆ ಕಾಣುತ್ತಿವೆ.

ADVERTISEMENT

ರಾಜಕೀಯ ಪಕ್ಷಗಳು ನಡೆಸುವ ಸಮಾವೇಶಗಳು ಕೋವಿಡ್ ಸೂಪರ್ ಸ್ಪ್ರೆಡರ್ ಆಗಿ ಪರಿಣಮಿಸಲಿವೆ. ಈ ಮಧ್ಯೆ ಅಲಹಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಚುನಾವಣೆಗಳನ್ನು ಒಂದೆರಡು ತಿಂಗಳುಗಳ ಕಾಲ ಮುಂದೂಡುವಂತೆ ಮನವಿ ಮಾಡಿದ್ದರು. ಚುನಾವಣೆ ನಡೆಯುವ ರಾಜ್ಯಗಳ ಸ್ಥಿತಿಗತಿಯ ಬಗ್ಗೆ ಚುನಾವಣಾ ಆಯೋಗ ಪರಿಶೀಲನೆ ನಡೆಸಿ ದಿನಾಂಕಗಳನ್ನು ಘೋಷಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.

ಆದರೆ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಹೆಚ್ಚು ಒಲವು ಹೊಂದಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಬುಧವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಮುಖ್ಯ ಚುನಾವಣಾಧಿಕಾರಿ ಸುಶೀಲ್ ಚಂದ್ರ ಮತ್ತಿತ್ತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ರಾಷ್ಟ್ರೀಯ ಪಕ್ಷಗಳ ಹಾಗೂ ಪ್ರಾದೇಶಿಕ ಪಕ್ಷಗಳ ಮುಖಂಡರು ನಿಗದಿತ ಸಮಯದಲ್ಲಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿವೆ.

ಈ ಸಂಬಂಧ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ, BSP ಹಾಗೂ RLD ಪಕ್ಷದ ಪ್ರತಿನಿಧಿಗಳು ಕೋವಿಡ್ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಚುನಾವಣೆ ನಡೆಸುವಂತೆ ಆಯೋಗಕ್ಕೆ ಸಲಹೆಯನ್ನ ನೀಡಿವೆ. ಈ ಸಂಬಂಧ ಆಯೋಗವು ಪಂಚರಾಜ್ಯಗಳ ಚುನಾವಣೆ ದಿನಾಂಕವನ್ನು ಜನವರಿಯಲ್ಲಿ ಘೋಷಿಸಬಹುದು ಎಂದು ಅಂದಾಜಿಸಲಾಗಿದೆ.

ಸಭೆ ನಂತರ ಮುಖ್ಯ ಚುನಾವಣಾಧಿಕಾರಿ ಸುಶೀಲ್ ಚಂದ್ರ ಮಾತನಾಡಿ, ʻʻಚುನಾವಣೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಮರುಕ್ಷಣದಿಂದ ನಮ್ಮ ಕರ್ತವ್ಯ ಶುರುವಾಗುತ್ತದೆ. ಅಲ್ಲಿಯವರೆಗೂ ಕೋವಿಡ್ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆʼʼ ಎಂದು ತಿಳಿಸಿದ್ದಾರೆ.

ಹಾಲಿ ನಡೆಯುತ್ತಿರುವ ಚುನಾವಣಾ ರ್ಯಾಲಿಗಳಲ್ಲಿ ಕೋವಿಡ್ ಮಾರ್ಗಸೂಚಿಗಳು ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತಿರುವ ಬಗ್ಗೆ ಆಯೋಗವು ಕ್ರಮವನ್ನು ಜರುಗಿಸಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಚಂದ್ರ “ಈ ಬಗ್ಗೆ ನಾವು ಈಗಾಗಲೇ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಯೊಂದಿಗೆ ಸಭೆಯನ್ನ ನಡೆಸಿದ್ದೇವೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ನಾವು ಆಯೋಗದ ಕಡೆಯಿಂದ ನಾವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದೇವೆ” ಎಂದು ಉತ್ತರಿಸಿದ್ದಾರೆ.

ಸದ್ಯ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶದಲ್ಲಿ ನಿಗದಿತ ಸಮಯಕ್ಕೆ ಚುನಾವಣೆಗಳನ್ನು ನಡೆಸಲು ಆಗ್ರಹಗಳು ಕೇಳಿ ಬಂದಿರುವ ಕಾರಣ ನಾವು ಈ ಬಗ್ಗೆ ಪರಿಶೀಲಿಸಲಿದ್ದೇವೆ ಮತ್ತು ಚುನಾವಣೆ ನಡೆಯುವ ಇನ್ನು ನಾಲ್ಕು ರಾಜ್ಯಗಳಲ್ಲು ಸಹ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದು ಚಂದ್ರ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಸಭೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಗಿಸಿರುವುದಾಗಿ ಗೋಚರಿಸುತ್ತಿವೆ. ಕಠಿಣ ನಿಯಮಗಳನ್ನು ಜಾರಿಗೆ ತರುವಂತೆ ಮನವಿ ಮಾಡಿವೆ ಎಂದು ತಿಳಿಸಿದ್ದಾರೆ.

ಚುನಾವಣೆ ಮುಗಿದ ನಂತರ ಸೋಂಕು ಹೆಚ್ಚಾಗಿ ಹರಡದಂತೆ ಕ್ರಮಗಳನ್ನು ವಹಿಸಲಾಗುವುದು. ಮತದಾನದ ಅವಧಿಯನ್ನ ಒಂದು ಗಂಟೆ ಹೆಚ್ಚಿಸಲಾಗುವುದು. ಮತದಾನ ನಡೆಯುವ ಪ್ರದೇಶದ ಸುತ್ತಮುತ್ತ ಕೋವಿಡ್ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಪಾಲಿಸಲಾಗುವುದು ಮತ್ತು ಹೆಚ್ಚುವರಿ ಬೂತ್ ಗಳನ್ನು ಸ್ಥಾಪಿಸಲಾಗುವುದು . ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸುಶೀಲ್ ಚಂದ್ರ ವಿವರಿಸಿದ್ದಾರೆ.

Tags: BJPBSPCongress PartyCovid 19RLDಕಾಂಗ್ರೆಸ್ಕೋವಿಡ್-19ಪ್ರಾದೇಶಿಕ ಪಕ್ಷಬಿಜೆಪಿರಾಷ್ಟ್ರೀಯಸಮಾಜವಾದಿ
Previous Post

ಕಾಂಗ್ರೆಸ್ ಪಾದಯಾತ್ರೆಯಿಂದ ಮೇಕೆದಾಟು ಬಿಕ್ಕಟ್ಟು ಮತ್ತಷ್ಟು ಜಟಿಲ : ಹೆಚ್.ಡಿ.ಕುಮಾರಸ್ವಾಮಿ

Next Post

ಮುಂದಕ್ಕೆ ಹೋಗಲ್ಲ ರಾಜಮೌಳಿಯ ಸಿನಿಮಾ : RRR ರಿಲೀಸ್ ಡೇಟ್ ಪಕ್ಕಾ

Related Posts

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?
ರಾಜಕೀಯ

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

by ಪ್ರತಿಧ್ವನಿ
April 27, 2026
0

ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೋರಾಟ ಕೇವಲ ಪಕ್ಷಗಳ ನಡುವಿನ ಪೈಪೋಟಿಯಲ್ಲ, ಪ್ರಾದೇಶಿಕ ಅಸ್ಮಿತೆ ಮತ್ತು ರಾಷ್ಟ್ರೀಯ ರಾಜಕೀಯದ ನಡುವಿನ ಸಂಘರ್ಷವಾಗಿ ರೂಪುಗೊಂಡಿದೆ. ಇದೇ ಹಿನ್ನೆಲೆಯಲ್ಲಿ...

Read moreDetails
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಬಂಗಾಳದಲ್ಲಿ ದೀದಿ ಎಷ್ಟು ಪವರ್ ಫುಲ್ ಲೇಡಿ..? ಮೋದಿ ಮಣಿಸುತ್ತಾಳಾ ಈ ಗಟ್ಟಿಗಿತ್ತಿ..?

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

April 26, 2026
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
Next Post
ಮುಂದಕ್ಕೆ ಹೋಗಲ್ಲ ರಾಜಮೌಳಿಯ ಸಿನಿಮಾ : RRR ರಿಲೀಸ್ ಡೇಟ್ ಪಕ್ಕಾ

ಮುಂದಕ್ಕೆ ಹೋಗಲ್ಲ ರಾಜಮೌಳಿಯ ಸಿನಿಮಾ : RRR ರಿಲೀಸ್ ಡೇಟ್ ಪಕ್ಕಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada