ಆನಗೋಡು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಮೇಲೆ ಓಮ್ನಿ ಕಾರೊಂದು ಹೊತ್ತಿ ಉರಿದಿರುವಂತಹ ಘಟನೆ ನಡೆದಿದ್ದು, ರಾಶಿ ಮಾಡಲು ಹಾಕಿದ್ದ ರಾಗಿ ಹುಲ್ಲಿನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಿರಾಣಿ ಅಂಗಡಿಯ ಸಾಮಾನುಗಳನ್ನ ಕೊಂಡೊಯ್ಯುತ್ತಿದ್ದ ಫಜಲ್ ಅಹ್ಮದ್ ಎಂಬುವವರಿಗೆ ಸೇರಿದ ವಾಹನವಿದಾಗಿದ್ದು, ಬೆಳಗ್ಗೆ ಸಾಮಾನು ಕೊಂಡೊಯ್ಯ ಬೇಕಾದರೆ ದಾವಣಗೆರೆ ಜಿಲ್ಲೆಯ ಆನಗೋಡು ಬಳಿಯ ಸರ್ವಿಸ್ ರಸ್ತೆಯಲ್ಲಿ ಹಾಕಾಲಾಗಿದ್ದ ಹುಲ್ಲಿನ ರಾಶಿಯ ಮೇಲೆ ವಾಹನ ಹತ್ತಿದೆ ಈವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ವಾಹನ ಸುಟ್ಟು ಕರಕಲಾಗಿದೆ.

ಚಾಲಕ ಮಾತ್ರ ಸಮಯ ಪ್ರಜ್ಞೆ ಮೆರೆದಿದ್ದು, ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬರುತ್ತಿದ್ದಂತೆ ವಾಹನ ಬಿಟ್ಟು ಹೊರ ಜಿಗಿದಿದ್ದಾನೆ. ಹೀಗಾಗಿ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾಗಿ ತಿಳಿದು ಬಂದಿದೆ.
ಇನ್ನು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂಧಿ ಬರುವುದರೊಳಗಾಗಿ ಎಲ್ಲವೂ ಸುಟ್ಟು ಭಸ್ಮವಾಗಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.