ಒಮಿಕ್ರೋನ್ನ ರೂಪಾಂತರಿ ಉಪತಳಿ ಎಕ್ಸ್ಇ ಇದೇ ಮೊದಲ ಬಾರಿ ವ್ಯಕ್ತಿಯೊಬ್ಬರಲ್ಲಿ ದೃಢಪಟ್ಟಿದೆ ಎಂದು ಇನ್ಸಾಕಾಗ್ ಮಂಗಳವಾರ ಖಚಿತಪಡಿಸಿದೆ.
ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಎಕ್ಸ್ಇ ಉಪತಳಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆದರೆ ಅದು ದೃಢಪಟ್ಟಿರಲಿಲ್ಲ. ಇದೀಗ ಮೊದಲ ಬಾರಿ ಎಕ್ಸ್ಇ ಸೋಂಕು ಪತ್ತೆಯಾಗಿರುವುದನ್ನು ಇನ್ಸಾಕಾಗ್ ಅಧಿಕೃತವಾಗಿ ತಿಳಿಸಿದೆ.
ಹೊಸತಾಗಿ ಪತ್ತೆಯಾಗಿರುವ ಎಕ್ಸ್ಇ ಉಪತಳಿಯನ್ನು ಬಿಎ.2.10 ಹಾಗೂ ಬಿಎ.2.12 ಎಂದು ವರ್ಗೀಕರಿಸಲಾಗಿದೆ. ಇದು ಒಮಿಕ್ರೋನ್ನ ಬಿಎ.2 ತಳಿಯ ಉಪತಳಿಯಾಗಿದೆ. ಈ ಉಪತಳಿಯ ಸೋಂಕು ತಗಲಿದವರಲ್ಲಿ ಕೊರೋನಾದ ತೀವ್ರತೆ ಹೆಚ್ಚಿರುತ್ತದೆ ಎಂಬುದು ಈವರೆಗೂ ಖಚಿತಪಟ್ಟಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಇನ್ಸಾಕಾಗ್ ಹೇಳಿದೆ. ಉಪತಳಿ ಪತ್ತೆಯಾಗಿರುದಾದರೂ ಎಲ್ಲಿ ಎಂಬುದನ್ನು ಬಹಿರಂಗಪಡಿಸಿಲ್ಲ.
ದೇಶದಲ್ಲಿ ಸದ್ಯ ಕೊರೋನಾ ಹೆಚ್ಚುತ್ತಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ದೇಶದ 12 ರಾಜ್ಯಗಳಲ್ಲಿ ಕೋವಿಡ್ ಹೆಚ್ಚುತ್ತಿದ್ದರೆ, 19 ರಾಜ್ಯಗಳಲ್ಲಿ ಇಳಿಕೆಯಾಗುತ್ತಿದೆ ಎಂದು ಇನ್ಸಾಕಾಗ್ ತನ್ನ ಬುಲೆಟಿನ್ನಲ್ಲಿ ತಿಳಿಸಿದೆ.