ಪ್ಯಾರಿಸ್‌ನಲ್ಲಿ (Paris) ಒಲಂಪಿಕ್‌ನ (Olympics) ಉದ್ಘಾಟನಾ ಸಮಾರಂಭದ ಸಂಭ್ರಮ ಕಳೆಗಟ್ಟಿತ್ತು. ಜಗತ್ತಿನ ಅತಿ ದೊಡ್ಡ ಹಾಗೂ ಅದ್ದೂರಿ ಕ್ರೀಡಾಜಾತ್ರೆ ಒಲಂಪಿಕ್ಸ್‌ಗೆ ನಿನ್ನೆ ವರ್ಣರಂಜಿತ ಚಾಲನೆ ಸಿಕ್ಕಿದೆ.ಫ್ರಾನ್ಸ್‌ನ (France) ರಾಜಧಾನಿ, ಪ್ರೇಮನಗರಿ ಪ್ಯಾರಿಸ್ ನಗರದಲ್ಲಿ 33ನೇ ಆವೃತ್ತಿಯ ಒಲಂಪಿಕ್ಸ್ ಉದ್ಘಾಟನೆಗೊಂಡಿದೆ.ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಯಿಂದ ಒಲಂಪಿಕ್ಸ್ ಕ್ರೀಡಾಕೂಟ ಆರಂಭವಾಗಿದೆ.

3ನೇ ಬಾರಿಗೆ ಪ್ಯಾರಿಸ್ ನಗರದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯುತ್ತಿದ್ದು, ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ಆರಂಭೋತ್ಸವ ನಡೆದಿದೆ.ಪ್ಯಾರಿಸ್ ಜೀವನದಿ ಸೀನ್ ಮೇಲೆ ವಿವಿಧ ದೇಶ ಹಾಗೂ ಒಲಿಂಪಿಕ್ ಅಸೋಸಿಯೇಷನ್‌ಗಳನ್ನು ಪ್ರತಿನಿಧಿಸುವ 7000ಕ್ಕೂ ಹೆಚ್ಚು ಕ್ರೀಡಾಪಟುಗಳು 85 ದೋಣಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಒಲಂಪಿಕ್ಸ್ ಟೂರ್ನಿಗೆ ಅಧಿಕೃತ ಪ್ರವೇಶ ಪಡೆದಿದ್ದಾರೆ.
ಪಿವಿ ಸಿಂಧು (Pv sindhu) ಮತ್ತು ಶರತ್ ಕಮಲ್ (Sharath kamal)| ನೇತೃತ್ವದ ಭಾರತೀಯ ತಂಡ ಕೂಡ ದೋಣಿಯಲ್ಲಿ ಮೆರವಣಿಗೆಯಲ್ಲಿ ಸಾಗಿತು. ಬ್ಯಾಡ್ಮಿಂಟನ್ ತಾರೆ ಸಿಂಧು ಹಾಗೂ ದಿಗ್ಗಜ ಟೇಬಲ್ ಟೆನಿಸ್ ಆಟಗಾರ ಶರತ್ ಭಾರತದ ಧ್ವಜಧಾರಿಗಳಾಗಿದ್ದರು. ಭಾರತದಿಂದ 117 ಆಟಗಾರರು ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಂಡಿದ್ದು, ಪದಕಗೆಲ್ಲುವ ಉತ್ಸಾಹದಲ್ಲಿದ್ದಾರೆ.