ಇನ್ಮುಂದೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ(Bike taxi )ಸೇವೆ, ಮುಂದಿನ 6 ವಾರಗಳಲ್ಲಿ ಸ್ಥಗಿತವಾಗಲಿದೆ.ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ (Highcourt) ಸೂಚನೆ ನೀಡಿದೆ.

ಹೌದು ಇನ್ಮುಂದೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ಇಲ್ಲ ಅಂತ ಹೈಕೋರ್ಟ್ ಸ್ಪಷ್ಟವಾಗಿ ಆದೇಶ ಹೊರಡಿಸಿದೆ.ಹೀಗಾಗಿ 6 ವಾರದೊಳಗೆ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ನ್ಯಾಯಾಲಯ ಗಡುವು ನೀಡಿದೆ.
ಮೋಟಾರ್ ವಾಹನ ಕಾಯ್ದೆ 1988 ಸೆಕ್ಷನ್ 3 (Motar vehicle act 1988) ಅಡಿಯಲ್ಲಿ, ಸರ್ಕಾರ ಯಾವುದೇ ಸೂಕ್ತ ಮಾರ್ಗಸೂಚಿ ಹೊರಡಿಸದ ಹೊರತು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ಇಲ್ಲ ಅಂತ ಹೈಕೋರ್ಟ್ ಹೇಳಿದೆ.

ಹೀಗಾಗಿ 6 ವಾರದೊಳಗೆ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಓಲಾ, ಉಬರ್, ರ್ಯಾಪಿಡೋ ಸಂಸ್ಥೆಗಳಿಗೆ ಹೈಕೋರ್ಟ್ ಆದೇಶಿಸಿದೆ.