ಪಾರ್ಟಿ ಮಾಡುವ ವೇಳೆ ಯಾವಾಗ್ಲೂ ಅವಾಚ್ಯ ಶಬ್ದಗಳಿಂದ ನಿಂದಿಸ್ತಾನೆ ಅನ್ನೋ ಕಾರಣಕ್ಕೆ ಬೆಂಗಳೂರಿನಲ್ಲಿ ಕೊಲೆ ನಡೆದಿದೆ. ಹಲಸೂರು ಠಾಣಾ ವ್ಯಾಪ್ತಿಯ ದೊಮ್ಮಲೂರಿನ ಬಳಿ ಸತೀಶ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ತಲೆ ಮೇಲೆ ಸಿಮೆಂಟ್ ಕಲ್ಲು ಎತ್ತಾಕಿ ಕೊಲೆ ಮಾಡಿದ ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಹಲಸೂರು ಪೊಲೀಸ್ರು ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಪವನ್, ಸಂತೋಷ್, ರಂಜಿತ್, ರಂಗನಾಥ್, ವಿನೋದ್ ಬಂಧಿತ ಆರೋಪಿಗಳು. ಏಪ್ರಿಲ್ 18ರಂದು ಪಲ್ಲಕ್ಕಿ ಉತ್ಸವ ನೋಡಲು ಶಿವಾಜಿನಗರದಿಂದ ದೊಮ್ಮಲೂರಿಗೆ ಬಂದಿದ್ದ ಮೃತ ಸತೀಶ್ ಕೊಲೆಯಾದ ದುರ್ದೈವಿ.

ಉತ್ಸವ ನೋಡಲು ಬಂದಿದ್ದ ವೇಳೆ ಹಳೇ ಸ್ನೇಹಿತರ ಜೊತೆಗೂಡಿ ಪಾರ್ಕ್ನಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ಸಂತೋಷ್ ಮತ್ತು ಪವನ್ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸ್ತಿದ್ದ ಸತೀಶ್. ಜೊತೆಗೆ ಆರೋಪಿಗಳನ್ನ ತಳ್ಳಾಡಿ, ಬಾಯಿಗೆ ಬಂದಂತೆ ಬೈದಿದ್ದ ಮೃತ ಸತೀಶ್. ಕುಡಿದ ಕೂಡಲೇ ಜೊತೆಯಲ್ಲಿದ್ದವರನ್ನೇ ಬೈತಿದ್ದ ಮೃತ ಸತೀಶ್.

ಏಪ್ರಿಲ್ 18ರಂದ ಸಹ ಇದೇ ರೀತಿ ಬೈಯ್ದಿದ್ದ. ಅದೇ ವಿಚಾರಕ್ಕೆ ಗಲಾಟೆಯಾಗಿತ್ತು. ಈ ವೇಳೆ ಸತೀಶನ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿದ್ದ ಆರೋಪಿ ಸಂತೋಷ್ ಮತ್ತು ಪವನ್. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಪಾರ್ಟಿ ಮಾಡಿದ್ದ ಎಲ್ಲರನ್ನು ಬಂಧಿಸಿದ ಪೊಲೀಸರು.

