ಭಾರತದಲ್ಲಿ (India) ಸಿಎಎ (CAA) ಅನುಷ್ಠಾನಕ್ಕೆ ಮೊದಲ ಹೆಜ್ಜೆ ಇಡಲಾಗಿದೆ. ಸಿಎಎ ಅಧಿಕೃತವಾಗಿಜಾರಿಯಾದ ಬಳಿಕ 14 ಜನರಿಗೆ ಇದೇ ಮೊದಲ ಬಾರಿಗೆ ಭಾರತೀಯ ಪೌರತ್ವ ಪ್ರಮಾಣ ಪತ್ರವನ್ನು ಕೇಂದ್ರ ಗೃಹ ಇಲಾಖೆ (Home ministry) ನೀಡಿದೆ. ಆ ಮೂಲಕ ಮುಸ್ಲಿಮೇತರ ವಲಸಿಗರಿಗೆ ದೇಶದ ಪೌರತ್ವ ನೀಡುವ ಕಾಯ್ದೆ ಅನುಷ್ಠಾನಗೊಂಡಂತಾಗಿದೆ.

ಮೊದಲ ಹಂತದಲ್ಲಿ 14 ಮಂದಿ ಒಳಗೊಂಡಂತೆ 300 ಮಂದಿಗೆ ಪೌರತ್ವ (citizenship) ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದಕ್ಕಾಗಿ ತಯಾರಿಸಿದ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದ 14 ಜನರಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ (Ajay bhalla)ಭಾರತದ ಪೌರತ್ವದ ಸರ್ಟಿಫಿಕೇಟ್ ವಿತಸರಿಸಿದ್ರು.

ಈ ಮೂಲಕ ಪಾಕಿಸ್ತಾನ (Pakistan), ಅಫ್ಘಾನಿಸ್ತಾನ (Afghanistan) ಮತ್ತು ಬಾಂಗ್ಲಾದೇಶದಿಂದ I (Bangladesh) ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆ ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ.











