ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರಿಗೆ ಜೀವ ಬೆದರಿಕೆ ಒಡ್ಡಿರುವ ನಗರದ ಮೋಹನ್ ಮಾರ್ಕೆಟ್ ಸಮೀಪದ ಜಿ.ವಿ. ಮಾಲ್(G V Mall) ವ್ಯವಸ್ಥಾಪಕನ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಮಾಲ್ ವ್ಯವಸ್ಥಾಪಕ ಬಾಲು ಹಾಗೂ ಅಲ್ಲಿನ ಸಿಬ್ಬಂದಿ ಸಂತೋಷ್ ಜಾಧವ್ (Santhosh Jadhav) ವಿರುದ್ಧ ಬೀದರ್ ಉಪವಿಭಾಗದ ಮ್ಯಾಜಿಸ್ಟ್ರೇಟ್‌ರೂ ಆಗಿರುವ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ(Govind Reddy) ಅವರು ಶುಕ್ರವಾರ ವಾರೆಂಟ್ ಹೊರಡಿಸಿದ್ದಾರೆ(Issued Warrant on Friday).
ಇಬ್ಬರನ್ನು ಬಂಧಿಸುವಂತೆ ನ್ಯೂ ಟೌನ್ ಪೊಲೀಸ್ ಇನ್‌ಸ್ಪೆಕ್ಟರ್‌ಗೆ(New Town Police Inspector) ಸೂಚಿಸಿದ್ದಾರೆ.
ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿದಾರರ ವಿರುದ್ಧ ನಗರಸಭೆ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ಶುಕ್ರವಾರ ಜಿ.ವಿ ಮಾಲ್ ಅತಿಕ್ರಮಣ ತೆರವುಗೊಳಿಸಲು ಹೋಗಿದ್ದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಲ್ ವ್ಯವಸ್ಥಾಪಕ ಬಾಲು ಹಾಗೂ ಸಂತೋಷ್ ಜಾಧವ್ ಅಡ್ಡಿಪಡಿಸಿ, ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಬಂಧನಕ್ಕೆ ಶುಕ್ರವಾರ ವಾರೆಂಟ್ ಹೊರಡಿಸಿದ್ದಾರೆ.