ಕೆಲವರಿಗೆ ಕೈ ಅಥವಾ ಕಾಲುಗಳು ಮರಗಟ್ಟುತ್ತವೆ. ಇಂಥ ಸಂದರ್ಭದಲ್ಲಿ ನಮ್ಮ ಕೈಗಳಿಂದ ಕೆಲಸ ಮಾಡಲು ಆಗುವುದಿಲ್ಲ ಅಥವಾ ಕಾಲುಗಳು ನಡೆಯಲು ಕೂಡ ಕಷ್ಟವಾಗುತ್ತದೆ ನಡಿಯಲು ಹೋದಾಗ ಜುಮ್ ಎನ್ನುತ್ತೇವೆ. ವಯಸ್ಸಾದವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಏಜ್ ಆಯ್ತು ಅಂತ ಹೇಳಬಹುದು ಆದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಕೂಡ ಈ ಮರ ಕಟ್ಟುವುದು ಸಹಜ. ಕೆಲವು ಬಾರಿ ಸುಮ್ಮನೆ ಕೂತಲ್ಲೇ ಕುಳಿತಿದ್ದರೆ ಅಥವಾ ಮಲಗಿಕೊಂಡಿದ್ದರು ಕೂಡ ಕೈಕಾಲುಗಳು ಮರಗಟ್ಟುತ್ತವೆ. ಈ ಮರಗಟ್ಟುವ ಸಮಸ್ಯೆಗೆ ಪ್ರಮುಖ ಕಾರಣಗಳೇನು ಅನ್ನೋತರ ಮಾಹಿತಿ ಇಲ್ಲಿದೆ.

ರಕ್ತ ಸಂಚಾರ
ಮರಗಟ್ಟುವುದು ಮುಖ್ಯವಾಗಿ ನರಗಳ ಮೇಲೆ ಒತ್ತಡ ಬಿದ್ದಾಗ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಅಂತ ಭಾಗಗಳಲ್ಲಿ ಮರಗಟ್ಟುತ್ತದೆ.. ಅಂತ ಸಂದರ್ಭದಲ್ಲಿ ನಾವು ಕೈಕಾಲುಗಳನ್ನು ಚೆನ್ನಾಗಿ ಉಜ್ಜಿದರೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ ಆವಾಗ ಜುಮ್ ಎನ್ನುವುದು ಕಡಿಮೆಯಾಗುತ್ತದೆ.

ಧೂಮಪಾನ ಮದ್ಯಪಾನ
ಧೂಮಪಾನ ಮಾಡೋರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಕಾರಣ ಸಿಗರೇಟಿನಲ್ಲಿ ಇರುವಂತಹ ನಿಕೋಟಿನ್ ಅಂಶವು ನರಗಳ ಮೇಲೆ ನೇರವಾಗಿ ಹಾನಿ ಉಂಟುಮಾಡುತ್ತದೆ. ಹಾಗೂ ಅತಿಯಾಗಿ ಆಲ್ಕೋಹಾಲ್ ಸೇವಿಸುವುದರಿಂದ ಕೂಡ ಪ್ರತಿಯೊಂದು ಅಂಗಗಳ ಮೇಲೆ ಹಾನಿಯಾಗುತ್ತದೆ,ಇದರಿಂದ ಕೂಡ ಮರಗಟ್ಟುವಿಕೆ ಹೆಚ್ಚಾಗುತ್ತದೆ.
ಹೆಚ್ಚು ಹೊತ್ತು ಕುಳಿತಿದ್ದರೆ
ಓಡಾಡದೆ ಅಥವಾ ಯಾವುದೇ ಆಕ್ಟಿವಿಟೀಸ್ ಮಾಡದೆ ಸುಮ್ಮನೆ ಒಂದೇ ಕಡೆ ಕುಳಿತಿದ್ದರೆ, ಯಾವಾಗ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಮರಗಟ್ಟುವುದು ಸಾಮಾನ್ಯ. ಹಾಗೂ ಈ ಸಮಸ್ಯೆ ಹೆಚ್ಚು ಹೊತ್ತು ಕೂತು ಕೆಲಸ ಮಾಡುವವರಿಗೆ ಟ್ರಾವೆಲ್ ಮಾಡುವಾಗ ಕಾಡುತ್ತದೆ.

ವಿಟಮಿನ್ ಬಿ 12 ಕೊರತೆಯಿಂದಾಗಿ
ದೇಹಕ್ಕೆ ವಿಟಮಿನ್ ಬಿ 12 ಪೋಷಕಾಂಶ ತುಂಬಾನೆ ಅಗತ್ಯವಾದದ್ದು. ವಿಟಮಿನ್ ಬಿ12 ಕೊರತೆ ಕಂಡಾಗ ನರಗಳಿಗೆ ನರಗಳಲ್ಲಿ ಅಸಮತೋಲನ ಕಾಣಿಸಿಕೊಳ್ಳುತ್ತದೆ. ಹಾಗೂ ಮುಖ್ಯವಾಗಿ ಮೆಥಿಯೋನಿನ್ ಎಂಬ ಸಂಯುಕ್ತವನ್ನು ಎಸ್-ಅಡೆನೊಸಿಲ್ಮೆಥಿಯೋನಿನ್ ಆಗಿ ಪರಿವರ್ತಿಸಲು ಬಿ 12 ಅಗತ್ಯವಿದೆ.