ಕಳೆದ ವಾರ ಬಸವ ಜಯಂತಿಯ ಶುಭ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಠಾಟಿಸಿದ ನೃಪತುಂಗ ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯ ಅನುಸಾಬ ಆಯೋಗವು(UGC) ನಿಯಮಗಳನ್ನು ಗಾಳಿಗೆ ತೂರಿ ನಿರ್ದಿಷ್ಟವಾದ ಭೂ ವಿಸ್ತೀರ್ಣ ಇಲ್ಲದಿದ್ದರು ಸಹ ರಾಜ್ಯ ಮಟ್ಟದ ವಿಶ್ವವಿದ್ಯಾಲಯವನ್ನಾಗಿ ಘೋಷಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಸರ್ಕಾರಿ ವಿಜ್ಞಾನ ಕಾಲೇಜು ಸರ್ಕಾರಿ ಕಲಾ ಕಾಲೇಜಿನಿಂದ ಬೇರ್ಪಟ್ಟ ನಂತರ 2020ರಲ್ಲಿ ಅಂದಿನ ರಾಜ್ಯಪಾಲರಾದ ವಜುಭಾಯಿ ವಾಲಾರವರು ವಿಜ್ಞಾನ ಕಾಲೇಜನ್ನು ರಾಜ್ಯ ಮಟ್ಟದ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲು ಮತ್ತು ರಾಜ್ಯ ಮಟ್ಟದ ವಿಶ್ವವಿದ್ಯಾಲಯವನ್ನಾಗಿ ಘೋಷಿಸಲು ಅನುಮೋದನೆ ನೀಡಿದ್ದರು.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000ರ ಪ್ರಕಾರ ಕಾಲೇಜನ್ನು ಏಕೀಕೃತ ವಿಶ್ವವಿದ್ಯಾಲಯವನ್ನಾಗಿ ಘೋಷಿಸಲಾಗಿದೆ ಮತ್ತು ಭೋಧನೆಯಲ್ಲಿ ಉತ್ಕೃಷ್ಟೆತೆಯಿರುವುದರಿಂದ ಮೇಲ್ದರ್ಜೆಗೇರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಬಿ.ತಿಮ್ಮೇಗೌಡ ಹೇಳಿದ್ದಾರೆ.
ಆದರೆ, ಈ ಹಿಂದೆ ಕಾಲೇಜಾಗಿದ್ದ ವಿಶ್ವವಿದ್ಯಾಲಯ ಯುಜಿಸಿ ಹಾಗು ರಾಜ್ಯ ಕಾಯ್ದೆಗಳ ಭೂ ಅವಶ್ಯಕತೆಗೆ ಬದ್ದವಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿಶ್ವವಿದ್ಯಾಲಯದ ಜಾಗವು ಕನಿಷ್ಠ ಎಂದರೆ 25 ಎಕರೆ ಜಾಗವನ್ನು ಹೊಂದಿರಬೇಕು ಆದರೆ, ವಿಜ್ಞಾನ ಕಾಲೇಜಿನ ಹೆಚ್ಚಿನ ಭಾಗವು ಸರ್ಕಾರಿ ಕಲಾ ಕಾಲೇಜಿನೊಂದಿಗೆ ಕೂಡಿಕೊಂಡಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದೇ ವಿಚಾರವಾಗಿ ಕಳೆದ ವರ್ಷ ಸೆಪ್ಟೆಂಬರ್ 18 ರಂದು ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಅಂದಿನ ಪ್ರಾಂಶುಪಾಲ ಇಂದಿನ ಕುಲಪತಿಯಾದ ಶ್ರೀನಿವಾಸ್ ಬಳ್ಳಿ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶವನ್ನ ಹೋರಹಾಕಿದ್ದರು. ಆದರೆ, ಇದಕ್ಕು ತಮ್ಮಗು ಯಾವುದೇ ಸಂಬಂದವಿಲ್ಲ ಎಂದು ಬಳ್ಳಿರವರು ಮೆತ್ತಗೆ ಜಾರಿಕೊಂಡಿದ್ದರು.
ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಉನ್ನತೀಕರಣವಾದ ಮೇಲೆ ಕೆಲವು ಕೋರ್ಸ್ಗಳ ಶುಲ್ಕದ ದರವನ್ನು ದುಪ್ಪಟ್ಟು ಮಾಡಲಾಗಿದೆ. ಪರಿಶಿಷ್ಟ ಜಾತಿ/ ಪಂಗಡ ಹಾಗು ವಿದ್ಯಾರ್ಥಿನಿಯರಿಗೆ ಶುಲ್ಕ ಕಡಿತವನ್ನು ಮಾಡಲಾಗುತ್ತಿತ್ತು ಆದರೆ ಅದನ್ನು ಸಹ ತೆಗೆದು ಹಾಕಲಾಗಿದೆ ಈ ಬಗ್ಗೆ ರಿಜಿಸ್ಟಾರ್ ಹಾಗು ಉಪಕುಲಪತಿಗಳಿಗೆ ದೂರು ನೀಡಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ವಿದ್ಯಾರ್ತಿ ಮುಖಂಡರಾದ ನರೇಂದ್ರ ನಾನು 2020ರಲ್ಲಿ ಪದವಿ ಮುಗಿಸಿದ ನಂತರ ಹಲವು RTI ಅರ್ಜಿಗಳನ್ನು ಸಲ್ಲಿಸಿದೆ ನನ್ನಗೆ ನೀಡಿದ ಉತ್ತರದಲ್ಲಿ ವಿಶ್ವವಿದ್ಯಾಲಯವು 10 ಎಕರೆ ವಿಸ್ತೀರ್ಣವನ್ನು ಹೊಂದಿದೆ ಎಂದು ಹೇಳಿದ್ದರು ಅದರಲ್ಲಿ ಮುಖಾಲು ಭಾಗ ಸರ್ಕಾರಿ ಕಲಾ ಕಾಲೇಜಿಗೆ ಸೇರಿದೆ.
ಮುಂದುವರೆದು, ಕಂದಾಯ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕನಿಷ್ಠ 25 ಎಕರೆ ಅಥವಾ 40 ಎಕರೆ ಜಾಗವನ್ನು ಹೊಂದಿರಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಹಿಂದೆ BCA ಶುಲ್ಜವು 10 ಸಾವಿರ ರೂಪಾಯಿ ಇದುದ್ದನ್ನು 21 ಸಾವಿರ ರೂಪಾಯಿಗೆ ಏರಿಸಲಾಗಿದೆ ಗ್ರಾಮೀಣ ಭಾಗದ ಹಾಗೂ ಬಡ ವಿದ್ಯಾರ್ಥಿಗಳು ಇಲ್ಲಿಗೆ ಒದಲು ಬರುತ್ತಾರೆ ಶುಲ್ಕವನ್ನು ಈ ರೀತಿ ದಿಢೀರ್ ಎಂದು ಜಾಸ್ತಿ ಮಾಡಿದ್ದರೆ ಅವರೆಲ್ಲ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.
ಯಲಹಂಕದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕವಾಗಿ ಭೂಮಿಯನ್ನು ನೀಡುವುದಾಗಿ ಭರವಸೆ ನೀಡಿದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ನ್ನು ಸಹ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಲಾಗಿದೆ ಎಂದು ಕುಲಪತಿಗಳಾದ ಶ್ರೀನಿವಾಸ್ ಬಳ್ಳಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯವು ಸರ್ಕಾರಿ ಕಲಾ ಕಾಲೇಜಿನಿಂದ ವಿಭಜಿತವಾಗಿರುವುದರಿಂದ ಆಟದ ಮೈದಾನ, ಸಭಾಂಗಣ ಬಳಕೆಗೆ ಕೆಲವು ಅಡಚಣೆಗಳಿವೆ ಎಂಧು ಹೇಳಿದ್ದಾರೆ.
ಯುಜಿಸಿ ಮಾರ್ಗಸೂಚಿ ಪ್ರಕಾರ ನಗರ ವ್ಯಾಪ್ತಿಯಲ್ಲಿರುವ ವಿಶ್ವವಿದ್ಯಾಲಯಗಳು ಕನಿಷ್ಠ 25 ಎಕರೆ ಕ್ಯಾಂಪಸ್ಅನ್ನು ಹೊಂದಿರಬೇಕು ಎಂದು ಹೇಳುತ್ತದೆ.
ವಿಶ್ವವಿದ್ಯಾಲಯವು ಭೂ ಒತ್ತುವರಿ ಹಾಗು ಅಕ್ರಮ ಎಸಗಿರುವ ಬಗ್ಗೆ ಮೌಖಿಕವಾಗಿ ದೂರುಗಳು ಬಂದಿವೆ. ಜಾಗದ ಕಾರಣಕ್ಕಾಗಿ ಹಲವು ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಯುಜಿಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಇದೇ ಕಾರಣಕ್ಕಾಗಿ ಸರ್ಕಾರಿ ಕಲಾ ಕಾಲೇಜನ್ನು ನಕಲಿ ದಾಖಲೆಗಳನ್ನು ಸರಷ್ಟಿ ಮಾಡಿ ಭೂ ಕಬಳಿಕೆ ಮಾಡಲು ಮುಂದಾದ ಶ್ರೀನಿವಾಸ್ ಬಳ್ಳಿ ವಿರುದ್ದ ಕಲಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು ಆ ನಂತರ ಸುಮ್ಮನಾಗಿದ್ದ ಕುಲಪತಿಗಳು ಮೆತ್ತಗೆ ತಮ್ಮ ಬಾಲವನ್ನು ಬಿಚ್ಚಲು ಶುರು ಮಾಡಿದ್ದಾರೆ ಇದು ಮುಂದಿನ ದಿನಗಳ್ಲಲಿ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ. .