ಕಳೆದ ಒಂದು ವರ್ಷದಿಂದ ದೇಶಾದ್ಯಂತ ತೀವ್ರ ಪ್ರತಿಭಟನೆ ಕಂಡಿದ್ದ ಸಿಏಏ ಮತ್ತು ಎನ್ ಆರ್ ಸಿ ವಿಚಾರವು ಭಾರೀ ಪ್ರತಿಭಟನೆಯ ಕಾವು ಹೊತ್ತಿಸಿತ್ತು. ದೇಶಾದ್ಯಂತ ಸಾವಿರಾರು ಸರಣಿ ಪ್ರತಿಭಟನೆಗಳು ನಡೆದಿದ್ದರೆ ದೆಹಲಿಯ ಶಹೀನ್ ಬಾಗ್ ಪ್ರದೇಶದಲ್ಲಿ ಸತತ ಮೂರು ತಿಂಗಳ ಕಾಲ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು. ಇದೇ ವಿಷಯದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೋಮು ಗಲಭೆಯೂ ನಡೆದಿತ್ತು. ನಂತರ ಕಳೆದ ಮಾರ್ಚ್ ನಲ್ಲಿ ಕರೋನ ಸಾಂಕ್ರಮಿಕವು ತೀವ್ರಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಯಿತು. ಆ ಸಂದರ್ಭದಲ್ಲಿ ಶಾಹಿನ್ ಬಾಗ್ನಿಂದ ಪ್ರತಿಭಟನಾಕಾರರನ್ನೂ ಪೋಲೀಸ್ ಪಡೆ ಬಳಸಿ ತೆರವುಗೊಳಿಸಲಾಯಿತು.
Also Read: ‘ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಅಸ್ತಿತ್ವ ಮೇಲೆ ನಡೆಸಿದ ದಾಳಿ’
ನಂತರ ಕಳೆದ ಆರು ತಿಂಗಳಿನಿಂದ ಎಲ್ಲೂ ಸಿಏಏ ಮತ್ತು ಎನ್ ಆರ್ ಸಿ ವಿಷಯ ಚರ್ಚೆಗೆ ಬಂದಿರಲಿಲ್ಲ. ಇದೀಗ ಅಸ್ಸಾಂ ರಾಜ್ಯದಿಂದ ಸಿಏಎ ಮತ್ತು ಎನ್ ಆರ್ ಸಿ ವಿಷಯವಾಗಿ ಮೊದಲ ಸುದ್ದಿ ಹೊರಬಿದ್ದಿದೆ. ಅಸ್ಸಾಂ ರಾಜ್ಯದಲ್ಲಿ ಭಾರತೀಯ ನಾಗರಿಕರ ಅಂತಿಮ ಪಟ್ಟಿಯನ್ನು ಸಿದ್ದ ಪಡಿಸಲಾಗಿದ್ದು ಇದರಲ್ಲಿ ಸೇರ್ಪಡೆಗೊಂಡಿರುವ ಅನರ್ಹ ವ್ಯಕ್ತಿಗಳ ಹೆಸರನ್ನು ಅಳಿಸಲು ರಾಜ್ಯ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಸಂಯೋಜಕರು ಕ್ರಮವನ್ನು ಕೈಗೊಳ್ಳಲು ಸಿದ್ದತೆ ನಡೆಸಿರುವುದನ್ನು ಪ್ರಶ್ನಿಸಿ ಆಲ್ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿ ಸಂಘ (AAMSU) ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಸಜ್ಜಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ವರ್ಷದ ಆಗಸ್ಟ್ 31 ರಂದು ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಸುಮಾರು 3.3 ಕೋಟಿ ಅರ್ಜಿದಾರರಲ್ಲಿ 19.22 ಲಕ್ಷ ಅರ್ಜಿದಾರರನ್ನು ಹೊರಗಿಡಲಾಗಿತ್ತು. ಅಕ್ಟೋಬರ್ 13 ರಂದು, ರಾಜ್ಯ ಎನ್ಆರ್ಸಿ ಸಂಯೋಜಕ ಹಿತೇಶ್ ದೇವ್ ಶರ್ಮಾ ಅವರು ಎಲ್ಲಾ ಜಿಲ್ಲಾಧಿಕಾರಿಗಳು (ಡಿಸಿ) ಮತ್ತು ನಾಗರಿಕ ನೋಂದಣಿಯ ಜಿಲ್ಲಾ ನೋಂದಣಿದಾರರಿಗೆ (ಡಿಆರ್ಸಿಆರ್) ಪತ್ರವೊಂದನ್ನು ಬರೆದರು. ಅದರಲ್ಲಿ ಎನ್ಆರ್ಸಿ ಪಟ್ಟಿಯಲ್ಲಿ ಅನರ್ಹ ವ್ಯಕ್ತಿಗಳ ಹೆಸರುಗಳನ್ನು ಪ್ರತಿಯೊಬ್ಬರಿಗೂ ಸಕಾರಣ ಕೊಟ್ಟು ಕೈ ಬಿಡುವಂತೆ ಸೂಚಿಸಲಾಗಿತ್ತು. ಆದರೆ ಈ ಆದೇಶವನ್ನು AAMSU ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ.
AAMSU ಕಾನೂನು ಸಲಹೆಗಾರ ಅಜೀಜುರ್ ರಹಮಾನ್ ಅವರ ಪ್ರಕಾರ ಎನ್ಆರ್ ಸಿ ಯ ರಾಜ್ಯ ಸಂಯೋಜಕ ಹಿತೇಶ ಶರ್ಮಾ ಅವರ ನೇಮಕವೇ ಕಾನೂನು ಬಾಹಿರವಾಗಿದೆ. ಕಳೆದ ವರ್ಷದ ನವೆಂಬರ್ನಲ್ಲಿ ಅವರ ನೇಮಕಾತಿಯನ್ನು ನಾವು ಪ್ರಶ್ನಿಸಿದ್ದೇವೆ. ಅವರ ನೇಮಕವೇ ಫೃಶ್ನಿತವಾಗಿರುವಾಗ ಅವರು ಯಾವುದೇ ಆದೇಶವನ್ನು ಹೇಗೆ ಹೊರಡಿಸಲು ಸಾದ್ಯ ಎನ್ನುತ್ತಾರೆ. ಶರ್ಮಾ ಅವರು ಹೊರಡಿಸಿರುವ ಇತ್ತೀಚಿನ ಅಧಿಸೂಚನೆಯಲ್ಲಿ ಅನರ್ಹ ವ್ಯಕ್ತಿಗಳ ಹೆಸರುಗಳು, ವಿಶೇಷವಾಗಿ ಅನುಮಾನಾಸ್ಪದ ಮತದಾರರು (ಡಿವಿ), ಘೋಷಿತ ವಿದೇಶಿಯರು (ಡಿಎಫ್), ವಿದೇಶಿಯರ ನ್ಯಾಯಮಂಡಳಿಗಳಲ್ಲಿ (ಎಫ್ಟಿ) ಪ್ರಕರಣಗಳು ಬಾಕಿ ಉಳಿದಿರುವ ಮತ್ತು ಅವರ ಕುಟುಂಬಸ್ಥರ ಹೆಸರುಗಳನ್ನು ಕೈ ಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಇದಲ್ಲದೆ ಶರ್ಮಾ ಅವರು ಕಳೆದ ಫೆಬ್ರವರಿ 19 ರಂದು ಎಲ್ಲಾ ಡಿಸಿಗಳು ಮತ್ತು ಡಿಆರ್ಸಿಆರ್ಗಳನ್ನು ಎನ್ಆರ್ಸಿಯಲ್ಲಿ ಸೇರಿಸಲಾಗಿರುವ “ಅನರ್ಹ ವ್ಯಕ್ತಿಗಳ” ವಿವರಗಳನ್ನು ನೀಡುವಂತೆ ಕೇಳಿಕೊಂಡಿದ್ದರು.
Also Read: ಶೀಘ್ರವೇ ಜಾರಿಗೆ ಬರಲಿದೆ ಪೌರತ್ವ ತಿದ್ದುಪಡಿ ಕಾಯ್ದೆ – ಜೆ ಪಿ ನಡ್ಡಾ
ಈ ಬಾರಿ, ಪೌರತ್ವ ಪಟ್ಟಿ ಯಲ್ಲಿ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ಸಂಚಿಕೆ) ನಿಯಮಗಳ 2003 ರ ಷರತ್ತು 4 (6) ರ ಅಡಿಯಲ್ಲಿ ಅನರ್ಹ ಹೆಸರುಗಳನ್ನು ಅಳಿಸಲು ಸೂಕ್ತ ಕಾರಣಗಳನ್ನು ಬರೆಯುವಂತೆ ಸಂಯೋಜಕರು ಮತ್ತು ಜಿಲ್ಲಾ ಅಧಿಕಾರಿಗಳನ್ನು ಕೋರಿದ್ದಾರೆ. ಭಾರತದ ರಿಜಿಸ್ಟ್ರಾರ್ ಜನರಲ್ (ಆರ್ಜಿಐ) ಅದೇ ನಿಯಮಗಳ 7 ನೇ ಷರತ್ತಿನ ಪ್ರಕಾರ ಅಂತಿಮ ಎನ್ಆರ್ಸಿಯನ್ನು ಇನ್ನೂ ಪ್ರಕಟಿಸಬೇಕಾಗಿದೆ.
ಆದಾಗ್ಯೂ, ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅಸ್ಸಾಂ ನ ಕೆಲ ಜಿಲ್ಲೆಗಳ ಹಲವಾರು ಡಿಸಿಗಳು ಅಂತಹ ಯಾವುದೇ ಆದೇಶದ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು, ಆದರೆ ರಾಜ್ಯ ಸರ್ಕಾರಿ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದರು.

ಪಕ್ಷದ ಶಾಸಕ ಮತ್ತು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಡೆಬಬ್ರತಾ ಸೈಕಿಯಾ ಮಾತನಾಡಿ, ನಿರ್ದೇಶನ ಹೊರಡಿಸಲು ಎನ್ಆರ್ಸಿ ಅಧಿಕಾರಿಗಳು ಸುಪ್ರೀಂ ಕೋರ್ಟ್ನಿಂದ ಅನುಮತಿ ಪಡೆದಿಲ್ಲ ಎಂದು ಹೇಳಿದರು. ಎನ್ಆರ್ಸಿಯಿಂದ ಹೊರಗುಳಿದ 19.22 ಲಕ್ಷ ಜನರ ನ್ನು ಪಟ್ಟಿಯಿಂದ ತೆಗೆಯುವ ಕಾರ್ಯ ಬೇಗನೆ ಆಗಬೇಕು ಎಂದು ಅಸ್ಸಾಂ ಜತಿಯ ಪರಿಷತ್ನ ರಾಜ್ಯ ಕನ್ವೀನರ್ ಮಾಜಿ ಎಜಿಪಿ ನಾಯಕ ಜಗದೀಶ್ ಭುಯಾನ್ ಹೇಳಿದ್ದಾರೆ. ನಮಗೆ ಲೋಪಗಳಿಲ್ಲದ ಸರಿಯಾದ ಎನ್ಆರ್ಸಿ ಬೇಕು. 19 ಲಕ್ಷ ಜನರ ಅಪೀಲುಗಳನ್ನು ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಮೊದಲು ಪ್ರಾರಂಭಿಸಬೇಕು ಎಂದು ಭೂಯಾನ್ ಹೇಳಿದರು. ಎನ್ಆರ್ಸಿ ಕರಡು ಪ್ರಕಟವಾದಾಗ, ಗೃಹ ಸಚಿವ ಅಮಿತ್ ಶಾ ಅವರು 42 ಲಕ್ಷ ‘ ಒಳನುಸುಳುವವರು ಪತ್ತೆಯಾದ ಕೀರ್ತಿಯನ್ನು ಪಡೆದರು, ಆದರೆ ಅಂತಿಮ ಎನ್ಆರ್ಸಿಯಲ್ಲಿ ಅದು 19 ಲಕ್ಷಕ್ಕೆ ಇಳಿದಾಗ, ಅವರು ಮೊಸಲಿನ ಹೇಳಿಕೆಯಿಂದ ನುಣುಚಿಕೊಂಡರು ಎಂದು ಅವರು ಹೇಳಿದರು.
Also Read: ಮೋದಿ 2.O ಹಾಗೂ ಪೌರತ್ವ ಕಾಯ್ದೆ
ಆದಾಗ್ಯೂ, ಎನ್ಆರ್ಸಿ ಪ್ರಕರಣದ ಅರ್ಜಿದಾರರಾದ ಎನ್ಜಿಒ ಅಸ್ಸಾಂ ಪಬ್ಲಿಕ್ ವರ್ಕ್ಸ್ (ಎಪಿಡಬ್ಲ್ಯು) ನ ಅಭಿಜೀತ್ ಶರ್ಮಾ ಈ ಕ್ರಮವನ್ನು ಸ್ವಾಗತಿಸಿದರು, ಇದು ಮಾಜಿ ಎನ್ಆರ್ಸಿ ಸಂಯೋಜಕ ಪ್ರತೀಕ್ ಹಜೇಲಾ ಅವರ ನಿರ್ಲಕ್ಷ್ಯ ಮತ್ತು ಗುಪ್ತ ಕಾರ್ಯಸೂಚಿಯಿಂದಾಗಿ ಲಕ್ಷಾಂತರ ಅನರ್ಹರ ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದವು. ಅಕ್ರಮ ವಿದೇಶಿಯರ ಹೆಸರುಗಳನ್ನು ಪತ್ತೆ ಹಚ್ಚುವುದು ಮತ್ತು ಅಳಿಸುವುದು ಯಾವಾಗ ಬೇಕಾದರೂ ಮತ್ತು ಎಲ್ಲಿಯಾದರೂ ಮಾಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅವರು ತಿಳಿಸಿದರು. “ನಾನು ಈ ವಿಷಯದಲ್ಲಿ ಕಾನೂನು ತಜ್ಞರೊಂದಿಗೆ ಮಾತನಾಡಿದ್ದೇನೆ. ರಾಜ್ಯ ಸಂಯೋಜಕರು ಕೈಗೊಂಡ ದಿಟ್ಟ ಹೆಜ್ಜೆಯನ್ನು ನಾವು ಸ್ವಾಗತಿಸುತ್ತೇವೆ. ಪ್ರತಿಯೊಬ್ಬ ಅಸ್ಸಾಮಿ ಭಾರತೀಯರು ಇದನ್ನು ಸ್ವಾಗತಿಸಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಎನ್ಆರ್ಸಿಯನ್ನು ಪಟ್ಟಿ ಮಾಡುವಲ್ಲಿ ಸರ್ಕಾರದ ಹಣವನ್ನು ದುರುಪಯೋಗವಾಗಿದೆ ಎಂದು ಆರೋಪಿಸಿ, ಅಸ್ಸಾಂ ಪಬ್ಲಿಕ್ ವರ್ಕ್ಸ್ ಸಿಬಿಐ ನ ಭ್ರಷ್ಟಾಚಾರ ವಿರೋಧಿ ಶಾಖೆಯಲ್ಲಿ ಕಳೆದ ನವೆಂಬರ್ ನಲ್ಲಿ ಹಜೇಲಾ ವಿರುದ್ಧ ಎಫ್ಐಆರ್ ಸಲ್ಲಿಸಿತ್ತು. ಈಗಾಗಲೇ ಪಟ್ಟಿಯಲ್ಲಿ ಸೇರಿಸಲಾಗಿರುವ ಹೆಸರುಗಳ “ಮರು ಪರಿಶೀಲನೆ” ಗೆ ಸುಪ್ರೀಂ ಕೋರ್ಟ್ ನಿರ್ಬಂಧವಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ತಪ್ಪಾದ ಸೇರ್ಪಡೆ ಮತ್ತು ಹೊರಗಿಡುವಿಕೆಯನ್ನು ಕಂಡುಹಿಡಿಯಲು ಮಾದರಿ ಮರು ಪರಿಶೀಲನೆ ಪ್ರಕ್ರಿಯೆಯನ್ನು ನಡೆಸಬೇಕೆಂಬ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ಜುಲೈ 23, 2019 ರಂದು ತಿರಸ್ಕರಿಸಿತು. ಈಗಾಗಲೇ ಸೇರಿಸಲಾದ ಹೆಸರುಗಳ ಮರು ಪರಿಶೀಲನೆಯ ಪ್ರಶ್ನೆಗೆ ಸುಪ್ರೀಂ ಕೋರ್ಟ್ನಿಂದ ನಿರ್ಬಂಧವಿದೆ. ಅಂತಿಮ ಪಟ್ಟಿ ಪ್ರಕಟಣೆಗೆ ಮುಂಚಿತವಾಗಿ ವಿನಂತಿಯನ್ನು ಸಲ್ಲಿಸಿದಾಗ, ನ್ಯಾಯಾಲಯವು ಆ ವಿನಂತಿಯನ್ನು ನಿರ್ದಿಷ್ಟವಾಗಿ ನಿರಾಕರಿಸಿತು ಎಂದು ಸುಪ್ರೀಂ ಕೋರ್ಟ್ ವಕೀಲ ಅಹ್ಮದ್ ಅಯ್ಯುಬಿ ತಿಳಿಸಿದರು.
Also Read: ಸಿಎಎ ಕಾಯ್ದೆ ಜಾರಿಯಾಗಿ ಮೂರು ತಿಂಗಳಾದರೂ ಪೌರತ್ವ ನೀಡುವ ವ್ಯವಸ್ಥಿತ ಪ್ರಕ್ರಿಯೆ ಆರಂಭವಾಗಿಲ್ಲ ಏಕೆ?
ಅಂತಿಮ ಎನ್ಆರ್ಸಿ ಪ್ರಕಟವಾದಾಗ, ಮಾಜಿ ರಾಜ್ಯ ಸಂಯೋಜಕರ ಪತ್ರಿಕಾ ಪ್ರಕಟಣೆಯು ಷರತ್ತು 4 (3) ರ ಅಡಿಯಲ್ಲಿ ವಿಚಾರಣೆಗಳು ಪೂರ್ಣಗೊಂಡ ನಂತರವೇ ಅಂತಿಮ ಎನ್ಆರ್ಸಿ ಪ್ರಕಟವಾಯಿತು ಎಂದು ಹೇಳಿದೆ. ಆದ್ದರಿಂದ, 4 (3) ಪ್ರಕ್ರಿಯೆಯನ್ನು ನ್ಯಾಯಾಲಯದ ಅನುಮೋದನೆಯ ನಂತರವೇ ಮಾಡಲಾಯಿತು. ಹೊಸ ರಾಜ್ಯ ಎನ್ಆರ್ಸಿ ಸಂಯೋಜಕರು ಕೋರಿದಂತೆ ಅನರ್ಹ ವ್ಯಕ್ತಿಗಳ ವಂಶಸ್ಥರನ್ನು ತೆಗೆದುಹಾಕುವುದನ್ನು ಒಪ್ಪಲಾಗದು ಎಂದು ಅಯ್ಯುಬಿ ಹೇಳಿದರು. 2004 ಕ್ಕಿಂತ ಮೊದಲು ಜನಿಸಿದವರಿಗೆ ಅವರು ಭಾರತೀಯರಾಗಿದ್ದರೆ, ಅವರ ಇತರ ಪೋಷಕರ ಹಿನ್ನೆಲೆಯನ್ನು ಗಮನಿಸದೆ ಅವರನ್ನು ಎನ್ಆರ್ಸಿಯಲ್ಲಿ ಸೇರಿಸಲೇಬೇಕಿದೆ ಎಂದು ಅಯ್ಯುಬಿ ಹೇಳಿದರು. ಈ ಕುರಿತು ಮಾತನಾಡಿದ ಗುವಾಹಟಿ ಮೂಲದ ಮಾನವ ಹಕ್ಕುಗಳ ವಕೀಲ ಅಮನ್ ವಾದುದ್ ಅವರು ಎನ್ಆರ್ಸಿ ಪ್ರಕ್ರಿಯೆಯು 31 ಆಗಸ್ಟ್ 2019 ರಂದು ಪಟ್ಟಿ ಪ್ರಕಟಿಸಿದೆ. 2009 ರ ವೇಳಾಪಟ್ಟಿಯ ಷರತ್ತು 4 (3) ಮತ್ತು 4 (6) ರ ಅಡಿಯಲ್ಲಿ ಎಲ್ಆರ್ಸಿಆರ್ ಮತ್ತು ಡಿಆರ್ಸಿಆರ್ ಅಧಿಕಾರವನ್ನು ಹೊಂದಿದೆ ಅಂತಿಮ ಎನ್ಆರ್ಸಿ ಪಟ್ಟಿಯ ಇಡೀ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡುತ್ತದೆ. ಹಾಗಾಗಿ ರಾಜ್ಯ ಸಂಯೋಜಕರು ಈಗ ಹೊರಡಿಸಿರುವ ಆದೇಶ ಕ್ಕೆ ಬೆಲೆ ಇಲ್ಲ ಎಂದು ಅವರು ಹೇಳಿದರು.