ಚುನಾವಣೋತ್ತರ ಸಮೀಕ್ಷೆ ಬಳಿಕ ಎಲ್ಲಾ ಪಾರ್ಟಿಗಳಲ್ಲೂ ರಾಜಕೀಯ ಚಟುವಟಿಕೆ ಆರಂಭ ಆಗಿದ್ದು, ಫಲಿತಾಂಶಕ್ಕೂ ಮುನ್ನ ಡಿಸಿಎಂ ಡಿ.ಕೆ ಶಿವಕುಮಾರ್ ಕೊಲ್ಲೂರು ಮೂಕಾಂಬಿಕೆ ಮೊರೆ ಹೋಗಿದ್ದಾರೆ. ಪತ್ನಿ ಸಮೇತ ಆಗಮಿಸಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಮೂಕಾಂಬಿಕಾ ದರ್ಶನ ಪಡೆದಿದ್ದಾರೆ.. ಡಿಸಿಎಂ ಡಿ.ಕೆ ಶಿವಕುಮಾರ್ಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗು ಅರ್ಚಕರು ಪೂರ್ಣಕುಂಭ ಸ್ವಾಗತ ಕೋರಿದ್ದಾರೆ..
ಡಿ.ಕೆ ಶಿವಕುಮಾರ್ ದೇಗುಲದ ಪ್ರವೇಶದಲ್ಲಿರುವ ಗರುಡಗಂಬಕ್ಕೆ ಕೈ ಮುಗಿದು, ಪತ್ನಿ ಜೊತೆ ಮೂಕಾಂಬಿಕಾ ದರ್ಶನ ಪಡೆದಿದ್ದಾರೆ.. ಚುನಾವಣೆ ಗೆಲುವಿಗಾಗಿ ದೇವಿ ಬಳಿ ಪ್ರಾರ್ಥನೆ ಸಲ್ಲಿಸಿದ್ದು, ಚುನಾವಣಾ ಸಮೀಕ್ಷೆಗಳನ್ನು ನಂಬಲು ಸಾಧ್ಯವಿಲ್ಲ. ಕಾಂಗ್ರೆಸ್ ಮೈತ್ರಿಕೂಟ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಆ ಬಳಿಕ
ಬೆಂಗಳೂರಿನಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ಚನ್ನಪಟ್ಟಣದಲ್ಲಿ ಜೆಡಿಎಸ್ ಗೆಲ್ಲುತ್ತೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು 15 ದಿನ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ಜನತೆ ಭಾವನೆ ಎನು ಅಂತ ಗೊತ್ತಿದೆ. ಅಲ್ಲಿ ಯಾವುದೇ ಅನುಮಾನ ಇಲ್ಲ. ಎನ್‌ಡಿಎ ಅಭ್ಯರ್ಥಿ ಗೆಲ್ಲುತ್ತಾರೆ. ಎರಡು ರಾಜ್ಯದಲ್ಲೂ ಹೆಚ್ಚು ಜನರ ಆಶೀರ್ವಾದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದಿದ್ದಾರೆ.
ಜಾರ್ಖಂಡ್ ಹಾಗೂ ಮಹಾರಾಷ್ಟ್ರ ಚುಣಾವಣೆ ಫಲಿತಾಂಶದ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಎಕ್ಸಿಟ್ ಪೋಲ್ ರಿಸಲ್ಟ್ ಬಂದಿದ್ದು, ರಾಜ್ಯದಲ್ಲಿ ಬಿಜೆಪಿ ಎರಡು ಸ್ಥಾನ ಗೆಲ್ಲುತ್ತೆ ಎಂದು ಹೇಳಲಾಗಿದೆ. ಜೊತೆಗೆ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲುತ್ತೆ ಎಂದು ಸಮೀಕ್ಷೆ ಬಂದಿದೆ. ಈಗ ಖುಷಿಯಾಗಿದೆ ರಿಸಲ್ಟ್ ಬಂದ ಮೇಲೆ ಇನ್ನಷ್ಟು ಖುಷಿಯಾಗಲಿದೆ ಎಂದಿದ್ದಾರೆ.
ಎಕ್ಸಿಟ್ ಪೊಲ್ ಯಾವಾಗಲೂ ಸರಿ ಇರುತ್ತೆ ಎನ್ನಲು ಸಾಧ್ಯವಿಲ್ಲ. ಚನ್ನಪಟ್ಟಣದಲ್ಲಿ ನಾವೇ ಗೆಲ್ತೀವಿ ಅಂತಿದ್ರು. ಆದ್ರೆ ಈಗ ಕೂದಲೆಳೆ ಅಂತರ ಎಂದು ಅವರೇ ಹೇಳ್ತಿದ್ದಾರೆ. ಜನ ಅವರನ್ನ ಹೇಗೆ ತಿರಸ್ಕಾರ ಮಾಡಿದ್ದಾರೆ ಅನ್ನೋದು ಈ ಚುನಾವಣಾ ಫಲಿತಾಂಶದಿಂದ ಗೊತ್ತಾಗುತ್ತೆ. ರಾಜ್ಯದ ಜನರಿಗೆ ಕಾಂಗ್ರೆಸ್ ನಡೆದುಕೊಂಡ ರೀತಿ ಇಷ್ಟ ಆಗಿಲ್ಲ ಎಂದಿದ್ದಾರೆ.