
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna), ಸದ್ಯಕ್ಕೆ ಭಾರತಕ್ಕೆ ಮರಳುವುದು ಅನುಮಾನ(Doubt) ಎಂದು ಎಸ್‌ಐಟಿ(SIT) ಅಧಿಕಾರಿಗಳ ಮೂಲಗಳಿಂದಲೇ ಮಾಹಿತಿ ಸಿಕ್ಕಿದೆ.

ಸದ್ಯ ಪ್ರಜ್ವಲ್ ರೇವಣ್ಣ ಭಾರತ(India) ಬಿಟ್ಟು ತಿಂಗಳು ಕಳೆಯುತ್ತಿದ್ರೂ ಈವರೆಗೂ ಅವರ ಪತ್ತೆಯಾಗಿಲ್ಲ.
ಅವರ ಚಲನವಲನಗಳ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದು, ಅವರು ಚುನಾವಣೆಯ(Election) ಫಲಿತಾಂಶ ಬರುವವರೆಗೂ ಭಾರತಕ್ಕೆ ಮರಳುವುದು ಅನುಮಾನ ಎಂದು ಎಸ್‌ಐಟಿ ಅಧಿಕಾರಿಗಳ(Officers) ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ






