ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಈ ದಿನ ಖುಷಿ ಸಂತೋಷದಿಂದ ಕೂಡಿರಲಿದೆ. ಮನೆ ನಿಮ್ಮ ಆಪ್ತ ಸಂಬಂಧಿ ಆಗಮಿಸಲಿದ್ದಾರೆ. ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣ ಇರಲಿದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ಆರೋಗ್ಯದ ಬಗ್ಗೆ ಎಚ್ಚರಿಗೆ ಇರಲಿ. ಯೋಗ ಧ್ಯಾನದಲ್ಲಿ ಹೆಚ್ಚಿನ ಸಮಯ ಕಳೆಯಿರಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರಿಗೆ ಇಂದು ಅನಗತ್ಯ ಖರ್ಚು ಎದುರಾಗುವ ಸಾಧ್ಯತೆ ಇದೆ. ಮಾತಿನಲ್ಲಿ ಎಚ್ಚರಿಕೆ ಇರಲಿ. ಯಾರೊಂದಿಗೂ ವಾದ-ವಿದಾದ ಬೇಡ. ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ. ದೂರ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಮನೋರಂಜನೆಗೋಸ್ಕರ ಹೆಚ್ಚು ಸಮಯ ಕಳೆಯಲಿದ್ದೀರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿದೆ.
ಮಿಥುನ ರಾಶಿಯ ಈ ದಿನದ ಭವಿಷ್ಯ

ನೀವು ಬಹು ದಿನಗಳಿಂದ ಭೇಟಿಯಾಗಬೇಕು ಎಂದುಕೊಂಡಿರುವ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಮನಸ್ಸಿಗೆ ತುಂಬಾ ನೆಮ್ಮದಿ ಇರಲಿದ್ದು, ಕುಟುಂಬಸ್ಥರೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ಕೆಲಸದ ಸ್ಥಳದಲ್ಲೂ ಬಡ್ತಿ ಸಿಗುವ ಸಾಧ್ಯತೆ. ಹಲವು ದಿನಗಳಿಂದ ನಿರಂತರ ಕೆಲಸದಿಂದ ದಣಿದಿದ್ದ ನಿಮಗೆ ಇಂದು ಸ್ವಲ್ಪ ಮಟ್ಟಿನ ವಿಶ್ರಾಂತಿ ಲಭಿಸಲಿದೆ.
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರಿಗೆ ಕೆಲಸದಲ್ಲಿ ಸ್ಥಳದಲ್ಲಿ ಹೆಚ್ಚು ಒತ್ತಡ ಹಾಗೂ ಮಾನಸಿಕ ಕಿರಿಕಿರಿ ಉಂಟಾಗುತ್ತದೆ. ಮಾತಿನಲ್ಲಿ ಎಚ್ಚರಿಕೆ ಇರಲಿ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಇಂದಿನಿಂದ ನಿಮ್ಮ ಆದಾಯದ ಹಣ ಉಳಿತಾಯ ಮತ್ತು ಹೂಡಿಕೆಯತ್ತ ಹೆಚ್ಚು ಗಮನ ಕೊಡುವಿರಿ. ದೂರ ಪ್ರಯಾಣದ ಸಾಧ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಹೆಚ್ಚಿನ ಗಮನ ನೀಡಬೇಕು.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರು ಇಂದು ಉದ್ಯೋಗ ಸ್ಥಳದಲ್ಲಿ ಶ್ರಮಕ್ಕೆ ತಕ್ಕಂತೆ ಪ್ರಶಂಸೆ ಪಡೆಯುತ್ತಾರೆ. ಕೌಟುಂಬಿಕವಾಗಿ ಕಲಹ ಹೆಚ್ಚಾಗಲಿದ್ದು, ಈ ದಿನ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾರೊಂದಿಗೂ ವಾದ ಬೇಡ. ಅನ್ಯರು ಹಾಗೂ ಅಪರಿಚಿತರ ಜೊತೆ ವ್ಯವಹಾರ ಮಾಡುವಾಗ ಎಚ್ಚರವಹಿಸಿ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಇಂದು ಕನ್ಯಾ ರಾಶಿಯವರು ಆರೋಗ್ಯ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿ. ಉದರ ಸಂಬಂಧಿ ನೋವು ಕಾಡಲಿದೆ. ಇನ್ನು ಸರ್ಕಾರಿ ಕೆಲಸದ ವ್ಯವಹಾರದಲ್ಲಿ ತೊಂದರೆಯಾಗಲಿದೆ. ಸಾಲ ಮರುಪಾವತಿ ಮಾಡುವ ಸಾಧ್ಯತೆ ಹೆಚ್ಚಿದೆ. ಯಾವುದೇ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರ ಇರಲಿ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರು ಬಹಳ ದಿನಗಳಿಂದ ಕಾತುರರಾಗಿ ಕಾಯುತ್ತಿದ್ದ ಸಮಯ ಈಗ ಬಂದಿದೆ. ಉದ್ಯೋಗದಲ್ಲಿ ಪ್ರಯತ್ನಕ್ಕೆ ಪ್ರತಿಫಲ ಪ್ರಾಪ್ತಿ ಆಗುತ್ತದೆ. ಈ ದಿನ ಹೆಚ್ಚು ಖರ್ಚುಗಳು ಉಂಟಾಗುತ್ತದೆ. ಹಣದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವಿರಿ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ದೀರ್ಘಕಾಲದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗಲಿದೆ. ಮಾನಸಿಕ ನೆಮ್ಮದಿ ಇರಲಿದೆ. ಹೂಡಿಕೆ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆಪ್ತರನ್ನು ಭೇಟಿಯಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಅನುಕೂಲಕರ ಔಾತಾವರಣ. ಕುಟುಂಬದ ವ್ಯವಹಾರಗಳು ಹೆಚ್ಚಲಿದ್ದು, ಜವಾಬ್ದಾರಿಗಳು ಹೆಚ್ಚಲಿದೆ.
ಧನು ರಾಶಿಯ ಈ ದಿನದ ಭವಿಷ್ಯ

ಧನು ರಾಶಿಯವರಿಗೆ ಇದು ಅನುಕೂಲಕರವಾದ ಸಮಯವಾಗಿದ್ದು, ಹಣಕಾಸಿನ ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಮನೆಯಲ್ಲಿ ವಿನಾಕಾರಣ ಅಸಮಾಧಾನ ಬೇಡ. ಮಾತಿನಲ್ಲಿ ಹಿಡಿತ ಇರಲಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರು ಇಂದು ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊರತು ಇಡೀ ದಿನ ನೆಮ್ಮದಿಯಿಂದ ಇರುತ್ತೀರಿ. ಕೌಟುಂಬಿಕ ನೆಮ್ಮದಿ ಇರುತ್ತದೆ. ವಿದ್ಯಾಥಿಗಳಿಗೆ ಸಿಹಿ ಸುದ್ದಿ ಸಿಗಲಿದೆ. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಖುಷಿ ಹೆಚ್ಚಾಗಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರು ಇಂದು ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಿ. ತಲೆ ಹಾಗೂ ಉದರ ಸಂಬಂಧಿ ನೋವುಗಳು ಕಾಡಲಿದೆ. ಅಗತ್ಯಕ್ಕಿಂತ ಹೆಚ್ಚಿನ ಹಣ ವ್ಯಹಿಸುವುದನ್ನು ತಪ್ಪಿಸಿ. ಇಂದು ಸ್ನೇಹಿತರೊಂದಿಗೆ ಮನೋರಂಜನೆಗೋಸ್ಕರ ಹೆಚ್ಚು ಸಮಯ ಕಳೆಯುವ ಸಾಧ್ಯತೆ ಇದೆ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರು ಅನಗತ್ಯ ಖರ್ಚು ತಪ್ಪಿಸಿ. ಕೌಟುಂಬಿಕವಾಗಿ ಸಂತಸದ ವಾತಾವಣ ಇರಲಿದೆ. ವ್ಯರ್ಥ ಆಲೋಚನೆಗಳಿಂದ ನೆಮ್ಮದಿ ಕೆಡುತ್ತದೆ. ಯೋಗ ಧ್ಯಾನದತ್ತ ಹೆಚ್ಚಿನ ಗಮನ ಹರಿಸಿ ಉದ್ಯೋಗ ಸ್ಥಳದಲ್ಲಿ ಕೆಲಸದ ಒತ್ತಡ ಹಾಗೂ ಅನಗತ್ಯ ಕಿರಿಕಿರಿ ಉಂಟಾಗಲಿದೆ. ಮಾತಿನಲ್ಲಿ ಎಚ್ಚರಿಕೆ ಇರಲಿ.











