ಮಾದನಾಯಕನಹಳ್ಳಿ ಪೊಲೀಸರು ಮುಂಬೈ (Mumbai) ಮೂಲದ ಕುಖ್ಯಾತ ಜೇಮ್ಸ್ ಅಲ್ಮೆಡ ಟೀಂ (James almeda team)ನ ಅರೆಸ್ಟ್ ಮಾಡಿದ್ದಾರೆ. ಮಾದನಾಯಕನಹಳ್ಳಿ, ಯಲಹಂಕ ಚಂದ್ರಾಲೇಔಟ್ ಸೇರಿ ಬೆಂಗಳೂರಿನ (Bangalore) 17 ಕಡೆ ಮನೆಗಳವು ಮಾಡಿದ್ದ ಕುಖ್ಯಾತ ಗ್ಯಾಂಗ್ ಇದಾಗಿದೆ.

ಇತ್ತೀಚೆಗೆ ಮಾದನಾಯಕನಹಳ್ಳಿಯ ಎರಡು ಮನೆಗಳಲ್ಲಿ 70 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ್ದ ಖದೀಮರ ಗ್ಯಾಂಗ್ ಪೊಲೀಸರಿಗೆ ತಲೆನೋವು ಕೊಟ್ಟಿತ್ತು. ಮೊಯಿನ್ ಖಾನ್, ಸಾಬಾಗಿಯಾಸುದ್ದೀನ್, ಗಿಯಾಸುದ್ದೀನ್, ಅನಿಲ್ ಜೈನ್, ಪ್ರವೀಣ್ ಜೈನ್ ಬಂಧಿತ ಆರೋಪಿಗಳು.

ಕಳ್ಳತನ ಮಾಡಿ ಕದ್ದ ಮಾಲನ್ನ ತನ್ನ ಅಕ್ಕ ಭಾವ ಸಾಬಾ ಹಾಗೂ ಗಿಯಾಸುದ್ದೀನ್ ಮೂಲಕ ಈ ಗ್ಯಾಂಗ್ ಮಾರಾಟ ಮಾಡಿಸುತ್ತಿತ್ತು. ಕೃತ್ಯದ ನಂತರ ಬೆಂಗಳೂರಿನ ಹಲವೆಡೆ ಕೈ ಚಳಕ ತೋರಿಸಿದ ನಂತರ ಈ ಆರೋಪಿಗಳು ಮುಂಬೈನಲ್ಲಿ ತಲೆಮರೆಸಿಕೊಳ್ತಿದ್ದರು.

ಈ ಮಾಹಿತಿ ಕಲೆಹಾಕಿದ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನ ಮುಂಬೈನಿಂದ ಬಂಧಿಸಿ ಕರೆತಂದಿದ್ದಾರೆ.ಪ್ರಕರಣದ ಪ್ರಮುಖ ಆರೋಪಿ ಜೇಮ್ಸ್ ಅಲ್ಮೇಡಾ ನಾಪತ್ತೆಯಾಗಿದ್ದು ಉಳಿದ ಆರೋಪಿಗಳ ಬಂಧನವಾಗಿದೆ.