ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ (Mass burials) ಸಂಬಂಧಿಸಿದಂತೆ, ಅನಾಮಿಕ ದೂರುದಾರ ನೀಡಿದ್ದ 16 ಪಾಯಿಂಟ್ ಗಳಲ್ಲಿ ಎಸ್.ಐ.ಟಿ (SIT) ಶೋಧ ಕಾರ್ಯಾಚರಣೆ ಮುಕ್ತಾಯವಾಗಿದ್ದು, ಇದುವರೆಗೂ ಯಾವುದೇ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿಲ್ಲ.

ಇನ್ನು ಪಾಯಿಂಟ್ 1ರಲ್ಲಿ ಸಿಕ್ಕ ಪ್ಯಾನ್ ಮತ್ತು ಡೆಬಿಟ್ ಕಾರ್ಡ್‌ಗಳು ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಯರ್ಮ್ಬ್ ಮಾಹಿತಿ ಲಭ್ಯವಾಗಿದೆ. ಆ ಬಳಿಕ ಪಾಯಿಂಟ್ 6ರಲ್ಲಿ ಪತ್ತೆಯಾದ 12 ಮೂಳೆಗಳು ಮತ್ತು ತಲೆಬುರುಡೆ ಅವಶೇಷಗಳ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ. ಪಾಯಿಂಟ್ 11ರ ಮೇಲ್ಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶವ ಪತ್ತೆಯಾಗಿತ್ತು ಎಂದು ವರದಿಯಾಗಿದೆ.

ಇನ್ನುಳಿದಂತೆ ಉಳಿದ 16 ಪಾಯಿಂಟ್‌ಗಳಲ್ಲಿ ಕೂಡ ಯಾವುದೇ ಅವಶೇಷಗಳು ಸಿಕ್ಕಿಲ್ಲ. ಹೀಗಾಗಿ ಮುಂದಿನ ವಿಚಾರಣೆ ಬಗ್ಗೆ ಇಂದು ಎಸ್‌ಐಟಿ ನಿರ್ಧಾರ ಕೈಗೊಳ್ಳಲಿದೆ. ಅಲ್ಲದೇ ಸದ್ಯದಲ್ಲೇ ಸಂಪೂರ್ಣ ವರದಿಯನ್ನ ಸರ್ಕಾರಕ್ಕೆ ತಂಡ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.







