ಆರ್.ಎಸ್.ಎಸ್ (RSS) ನಾಯಕ ದತ್ತಾತ್ರೇಯ ಹೊಸಬಾಳೆ (Dattatreya hosabale) ಸಂವಿಧಾನದ (Constitution) ಅಂಶಗಳ ತಿದ್ದುಪಡಿ ಕುರಿತು ನೀಡಿದ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಸಂಘ ಪರಿವಾರ ಬ್ಯಾನ್ ಮಾಡಬೇಕು ಎಂಬುದಾಗಿ ಹೇಳಿದ್ದರು.ಅವರ ಈ ಮಾತಿಗೆ ಬಿಜೆಪಿ ನಾಯಕರು ನಿಗಿ ನಿಗಿ ಕೆಂಡವಾಗಿದೆ.

ಸಚಿವ ಪ್ರಿಯಾಂಕ್ ಖರ್ಗೆ ಮಾತಿನ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಎಕ್ಸ್ ನಲ್ಲಿ ಪಿಸ್ಟ್ ಮಾಡಿದ್ದು , ಪ್ರಿಯಾಂಕ್ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮಾತಿರಲಿ, ಭವಿಷ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಯುತ್ತದೆಯೇ ಎಂಬ ಬಗ್ಗೆ ಪ್ರಿಯಾಂಕ್ ಖರ್ಗೆ ತಲೆಕೆಡಿಸಿಕೊಳ್ಳಲಿ ಎಂದು ಚಾಟಿ ಬೀಸಿದ್ದಾರೆ.

ಇದೇ ವೇಳೆ ಕಟುವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಖಂಡಿಸಿರುವ ವಿಜಯೇಂದ್ರ, ದಂಡಿಗೆದರಲಿಲ್ಲ..ದಾಳಿಗೆದರಲಿಲ್ಲ..ಈ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ? ಎನ್ನುತ್ತಾ ಪ್ರಿಯಾಂಕ್ ಖರ್ಗೆಯನ್ನು ಲೇವಡಿ ಮಾಡಿದ್ದಾರೆ.

