2024 ರ ಲೋಕಸಭಾ ಚುನಾವಣೆ ಹಿನ್ನೆಲೆ.
ಬಿಜೆಪಿಯಿಂದ ಈಗಾಗಲೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ.
ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ರೂ, ಬಿಜೆಪಿಗೆ ನಿಂತಿಲ್ಲ ಟೆನ್ಷನ್.
ಬಿಜೆಪಿಗೆ ಹಲವು ಕ್ಷೇತ್ರಗಳಲ್ಲಿ ಎದುರಾಗಿದೆ ಕಂಟಕ.

100% ಗೆಲುವು ಆಗಲಿದೆ ಎಂಬುದಕ್ಕಿಂತ 50:50 ಅವಕಾಶಗಳೇ ಎಲ್ಲೆಡೆ ಕಾಣುತ್ತಿದೆ.
ಗೆಲುವು ಸಾಧಿಸಿದ್ರೂ ಸಾಧಿಸಬಹುದು ಅಥವಾ ಬಿಜೆಪಿಗೆ ಆ ಕ್ಷೇತ್ರಗಳಲ್ಲಿ ಹಿನ್ನಡೆಯಾದ್ರೂ ಆಗಬಹುದು ಎಂಬ ಲೆಕ್ಕಾಚಾರದ ಟೆನ್ಷನ್ ಶುರುವಾಗಿದೆ.
ಹಾಗಾದ್ರೆ, ಯಾವುದು ಆ ಕ್ಷೇತ್ರಗಳು?

ಪ್ರತಿಧ್ವನಿ ಬಿಚ್ಚಿಡುತ್ತಿದೆ 50:50 ಅವಕಾಶವಿರುವ ಕ್ಷೇತ್ರಗಳ ಕಂಪ್ಲೀಟ್ ಚಿತ್ರಣವನ್ನ.
- ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್ v/s ಡಾ.ಸಿ. ಎನ್.ಮಂಜುನಾಥ್.
- ತುಮಕೂರು – ಎಸ್.ಪಿ. ಮುದ್ದುಹನುಮೇಗೌಡ v/s ವಿ. ಸೋಮಣ್ಣ.
- ಉಡುಪಿ – ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ v/s ಕೋಟ ಶ್ರೀನಿವಾಸಪೂಜಾರಿ.
- ದಾವಣಗೆರೆ – ಡಾ.ಪ್ರಭಾ ಮಲ್ಲಿಕಾರ್ಜುನ್ v/s ಗಾಯಿತ್ರಿ ಸಿದ್ದೇಶ್ವರ್.
- ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ v/s ಅಣ್ಣಾಸಾಹೇಬ್ ಜೊಲ್ಲೆ.
- ಬೀದರ್ – ರಾಜಶೇಖರ ಪಾಟೀಲ್ ಹುಮ್ನಾಬಾದ್ v/s ಭಗವಂತ ಖೂಬಾ.
- ಕೊಪ್ಪಳ – ರಾಘವೇಂದ್ರ ಹಿಟ್ನಾಳ್ v/s ಡಾ.ಬಸವರಾಜ ಕ್ಯಾವಟರ್.
- ಬಳ್ಳಾರಿ – ವಿ.ಎಸ್. ಉಗ್ರಪ್ಪ v/s ಬಿ.ಶ್ರೀರಾಮುಲು.

ಹೀಗೆ ಘೋಷಣೆಯಾಗಿರುವ 20 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಬಿಜೆಪಿಗೆ 50:50 ಚಾನ್ಸ್ ಎಂಬ ವಾತಾವರಣ ನಿರ್ಮಾಣ.
ಅಷ್ಟಕ್ಕೂ ಹೀಗೆ ಆಗಲು ಸಾಲು ಸಾಲು ಕಾರಣಗಳು ಕೂಡ ಇದೆ.
- ಹೊಸಮುಖದ ಅಭ್ಯರ್ಥಿಗಳ ಆಯ್ಕೆ, ಆಖಾಡದಲ್ಲಿ.
- ಕ್ಷೇತ್ರದಲ್ಲಿನ ಬಂಡಾಯ.
- ಚುನಾವಣೆ ಎದುರಿಸಿ ಅನುಭವವಿಲ್ಲದೇ ಇರುವುದು.
- ಅತಿಯಾದ ಆತ್ಮವಿಶ್ವಾಸ.
- ಕೇವಲ ರಾಷ್ಟ್ರೀಯ ನಾಯಕರನ್ನೇ ನಂಬಿ ಆಖಾಡಕ್ಕೆ ಧುಮುಕಿರುವುದು.
ಹೀಗೆ 50:50 ವಾತಾವರಣ ನಿರ್ಮಾಣವಾಗಿರುವುದಕ್ಕೆ ಕಾರಣಗಳು ಎನ್ನಲಾಗಿದೆ.
