ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಡ್ತಾಯಿರುವ ಸಮಸ್ಯೆ ಅಂದ್ರೆ ಸರಿಯಾದ ಸಮಯಕ್ಕೆ ಹಸಿವು ಆಗದೆ ಇರುವುದು.. ಇದು ಮುಖ್ಯವಾಗಿ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ರೆ ಹಸಿವು ಆಗುವುದಿಲ್ಲ. ಇಡಿ ದಿನ ತುಂಬಾ ಆಕ್ಟಿವ್ ಇದ್ರು ಕೂಡ ಹಸಿವು ಕಡಿಮೆನೆ . ಹಸಿವಿಲ್ಲದಿದ್ದರೆ ಊಟ ಮಾಡಲು ಕೂಡ ಆಸಕ್ತಿ ಇರುವುದಿಲ್ಲ.
ಸರಿಯಾದ ಸಮಯಕ್ಕೆ ಆಹಾರ ಸೇವಿಸದಿದ್ರೆ ಅಸಿಡಿಟಿ ಗ್ಯಾಸ್ಟ್ರಿಕ್ ಶುರುವಾಗತ್ತೆ.ಹಾಗೂ ಕಲಾವ್ರಿಗೆ ಇದರಿಂದ ನಾನಾ ಕಾಯಿಲೆಗಳು ಎದುರಾಗುತ್ತದೆ..ಹಾಗಾಗಿ ಪ್ರತಿದಿನ ಈ ಟಿಪ್ಸ್ ಫಾಲೋ ಮಾಡುವುದರಿಂದ ಹಸಿವಿನ ಸಮಸ್ಯೆಗೆ ತಕ್ಷಣ ಪರಿಹಾರ ಸಿಗುತ್ತದೆ.
ಗ್ರೀನ್ ಟೀ
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಗ್ರೀನ್ ಟೀಯನ್ನು ಕುಡಿಯುದರಿಂದ ಹಸಿವು ಆಗದೆ ಇರುವ ಸಮಸ್ಯೆ ನಿವಾರಣೆ ಆಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಟೈಮಲ್ಲಿ ಗ್ರೀನ್ ಟೀ ಕುಡಿಯುವ ಮೂಲಕ ನಿಮ್ಮ ಹೊಟ್ಟೆಯು ಶುದ್ಧಗೊಳ್ಳುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ.
ನಿಂಬೆಹಣ್ಣು
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧದಷ್ಟು ನಿಂಬೆಹಣ್ಣನ್ನು ಹಾಕಿ ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ ಹಾಗೂ ಹಸಿವು ಹೆಚ್ಚಾಗುತ್ತದೆ.
ತ್ರಿಫಲ ಪುಡಿ
ತ್ರಿಫಲ ಪುಡಿಯನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಒಂದು ಚಮಚದಷ್ಟು ತ್ರಿಫಲ ಪುಡಿಯನ್ನು ಒಂದು ಲೋಟದಷ್ಟು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಸೇವಿಸುವುದರ ಮೂಲಕ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ. ಇದರಿಂದ ಹಸಿವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಜೀರಿಗೆ
ಒಂದು ಲೋಟದಷ್ಟು ನೀರಿಗೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಉಗುರು ಬೆಚ್ಚ ಆದ ನಂತರ ಅದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಮುಖ್ಯವಾಗಿ ಎದೆ ಉರಿ ಕೂಡ ಕಡಿಮೆಯಾಗುತ್ತದೆ.
ಆದ್ರೆ ಕೆಲವರು ಹಸುವಿನ ಸಮಸ್ಯೆ ಇದ್ರೆ, ಜೀರ್ಣಕ್ರಿಯೆ ಸರಿಯಾಗಿ ಆಗದಿದ್ರೆ, ಅಥವಾ ಎದೆ ಉರಿ ಹೊಟ್ಟೆ ನೋವು ಗ್ಯಾಸ್ ಸಮಸ್ಯೆ ಇದ್ದರೆ ತಕ್ಷಣಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇವುಗಳನ್ನು ತ್ಯಜಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ.