ಪ್ರಜ್ವಲ್ (Prajwal revanna) ಮೊದಲ ಆತ್ಯಾಚಾರ ಕೇಸ್ ನಲ್ಲಿ ಇಂದು ವಾದ ಪ್ರತಿವಾದ ಆಲಿಸಿರುವ ಕೋರ್ಟ್ ತೀರ್ಪು ಕಾಯ್ದಿರಿಸಿ ಆದೇಶಿಸಿದೆ. ಎರಡು ಕಡೆ ವಾದ ಕೇಳಿದ ನ್ಯಾಯಾಲಯ ಇಂದು ಯಾವುದೇ ಆದೇಶ ಪ್ರಕಟ ಮಾಡಿಲ್ಲ.

ಎಸ್ಐಟಿ (SIT) ಪರವಾಗಿ ಎಸ್ಪಿಪಿ ಜಗದೀಶ್ (SPP jagadeesh) ವಾದ ಮಂಡನೆ ನ್ಯಾಯಾಲಯದ ಮುಂದೆ ವಾದ ಮಂಡನೆ ಮಾಡಿದ್ರೆ, ಇತ್ತ ಪ್ರಜ್ವಲ್ ರೇವಣ್ಣ ಪರ ಅರುಣ್ (Arun) ವಾದ ಮಂಡನೆ ಮಾಡಿದ್ರು. ಇಬ್ಬರ ವಾದ ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿದೆ.
ಈ ಪ್ರಕರಣದಲ್ಲಿ 26 ನೇ ತಾರೀಕು ತೀರ್ಪು ನೀಡುವುದಾಗಿ ಪೀಠ ಆದೇಶಿಸಿದೆ. ಸಿಸಿಎಚ್ 82 ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ರ ಪೀಠ ಆದೇಶ ಕಾಯ್ದಿರಿಸಿದ್ದು ಈ ಪ್ರಕರಣದಲ್ಲಿ ಪ್ರಜ್ವಲ್ ಭವಿಷ್ಯ ಏನಾಗಲಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.






