ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಮಾಜಿ ಸಚಿವ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಮಾಡಲಾಗಿದೆ. ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ FIR ದಾಖಲು ಆದ ಬೆನ್ನಲ್ಲೇ ಸುವರ್ಣಸೌಧಕ್ಕೆ ಆಗಮಿಸಿದ ಪೊಲೀಸರು ಸಿ.ಟಿ ರವಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಈಗಾಗಲೇ ಸಿಟಿ ರವಿ ವಿರುದ್ಧ BNS ಸೆಕ್ಷನ್ 75 ಮತ್ತು 79ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸೆಕ್ಷನ್ 75 ಲೈಂಗಿಕ ಕಿರುಕುಳ, ಸೆಕ್ಷನ್ 79 ಅಶ್ಲೀಲ ಸನ್ನೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 75 ಅಡಿ 3 ವರ್ಷಗಳ ತನಕ ಜೈಲು, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಅದೇ ರೀತಿ ಸೆಕ್ಷನ್ 79 ಪ್ರಕಾರ 3 ವರ್ಷಗಳವರೆಗೆ ಜೈಲು ಮತ್ತು ದಂಡ ವಿಧಿಸಲು ಅವಕಾಶವಿದೆ