ಈಗಾಗಲೇ ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿದ್ದು ಬಹುತೇಕ ಅಭ್ಯರ್ಥಿಗಳ ಆಯ್ಕೆ ಕಸರತ್ತು ಕೊನೆ ಹಂತದಲ್ಲಿದೆ. ಹೀಗಿರುವಾಗ ಏಪ್ರಿಲ್ ೨೬(April 26th) ಮತ್ತು ಮೇ ೭ (May 7th) ರಂದು ಎರಡು ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು ಈಗಾಗಲೇ ಕೆಲ ಅಭ್ಯರ್ಥಿಗಳು ಪ್ರಚಾರ ಕಾರ್ಯ ಆರಂಭಿಸಿದ್ದಾರೆ ಹಾಗೂ ಚುನಾವಣಾ ನೀತಿ ಸಂಹಿತೆ (Code of conduct) ಕೂಡ ಈಗಾಗಲೇ ಜಾರಿಯಲ್ಲಿದೆ. ಇನ್ನೇನಿದ್ರೂ ನಾಮಿನೇಷನ್ ಫೈಲ್ (Nomination) ಮಾಡೋದೊಂದೇ ಬಾಕಿ. ಅದಕ್ಕೂ ದಿನಾಂಕ ನಿಗದಿಯಾಗಿದೆ.
ಕಾಂಗ್ರೆಸ್ , ಬಿಜೆಪಿ ಮತ್ತು ಜೆಡಿಎಸ್ (congress,BJP,Jds) ಮೂರು ಪಕ್ಷಗಳು ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು , ಹುರಿಯಾಳುಗಳು ಅಖಾಡದಲ್ಲಿ ತೊಡೆ ತಟ್ಟಲು ಸಜ್ಜಾಗಿದ್ದಾರೆ. ಮಾರ್ಚ್ ೨೮ರಿಂದ (march 28th) ಉಮೇದುವಾರಿಕೆ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು , ನಂತರ ಮೊದಲ ಹಂತದ ಮತದಾನಕ್ಕೆ ಮುನ್ನ ಒಂದು ವಾರ ಚುನಾವಣೆಗೆ ಪ್ರಚಾರದ ಅವಧಿ ಸಿಗಲಿದೆ. ಹೀಗಾಗಿ ಈಗಾಗಲೇ ಟಿಕೆಟ್ (Ticket) ಗಿಟ್ಟಿಸಿರುವ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆಯ ಸಿದ್ಧತೆ ಆರಂಭಿಸಿದ್ದಾರೆ.
ಈ ಬಾರಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬೆಂಗಳೂರು ಗ್ರಾಮಾಂತರ (Bengaluru) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ (Congress candidate) ಸಂಸದ ಡಿಕೆ ಸುರೇಶ್ (Dk Suresh) ತಾವೇ ಮೊದಲಿಗರಾಗಿ ಮಾರ್ಚ್ ೨೮ರಂದೇ (March 28th) ಉಮೇದಿವಾರಿಕೆ ಸಲ್ಲಿಕೆಗೆ ಮುಂದಾಗಲಿದ್ದಾರೆ. ಆ ನಂತರ ಸಂಪೂರ್ಣ ಪ್ರಚಾರ ಕಾರ್ಯದಲ್ಲಿ ತೊಸಗಿಸಿಕೊಳ್ಳಲಿದ್ದಾರೆ. ಅದೇ ನಿಮಿತ್ತ ಇಂದು ತಮ್ಮ ನಿವಾಸದಲ್ಲಿ ಸಹೋದರ ಡಿಕೆ ಶಿವಕುಮಾರ್ (Dk Shivakumar ) ಒಟ್ಟಿಗೆ ಹೋಮ-ಹವನವನ್ನು ಕೂಡ ನೆರವೇರಿಸಿದ್ದಾರೆ.