ಇಂದು ಬಹುದೊಡ್ಡ ಕುತೂಹಲಕ್ಕೆ ಕಾರಣವಾಗಿದ್ದ ವಿಧಾನ ಪರಿಷತ್ ಮೂರು ಸ್ಥಾನಗಳ ವಿಚಾರಕ್ಕೆ ಸಂಬಂಧ ಮಹತ್ವದ ಬೆಳವಣಿಗೆಯೊಂದಿಗೆ ನಡೆದಿದೆ. ಇದೀಗ ಮೂವರ ಹೆಸರನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರದ ಶಿಫಾರಸಿಗೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ ಮಾಜಿ ಸಚಿವೆ ನಟಿ ಉಮಾಶ್ರೀ, ಎಂ.ಆರ್.ಸೀತಾರಾಮ್ ಹಾಗೂ ಸುಧಾಮ್ ದಾಸ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮನಿರ್ದೇಶನ ಮಾಡಿದ್ದರು, ಇದಕ್ಕೆ ಇದೀಗ ಅಂತಿಮವಾಗಿ ರಾಜ್ಯಪಾಲರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇನ್ನು ಪರಿಷತ್ ಸದಸ್ಯರಾಗಿ ಉಮಾಶ್ರೀ, ಎಂ.ಆರ್.ಸೀತಾರಾಮ್ ಹಾಗೂ ಸುಧಾಮ್ ದಾಸ್ ಅವರ ಹೆಸರನ್ನು ರಾಜ್ಯಪಾಲರು ಅನುಮೋದಿಸಿರುವ ಹಿನ್ನೆಲೆಯಲ್ಲಿ ಕೆಲ ಕಾಂಗ್ರೆಸ್ ನಾಯಕರಿಗೆ ಅಸಮಾಧಾನವುಂಟಾಗಿದೆ ಎನ್ನಲಾಗಿದೆ.

