ಸುಪ್ರೀಂ ಕೋರ್ಟ್ (Supreme court) ನಲ್ಲಿ ಜಾಮೀನು ರದ್ದಾದ ಹಿನ್ನಲೆ ನಟ ದರ್ಶನ್ (Actor darshan) ಮತ್ತೆ ಜೈಲು ಸೇರುವಂತಾಗಿದೆ. ಜಾಮೀನು ರದ್ದು ಪಡೆಸುವ ವೇಳೆ ಸುಪ್ರೀಂ ಕೋರ್ಟ್ ಜೈಲಿನಲ್ಲಿನ VIP ಟ್ರೀಟ್ಮೆಂಟ್ ಸಿಗಕೂಡದು ಎಂದು ಚಾಟಿ ಬೀಸಿದ ಬಳಿಕ ಜೈಲು ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಎಚ್ಚೆತ್ತಿದೆ. ಹೀಗಾಗಿ ಜೈಲಿನಲ್ಲಿ ದರ್ಶನ್ ವಿಲ ವಿಲ ಎನ್ನುವಂತಾಗಿದೆ.

ಹೌದು ಈ ಬಾರಿ ಅಪ್ಪಿತಪ್ಪಿಯೂ ದರ್ಶನ್ ಗೆ ಜೈಲಿನಲ್ಲಿ ವಿವಿಐಪಿ ಟ್ರೀಟ್ ಮೆಂಟ್ ಸಿಗುವಂತಿಲ್ಲ. ಹೀಗಾಗಿ ಜೈಲಿನಲ್ಲಿ ನಟ ರ್ಶನ್ ಜೀವನ ಶೈಲಿ ಇನ್ನಷ್ಟು ಕಷ್ಟಕರವಾಗಲಿದೆ. ಜೈಲು ಸಿಬ್ಬಂದಿ ದರ್ಶನ್ ಅಂಡ್ ಗ್ಯಾಂಗ್ ಮೇಲೆ ಹದ್ದಿನ ಕಣ್ಣೀರಿಸಿದ್ದಾರೆ. ಸದ್ಯ ಪರಪ್ಪನ ಅಗ್ರಹಾರದ ನೂತನ ಮಹಿಳಾ ಕೇಂದ್ರ ಕಾರಗೃಹ ಕೊಠಡಿ ಸಂಖ್ಯೆ 1 ರಲ್ಲಿ ‘ಡಿ’ ಗ್ಯಾಂಗ್ ಇದೆ.

ಇನ್ನು ಮಹಿಳೆಯರಿಗಾಗಿ ನೂತನವಾಗಿ ಕಾರಾಗೃಹ ನಿರ್ಮಾಣಗೊಂಡಿದ್ದು, ೫೦೦ ಖೈದಿಗಳನ್ನು ಇರಿಸುವ ಸಾಮರ್ಥ್ಯ ಹೊಂದಿದೆ.ಆದರೆ ಈ ಕಟ್ಟಡ ಇದುವರೆಗೂ ಉದ್ಘಾಟನೆಗೊಂಡು ಮಹಿಳಾ ಖೈದಿಗಳಿಗೆ ನೀಡಲಾಗಿಲ್ಲ. ಈಗ ಸದ್ಯ ದರ್ಶನ್ ಅಂಡ್ ಗ್ಯಾಂಗ್ ಅನ್ನು ಅದೇ ಸೆಲ್ ನಲ್ಲಿ ಇರಿಸಲಾಗಿದೆ.
ದಿನದ 24 ಗಂಟೆ ಕೂಡ ನಾಲ್ಕು ಗೋಡೆ ಮಧ್ಯೆಯೇ ಕಾಲ ಕಳಿಯಬೇಕಿದೆ. ಕಾರಿಡಾರ್ ನಲ್ಲಿ ವಾಕ್ ಮಾಡಲು ಕೂಡ ಅನುಮತಿ ಇಲ್ಲ ಎನ್ನಲಾಗಿದೆ. ಹೀಗಾಗಿ ಊಟ ತಿಂಡಿಯನ್ನು ಕೊಠಡಿಗೆ ಸಿಬ್ಬಂದಿ ಪೂರೈಕೆ ಮಾಡುತ್ತಿದ್ದಾರೆ. ದರ್ಶನ್ ಇರುವ ಕೋಣೆಯಲ್ಲಿ ಟಿವಿ ಕೂಡ ಇಲ್ಲ ಎನ್ನಲಾಗಿದೆ.