ರಾಜ್ಯದಲ್ಲಿ ಹಾಗು ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರು ಹೆದರುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಾವು ಸೋಂಕು ಹೆಚ್ಚಾಗಿ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೆರಡು ಕಠಿಣ ಕ್ರಮ ಜಾರಿ ಮಾಡಬೇಕೋ ಅಥವಾ ಬೇಡವಾ ಎಂದು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ದಿನದಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಂಭಾವ್ಯ ನಾಲ್ಕನೇ ಅಲೆಯ ಮುನ್ಸೂಚನೆಯನ್ನು ಸಚಿವ ಆದುತ್ಯ ಠಾಕ್ರೆ ನೀಡಿದ್ದಾರೆ. ಆದರೆ, ಯಾರು ಭಯಬೀಳಬೇಡಿ ಎಂದು ಹೇಳಿದ್ದಾರೆ.






