ಆಂಧ್ರ MLA ರಘುನಂದನ್ ರಾವ್‌ರನ್ನ ಭದ್ರತೆ (security)ಸಮಸ್ಯೆ ಅಂತ ಪೋಲಿಸರು(police) ಅಡ್ಡಗಟ್ಟಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ..! ಭದ್ರತೆ ಸಮಸ್ಯೆ ಸಾರ್ ಎಂದು ವಾಹನ ಅಡ್ಡಗಟ್ಟಿ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಪೊಲೀಸರು ಪ್ರಶ್ನೆ ಮಾಡಿದ್ದರು. ಇದಕ್ಕೆ ಕೂಡಲೇ ಸಿಟ್ಟಾದ ಶಾಸಕ ರಘುನಂದನ್ ನಿಮಗೆ ನನ್ನ ಕಾರಿನಲ್ಲಿ ಏನು ಸಮಸ್ಯೆ ? ಬನ್ನಿ ನಮ ಕಾರಿನಲ್ಲಿ ಹೋಗೋಣ ಅಂತ ಪ್ರಶ್ನೆ ಮಾಡಿದ ಶಾಸಕ ರಘುನಂದನ್ ರಾವ್.
ಅದಕ್ಕೆ ಪೋಲಿಸರು ಒಪ್ಪದಿದ್ದಾಗ ಕೂಡಲೇ ಕಾರಿನಿಂದ ಇಳಿದು ನಡಿಗೆಯಲ್ಲೇ ಕೆಲವು ದೂರ ನಡೆದು ಪೋಲಿಸರಿಗೆ ಬಿಸಿ ಮುಟ್ಟಿಸಿದ್ದಾರೆ. ಪೊಲೀಸರು ಎಷ್ಟೇ ಪ್ರಯತ್ನಿಸಿದರು ಸಹ ಕಾರು ಏರಲು ಒಪ್ಪದ ಶಾಸಕ ರಘುನಂದನ್ ರಾವ್ ಮಾಧವನೇನಿ ಕಿಲೋಮೀಟರ್ ಗಟ್ಟಲೇ ನಡೆದಿದ್ದಾರೆ.
ಇನ್ನು ರಘುನಂದನ್ ರಾವ್ ರನ್ನ ಅರೆಸ್ಟ್ ಮಾಡೋ ಸಲುವಾಗಿ ಆತನ ಕಾರು ಅಡ್ಡಗಟ್ಟಿದ್ದರು ಅಂತ ಹಲವು ಆರೋಪಗಳು ಕೇಳಿ ಬಂದಿದ್ದವು. ಯಾವಾಗ ಪೋಲಿಸರ ಒತ್ತಾಯ ಜಾಸಿಯಾಯ್ತೋ ಅವಾಗ ನನಗೆ ನೋಟಿಸ್ ಕೊಡಿ ಯಾಕೆ ಅರೆಸ್ಟ್ ಮಾಡುತ್ತಿದ್ದೀರಿ ಅಂತ ಶಾಸಕ ರಘುನಂದನ್ ರಾವ್ ಪ್ರಶ್ನೆ ಮಾಡಿದ್ರು. ಯಾವುದೇ ಉತ್ತರ ಕೂಡ ಇವಾಗ ಕೊಡೋದಿಕ್ಕೆ ಆಗಲ್ಲ ದಯವಿಟ್ಟು ನಮ್ಮ ಜೊತೆ ಬನ್ನಿ ಸಾರ್ ಏಂದ ಪೊಲೀಸರಿಗೆ, “ನಿಮ್ಮ ಸಮವಸ್ತ್ರದ ನೇಮ್ ಬ್ಯಾಡ್ಜ್ ಅಂತ ಪ್ರಶ್ನೆ ಸಹ ಮಾಡಿದ್ರು..! ನನ್ನ ದಾರಿಯಲ್ಲಿ ಯಾಕೆ ಅಡ್ಡ ಬರುತ್ತೀದ್ದೀರಾ ನನಗೆ ದಾರಿ ಬಿಡಿ ಅಂದಾಗ, ಸಾರ್ ಎಲ್ಲಾ ವಿಷಯಗಳನ್ನ ಹೇಳುತ್ತೇವೆ ನಮ್ಮ ಕಾರಲ್ಲಿ ದಯವಿಟ್ಟು ಬನ್ನಿ ಅಂತ ಪೋಲಿಸರು ಪುನಃ ರಾಗ ಎಳೆದಿದ್ದಾರೆ. ಕೂಡಲೇ ತಮ್ಮ ಬೈಕ್ ಮತ್ತು ಕಾರುಗಳನ್ನ ಬಳಸಲು ಸ್ಥಳೀಯರ ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನು ಸಹ ಓದಿ: ಸಿಲಿಕಾನ್ ಸಿಟಿಯಲ್ಲಿ 2 ತಿಂಗಳಲ್ಲಿ 3,200ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆ; 7 ಮಂದಿ ಸಾವು
ಇನ್ನು ಸ್ಥಳಕ್ಕೆ ಯಾರನ್ನ ಕರೆಸುತ್ತಿರೋ ಕರೆಸಿ ಎಂದು ಪಟ್ಟು ಹಿಡಿದ MLA ಪಟ್ಟು ಹಿಡಿದು ಕುಳಿತಿದ್ರು.ಸಾರ್ ಕಾರಿನಲ್ಲಿ ಹತ್ತಿ ಸಾರ್ ಎಂದರು ಕ್ಯಾರೇ ಎನ್ನದೇ ಕಾಲುನಡಿಗೆಯಲ್ಲೇ ಪ್ರಯಾಣ ಮಾಡಿದ್ರು.
ಸ್ಥಳದಲ್ಲಿದ್ದ ಜನರನ್ನ ಮಾತನಾಡಿಸಿ ಅವರ ಅಹವಾಲನ್ನು ಸಹ ಸ್ವೀಕಾರ ಮಾಡಿದ್ರು. ಇದೀಗ ಇವರ ದಿಟ್ಟ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.