ಕಾರ್ಮಿಕ ಸಚಿವ ಸಂತೀಶ್ ಲಾಡ್ (Santosh lad) ಪ್ರಧಾನಿ ನರೇಂದ್ರ ಮೋದಿ (Pm modi) ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ (Mak in india) ಪರಿಕಲ್ಪನೆಯನ್ನು ಸಂತೋಷ್ ಲಾಡ್ ಟೀಕಿಸಿದ್ದು, ಛತ್ರಿಯನ್ನು ನಾವು ವಿದೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಹರಿಹಾಯ್ದಿದ್ದಾರೆ.

ಭಾರತದ 200 ಮಿಲಿಯನ್ ಡಾಲರ್ ರಫ್ತು ವ್ಯಾಪಾರ ಕುಸಿತ ಕಂಡಿದೆ.ಹಾಗಿದ್ರೆ , ಪ್ರಧಾನಿ ಮೋದಿ ಹೇಳಿಕೊಳ್ಳುತ್ತಿದ್ದ ‘ಮೇಕ್ ಇನ್ ಇಂಡಿಯಾ’ ಯೋಜನೆ ಎಲ್ಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.ಇನ್ನು ದೇಶದಲ್ಲಿ ಭ್ರಷ್ಟಚಾರ ಇಲ್ಲ ಎಂದು ಯಾವ ಮಾನದಂಡದ ಆಧಾರದ ಮೇಲೆ ಬಿಜೆಪಿಯವರು ಹೇಳುತ್ತಿದ್ದಾರೆ. ಭಾರತವನ್ನು ವಿಶ್ವಗುರು ಎಂದು ಬಿಂಬಿಸಲಾಗುತ್ತಿದೆ. ಆದರೆ, ಅಕ್ಕಪಕ್ಕದ ಯಾವ ದೇಶದ ಜೊತೆ ನಾವು ಚೆನ್ನಾಗಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

ಅದಾನಿ ಬಂದರಿನಲ್ಲಿ 21 ಸಾವಿರ ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳು ಸಿಕ್ಕಿವೆ ಎಂದು ಆರೋಪಿಸಿರುವ ಸಂತೋಷ್ ಲಾಡ್ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಟ್ಟಿಂಗ್ ಆಪ್‍ನಲ್ಲಿ ದಂಧೆ ನಡೆಸುವವರಿಂದ ಹಾಗೂ ದನದ ಮಾಂಸ ರಫ್ತು ಮಾಡುವವರಿಂದ ಬಿಜೆಪಿ ಪಕ್ಷ ಚಂದಾ ವಸೂಲಿ ಮಾಡಿ ಪಕ್ಷದ ಕಚೇರಿ ನಿರ್ಮಾಣ ಮಾಡುತ್ತಿದೆ. ಜನತೆ ಇವರನ್ನು ನಂಬಬೇಕೇ? ಎಂದು ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.

