• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಕ್ರೀಡಾ ಇಲಾಖೆಯಲ್ಲಿ ನೋ ಕಾಮಗಾರಿ.. ಬಿಲ್ ಬಿಡುಗಡೆಗೆ ಅಡ್ಡಿಯಿಲ್ಲ..

ಕೃಷ್ಣ ಮಣಿ by ಕೃಷ್ಣ ಮಣಿ
April 24, 2024
in Uncategorized
0
ಕ್ರೀಡಾ ಇಲಾಖೆಯಲ್ಲಿ ನೋ ಕಾಮಗಾರಿ.. ಬಿಲ್ ಬಿಡುಗಡೆಗೆ ಅಡ್ಡಿಯಿಲ್ಲ..
Share on WhatsAppShare on FacebookShare on Telegram

ಜಯಪ್ರಕಾಶ್​​ ನಾರಾಯಣ್ (Jayaprakash Narayayan)​ ರಾಷ್ಟ್ರೀಯ ಯುವ ತರಬೇತಿ ಕೇಂದ್ರ, ಕ್ರೀಡಾ ಇಲಾಖೆ ಅಡಿಯಲ್ಲಿ ಕೆಲಸ ಮಾಡುವ ಸಂಸ್ಥೆ. ಸರ್ಕಾರದಿಂದ ಅನುದಾನ ಪಡೆದು ಕ್ರೀಡೆಗಳ ಬಗ್ಗೆ ತರಬೇತಿ ಕೊಟ್ಟು ಯುವ ಜನಾಂಗಕ್ಕೆ ಕ್ರೀಡೆಯತ್ತ ಆಸಕ್ತಿ ಬೆಳೆಯುವಂತೆ ಮಾಡಬೇಕಿರುವ ಸಂಸ್ಥೆ. ಆದರೆ ಕಳೆದ 5 ವರ್ಷಗಳಲ್ಲಿ ಈ ಸಂಸ್ಥೆಗೆ ಕೋಟಿ ಕೋಟಿ ಹಣ ಸರ್ಕಾರದಿಂದ ಹರಿದು ಬಂದಿದ್ದರೂ ಕಾಮಗಾರಿ ಮಾತ್ರ ಕಣ್ಣಿಗೆ ಕಾಣಿಸುತ್ತಿಲ್ಲ. Youth Training Centre ಕಾಮಗಾರಿಗಳ ಪಟ್ಟಿ ಪುಟಗಟ್ಟಲೆ ಇದೆ. ಆದರೆ ಕಾಮಗಾರಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಜೊತೆಗೆ ಅಲ್ಲಿರುವ ಸಿಬ್ಬಂದಿ ವರ್ಗ ನಡೆದುಕೊಳ್ಳುವ ರೀತಿನೀತಿಗಳನ್ನು ನೋಡಿದರೆ ಅನುಮಾನಕ್ಕೆ ಎಡೆ ಮಾಡಿಕೊಡ್ತಿದೆ.

ADVERTISEMENT

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ವಿದ್ಯಾ ನಗರದಲ್ಲಿ ಸುಮಾರು 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಜಯಪ್ರಕಾಶ್​​ ನಾರಾಯಣ್​ ರಾಷ್ಟ್ರೀಯ ಯುವ ತರಬೇತಿ ಕೇಂದ್ರವಿದೆ. ಅಲ್ಲಿನ ಪರಿಸ್ಥಿತಿ ನೋಡಿದರೆ ಇದು ತರಬೇತಿ ಕೇಂದ್ರವೇ..? ಅನ್ನೋ ಮಟ್ಟದಲ್ಲಿದೆ. ಯಾವುದೇ ಪರಿಕರಗಳು ಇಲ್ಲ, ಯಾವುದೇ ಕಟ್ಟವಿಲ್ಲ. ಹಾಳುಬಿದ್ದ ಕೊಂಪೆಯಂತೆ ಕಾಣಿಸುವ ಈ ಜಯಪ್ರಕಾಶ್​​ ನಾರಾಯಣ್​ ರಾಷ್ಟ್ರೀಯ ಯುವ ತರಬೇತಿ ಕೇಂದ್ರದ( Sri Jayaprakash Narayan National Youth Training Center Bengaluru) ಹೆಸರಲ್ಲಿ ಕಳೆದ 5 ವರ್ಷಗಳಲ್ಲಿ(Last 5 Years) ನಡೆದಿರುವ ಕಾಮಗಾರಿಗಳ ಪಟ್ಟಿ ಅಕ್ರಮದ ವಾಸನೆ ಬರುವಂತೆ ಮಾಡಿದೆ. ಇಡೀ ಕಾಮಗಾರಿ ಪಟ್ಟಿ ನೋಡಿದಾಗ ಕೇವಲ ಮೂರ್ನಾಲ್ಕು ಜನರಿಗೆ ಮಾತ್ರ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಇರುವ ಮೂವರಲ್ಲೂ ಒಬ್ಬರಿಗೇ ಶೇಕಡ 90 ರಷ್ಟು ಕಾಮಗಾರಿ ಕೊಟ್ಟಿರುವುದು ಸಿಕ್ಕಿರುವ ದಾಖಲೆಗಳಲ್ಲಿ ಗೊತ್ತಾಗ್ತಿದೆ. ಇನ್ನೂ ನಡೆದಿರುವ ಕಾಮಗಾರಿಗಳು ಕಂಪ್ಲೀಟ್​ ಆಗಿಲ್ಲ. ಕಂಪ್ಲೀಟ್​ ಆಗಿರುವ ಕಾಮಗಾರಿಗಳು ಗುಣಮಟ್ಟ ಇಲ್ಲದೆ ಇರುವುದು ಪತ್ತೆಯಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ 45 ರಿಂದ 50 ಕೋಟಿ ಹಣ ಬಿಡುಗಡೆ ಆಗಿದೆ. ಅದರಲ್ಲಿ ಪ್ರಮುಖ ಆಗಿರುವ ಕಾಮಗಾರಿಗಳ ಬಗ್ಗೆ ಗಮನಹರಿಸುವುದಾದರೆ ಸ್ವಿಮ್ಮಿಂಗ್​ ಪೂಲ್​, (swimming Pool) ಡಿ ಗ್ರೂಪ್​ ನೌಕರರ ವಸತಿ ಗೃಹ ನಿರ್ಮಾಣ, ಭೋಜನಾಲಯ, ಬಾಕ್ಸಿಂಗ್​ ಹಾಲ್, ಕ್ರೀಡಾ ವಸತಿ ನಿಲಯಕ್ಕೆ ಒಳವಿನ್ಯಾಸ, ಸಿಂಥೆಟಿಕ್​ ಟೆನ್ನಿಸ್​ ಕೋರ್ಟ್​, ಫುಟ್ಬಾಲ್​ ಅಂಕಣಕ್ಕೆ ಚೈನ್​ ಲಿಂಕ್​ ಫೆನ್ಸಿಂಗ್​, ಒಳಾಂಗಣ ಕ್ರೀಡಾಂಗಣ ಬಳಿ ವಾರ್ಮ್​ ಅಪ್​ ಹಾಲ್​ ನಿರ್ಮಾಣ ಹೀಗೆ ಪಟ್ಟಿ ಮಾತ್ರ ಮುಗಿಯುವುದಿಲ್ಲ. ಈ ಎಲ್ಲಾ ಕಾಮಗಾರಿಗಳನ್ನು ನೋಡುವುದಕ್ಕೆ ಖುದ್ದು ಭೇಟಿ ಕೊಟ್ಟರೆ ಜಯಪ್ರಕಾಶ್​​ ನಾರಾಯಣ್​ ರಾಷ್ಟ್ರೀಯ ಯುವ ತರಬೇತಿ ಕೇಂದ್ರದಲ್ಲಿ ಬೇರೇನೂ ಕಾಣಿಸುವುದಿಲ್ಲ. ಇಲ್ಲಿ ಇಷ್ಟೊಂದು ಕೋಟಿ ಹಣ ಬಿಡುಗಡೆ ಆದರೂ ಯಾವುದೂ ಕ್ರೀಡಾಪಟುಗಳ (Sports)ಅನುಕೂಲಕ್ಕೆ ಬಂದಿಲ್ಲ. ಉದ್ದೇಶಪೂರ್ವಕವಾಗಿ ಟೆಂಡರ್​ಗೆ ಒಳಪಡದಂತೆ 2 ಕೋಟಿ ಮಿತಿಯಲ್ಲಿ ಹಣ ಬಿಡುಗಡೆ ಮಾಡಿಕೊಂಡು ಗೋಲ್ಮಾಲ್​ ಮಾಡಿರುವ ಅಂಶ ಮೇಲ್ನೋಟಕ್ಕೆ ಎದ್ದು ಕಾಣಿಸುತ್ತಿದೆ.

ಬೆಂಗಳೂರಿನ ನಿರ್ಮಿತಿ ಕೇಂದ್ರ ಹಾಗು ಕರ್ನಾಟಕ ರೂರಲ್​ ಇನ್ಫಾಸ್ಟ್ರಕ್ಚರ್​ ಡೆವಲಪ್​ಮೆಂಟ್​ ಲಿಮಿಟೆಡ್​ ಸಂಸ್ಥೆಗಳ ಹೆಸರಲ್ಲಿ 2 ಕೋಟಿಗೂ ಕಡಿಮೆ ವೆಚ್ಚದ ಕಾಮಗಾರಿ ಎಂದು ಟೆಂಡರ್​ ಇಲ್ಲದೆ ಯೋಜನೆಗೆ ಹಣ ಬಿಡುಗಡೆ ಮಾಡಿಕೊಳ್ಳಲಾಗಿದೆ. ಆದರೆ ಕಾಮಗಾರಿಯನ್ನೇ ನಡೆಸದೆ ಹಣವನ್ನು ಗುಳುಂ ಸ್ವಾಹಃ ಮಾಡಿರುವ ಅನುಮಾನ ಮೂಡುತ್ತಿದೆ. ಕಳೆದ 5 ವರ್ಷಗಳಿಂದ ಇದೇ ರೀತಿಯ ಗೋಲ್ಮಾಲ್ (Golamal)​ ಈಗಲೂ ಮುಂದುವರಿದಿರುವ ಸಾಧ್ಯತೆಯಿದೆ. ಸಂಬಂಧ ಪಟ್ಟ ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಕ್ರೀಡಾ ಸಚಿವರ ಗಮನಕ್ಕೆ ಈ ವಿಚಾರ ಬಂದಿದೆಯೋ..? ಇಲ್ಲವೋ ಅನ್ನೋದು ಬಯಲಾಗಬೇಕಿದೆ. ಒಂದು ವೇಳೆ ಸಚಿವರೇ ಭಾಗಿದಾರರು ಆಗಿದ್ದರ ಸಾರ್ವಜನಿಕರ ತೆರಿಗೆ ಹಣ ಕಳ್ಳ ಖದೀಮರ ಜೇಬು ಸೇರುತ್ತಿರುವುದು ಖಚಿತ ಎನ್ನಬಹುದು. ಹಿರಿಯ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಈ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ.

ಕೃಷ್ಣಮಣಿ

Tags: Jayaprakash Narayan CenterKRIDLNirmithi KendraSportsVidya Nagaraಕ್ರೀಡಾ ತರಬೇತಿ ಕೇಂದ್ರಯುವನಿಕ
Previous Post

ಚುನಾವಣಾ ಬಾಂಡ್​.. ಜೆಡಿಎಸ್​​ ಪಾರ್ಟಿಗೆ ಬಂದಿದ್ದೆಷ್ಟು ಕೋಟಿ..?

Next Post

ಹಳೆ ನೂರು ರೂಪಾಯಿ ನೋಟು ರದ್ದಾಗುತ್ತಾ ?! ಏನಿದು ವಾಟ್ಸಾಪ್ ಮೆಸೇಜ್ ?! 

Related Posts

Uncategorized

ಇಂಧನ ಇಲಾಖೆಯ 447.73 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

by ಪ್ರತಿಧ್ವನಿ
July 19, 2025
0

ಚಾವಿಸನಿನಿಯ 408.95 ಕೋಟಿ ರೂ.ಗಳ ನಾಲ್ಕು ಕಾಮಗಾರಿಗಳು ಕೆಪಿಟಿಸಿಎಲ್ ನ 38.78 ಕೋಟಿ ರೂ.ಗಳ ಎರಡು ಕಾಮಗಾರಿಗಳು ಮೈಸೂರು, ಜುಲೈ 19, 2025ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ...

Read moreDetails

ಸಹಿಸಿಕೊಳ್ಳೋ ಯೋಗ್ಯತೆಯಿಲ್ಲ ಅಂದ್ರೆ ರಾಜಕಾರಣಕ್ಕೆ ಯಾಕೆ ಬರಬೇಕು?

July 19, 2025
ದೊಡ್ಡ ತೂಗುಸೇತುವೆ

ದೊಡ್ಡ ತೂಗುಸೇತುವೆ

July 18, 2025

CM Siddaramaiah: ಹಿಂಸೆ ಹಾಗೂ ಪ್ರಚೋದನೆಗಳನ್ನು ತಡೆದರೆ ಸಮಾಜದ ಒಳಿತು ಸಾಧ್ಯ..

July 16, 2025

Basavaraj Bommai: ಜಿಟಿಟಿಸಿ ತರಬೇತಿ ಪಡೆಯುವವರಿಗೆ ಒಳ್ಳೆಯ ಭವಿಷ್ಯವಿದೆ..

July 16, 2025
Next Post
ಹಳೆ ನೂರು ರೂಪಾಯಿ ನೋಟು ರದ್ದಾಗುತ್ತಾ ?! ಏನಿದು ವಾಟ್ಸಾಪ್ ಮೆಸೇಜ್ ?! 

ಹಳೆ ನೂರು ರೂಪಾಯಿ ನೋಟು ರದ್ದಾಗುತ್ತಾ ?! ಏನಿದು ವಾಟ್ಸಾಪ್ ಮೆಸೇಜ್ ?! 

Please login to join discussion

Recent News

Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
Top Story

Lakshmi Hebbalkar: ಗೃಹಲಕ್ಷ್ಮೀ ಯೋಜನೆಯ ಜಂಟಿ ಹೊಣೆಗಾರಿಕೆ ಗುಂಪುಗಳ ಕುರಿತು ಸಭೆ

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada