ಕಳೆದ ಹಲವು ದಿನಗಳಿಂದ ಅಕ್ಬರುದ್ದೀನ್ ಅವರ, “ವಿಶ್ವಬ್ಯಾಂಕ್‌ನಲ್ಲಿ ಭಾರತದ ಪ್ರತಿ ಪೈಸೆ ಸಾಲವನ್ನು ತೀರಿಸಿದ್ದಾರೆ, ಎಲ್ಲವನ್ನೂ ಪಾವತಿಸಲಾಗಿದೆ. ಭಾರತದಿಂದ ಯುಎನ್ ನಲ್ಲಿ ಸಂಪೂರ್ಣ ಇತ್ಯರ್ಥವನ್ನು ಮಾಡಲಾಗಿದೆ, ಭಾರತದಲ್ಲಿ ಕೆಲವು ಆರ್ಥಿಕ ಕುಸಿತದ ಬಗ್ಗೆ ಮಾತನಾಡುತ್ತಿದ್ದ ಆ ವ್ಯಕ್ತಿ ಯಾರು?” ಎಂಬ ಟ್ವೀಟ್ ಸ್ಕ್ರೀನ್ ಶಾಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಆ ಒಂದು ಟ್ವೀಟ್ ಇಟ್ಟುಕೊಂಡು ಬಿಜೆಪಿ / ಮೋದಿ ಅಭಿಮಾನಿಗಳು ಕ್ಲೈಮ್ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಪ್ಯಾಕ್ಟ್ ಚೆಕ್ ಮಾಡಿರುವ ಆಲ್ಟ್ ನ್ಯೂಸ್ ನವರು ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ
ಹೌದು, ಪ್ರಧಾನಿ ಮೋದಿ ಆಡಳಿತದ 6 ವರ್ಷಗಳ ಅವಧಿಯಲ್ಲಿ ವಿಶ್ವಬ್ಯಾಂಕ್ನ ಎಲ್ಲಾ ಸಾಲಗಳನ್ನು ಭಾರತ ಮರುಪಾವತಿ ಮಾಡಿಲ್ಲ. ಅದಕ್ಕೆ ಪೂರಕವಾದ ಪುರಾವೆಗಳು ಇಲ್ಲಿವೇ.
ಅಕ್ಬರುದ್ದೀನ್ ಅವರ ಟ್ವೀಟ್ ಅನ್ನು ರಿ ಟ್ವೀಟ್ ಮಾಡಿರುವ ಒರ್ವ ವ್ಯಕ್ತಿ, “70 ವರ್ಷಗಳ ಕಾಲ ಭಾರತವು ವಿಶ್ವಬ್ಯಾಂಕಿನಲ್ಲಿ ಅತಿ ದೊಡ್ಡ ಸಾಲಗಾರನಾಗಿತ್ತು, ಒಮ್ಮೆ ಹುಟ್ಟಿದ ಪ್ರತಿಯೊಬ್ಬ ಭಾರತೀಯನು ಸಾಲಗಾರನಾಗಿದ್ದನು, ಮಹಾನ್ ಅರ್ಥಶಾಸ್ತ್ರಜ್ಞರು ಮಾಡಲಾಗದ ಕೆಲಸಗಳನ್ನು ಚಾಯ್ ವಾಲಾ ಮಾಡಿದ್ದಾರೆ, ಅವರು ಭಾರತದ ಮತ್ತು ಭಾರತೀಯರ ಭವಿಷ್ಯವನ್ನು 6 ವರ್ಷಗಳಲ್ಲಿ ಬದಲಾಯಿಸಿದ್ದಾರೆ. ನರೇಂದ್ರ ಮೋದಿಯವರು ವಿಶ್ವಬ್ಯಾಂಕ್‌ನ ಭಾರತದ ಪ್ರತಿ ಪೈಸೆ ಸಾಲವನ್ನು ತೀರಿಸಿದ್ದಾರೆ, ಎಲ್ಲವನ್ನೂ ಪಾವತಿಸಲಾಗಿದೆ. ಭಾರತದಿಂದ ಯುಎನ್ ನಲ್ಲಿ ಸಂಪೂರ್ಣ ಇತ್ಯರ್ಥವನ್ನು ಮಾಡಲಾಗಿದೆ, ಆದರೆ ಭಾರತದಲ್ಲಿ ಆರ್ಥಿಕ ಕುಸಿತದ ಬಗ್ಗೆ ಮಾತನಾಡುತ್ತಿದ್ದ ಆ ವ್ಯಕ್ತಿ ಯಾರು? #UNLoanCleared #ModiHaiToMumkinHai. ” ಎಂದು ಬರೆದುಕೊಂಡಿದ್ದಾನೆ.
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಬಳಸಿ ಈ ಮೇಲಿನ ಕ್ಲೈಮ್ ಮಾಡಿ ಸಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗಿದೆ. ಅವರ ಸ್ಕ್ರೀನ್ ಶಾಟ್ ವಾಟ್ಸ್ ಆಪ್ ನಲ್ಲಿ ಕೂಡ ಹರಿದಾಡುತ್ತಿದ್ದು ಆಲ್ಟ್ ನ್ಯೂಸ್ ತನ್ನ ಅಧಿಕೃತ ಮೊಬೈಲ್ ಅಪ್ಲಿಕೇಶನ್ನಲ್ಲಿ ಹಲವಾರು ವಿನಂತಿಗಳನ್ನು ಸ್ವೀಕರಿಸಿದ ನಂತರ ಪ್ಯಾಕ್ಟ್ ಚೆಕ್ ಮಾಡಿದೆ.
ಸತ್ಯ ಪರಿಶೀಲಿನೆ –
ಸಾಮಾಜಿಕ ಮಾಧ್ಯಮದ ಕ್ಲೈಮ್ ಮಾಡಿಕೊಳ್ಲಲಾದ ವಿಷಯ ಸಂಪೂರ್ಣ ತಪ್ಪಾಗಿದ್ದು ಆಲ್ಟ್ ನ್ಯೂಸ್ ಪ್ರತಿಯೊಂದನ್ನು ಪ್ರತ್ಯೇಕವಾಗಿ ನೋಡಿ ಪರಿಶೀಲಿಸಿದೆ.
ಮೊದಲನೆಯದಾಗಿ ಸೈಯದ್ ಅಕ್ಬರುದ್ದೀನ್ ಅವರ ಅಕ್ಟೋಬರ್ 11 ರ ಟ್ವೀಟ್ ವಿಶ್ವಸಂಸ್ಥೆಗೆ ಬಾಕಿ ಪಾವತಿ ಮತ್ತು ವಿಶ್ವಬ್ಯಾಂಕಿನಿಂದ ಪಡೆದ ಸಾಲಗಳ ಬಗ್ಗೆ ಅಲ್ಲವೇ ಅಲ್ಲ.
ಅಕ್ಬರುದ್ದೀನ್ ಅವರ ಟ್ವೀಟ್ ಅನ್ನು ” ಕೆಳಗಿನ 35 ರಾಜ್ಯಗಳು ಮಾತ್ರ @UN ಗೆ ಎಲ್ಲಾ ಬಾಕಿಗಳನ್ನು ಪಾವತಿಸಿವೆ. ಎಂದು ಸಂಪೂರ್ಣ ತಿರುಚಿದ್ದಾರೆ. ಆದರೆ ನಿಜವಾಗಿಯೂ ಅಕ್ಬರುದ್ದೀನ್ ಮಾತಾಡಿರುವುದು ವಿಶ್ವಸಂಸ್ಥೆಯ ಬಾಕಿಗಳ ನೆರವೇರಿಕೆಯ (Akbaruddin was talking about the fulfilment of dues to the United Nations) ಬಗ್ಗೆ ಎಂಬುದು ಸ್ವತಃ ಅವರ ಟ್ವೀಟೇ ಸ್ಪಷ್ಟಪಡಿಸುತ್ತದೆ.
ಅಕ್ಟೋಬರ್ 11, 2019 ರಂದು ಪ್ರಕಟವಾದ ಅಂತಾರಾಷ್ಟ್ರೀಯ ಸಂಸ್ಥೆಗೆ ಎಲ್ಲಾ ಮೌಲ್ಯಮಾಪನ ಬಾಕಿಗಳನ್ನು ಪಾವತಿಯನ್ನು ‘ವಿಶ್ವಸಂಸ್ಥೆಯ ಆರ್ಥಿಕ ಪರಿಸ್ಥಿತಿ’ ಪಟ್ಟಿ ಮಾಡಿ ಚಾರ್ಟ್ ಅನ್ನು ಬಿಡುಗಡೆ ಮಾಡಿತ್ತು. ಆ ಚಾರ್ಟ್ ಅನ್ನೇ ಅಕ್ಬರುದ್ದೀನ್ ಲಗತ್ತಿಸಿ ಟ್ವೀಟ್ ಮಾಡಿದ್ದರು.
ಯುಎನ್ ಈ ವರದಿಯನ್ನು ಎರಡು ವರ್ಷಕ್ಕೊಮ್ಮೆ ಬಿಡುಗಡೆ ಮಾಡುತ್ತದೆ. ಮೇ 2019 ರಲ್ಲಿ ಬಿಡುಗಡೆಯಾದ ಹಿಂದಿನ ವರದಿಯು ಭಾರತವು ಎಲ್ಲಾ ಮೌಲ್ಯಮಾಪನ ಬಾಕಿಗಳನ್ನು ಪಾವತಿಸಿದೆ ಎಂದು ಪ್ರತಿಬಿಂಬಿಸುತ್ತದೆ.
- ವಿಶ್ವಸಂಸ್ಥೆಗೆ ಪಾವತಿಸಿದ ಬಾಕಿಯು ಸಾಲಗಳ ಮರುಪಾವತಿಯಲ್ಲ
ವಿಶ್ವಸಂಸ್ಥೆಗೆ ಪಾವತಿಸಿದ ಬಾಕಿಯು ಸಾಲ ಮರುಪಾವತಿಯಲ್ಲ ಎಂಬುದು ಗಮನಾರ್ಹ. ಇವುಗಳು ಅಂತಾರಾಷ್ಟ್ರೀಯ ಸಂಸ್ಥೆಗೆ ಧನಸಹಾಯ ಮಾಡಲು ಅದರ ಪ್ರತಿಯೊಂದು 193 ಸದಸ್ಯ ರಾಷ್ಟ್ರಗಳು ಕಡ್ಡಾಯವಾಗಿ ಪಾವತಿಸುವ ಪಾವತಿಗಳಾಗಿದೆ. ಸದಸ್ಯ ರಾಷ್ಟ್ರಗಳು ಕಡ್ಡಾಯ ಪಾವತಿಗಳ ಮೇಲೆ ಸ್ವಯಂಪ್ರೇರಿತ ಕೊಡುಗೆಗಳನ್ನು ನೀಡಬಹುದು. ಯುಎನ್ ಚಾರ್ಟರ್ನ ಆರ್ಟಿಕಲ್ 17 ಹೇಳುವ ಪ್ರಕಾರ, “ಸಂಘಟನೆಯ ವೆಚ್ಚಗಳನ್ನು ಸಾಮಾನ್ಯ ಸಭೆಯು ಹಂಚಿಕೊಂಡಂತೆ ಸದಸ್ಯರು ಭರಿಸಬೇಕು.”
ಸೈಯದ್ ಅಕ್ಬರುದ್ದೀನ್ ಅವರ ಹೇಳಿಕೆಯ ಪ್ರಕಾರ ದೇಶವು ತನ್ನ ಎಲ್ಲಾ ಬಾಕಿಗಳನ್ನು ಪಾವತಿಸಿದೆ ಎಂದರೆ ಭಾರತವು ಸಂಯುಕ್ತ ರಾಷ್ಟ್ರದ ನಿಯಮಿತ ವಾರ್ಷಿಕ ಬಜೆಟ್, ಶಾಂತಿಪಾಲನಾ ಮೌಲ್ಯಮಾಪನ ಮತ್ತು ನ್ಯಾಯಮಂಡಳಿಯ ಮೌಲ್ಯಮಾಪನಕ್ಕೆ ಸಂಪೂರ್ಣವಾಗಿ ಪಾವತಿ ಮಾಡಿದೆ ಎಂದರ್ಥ.
ಸದಸ್ಯ ರಾಷ್ಟ್ರಗಳು ಸಕಾಲಿಕ ಕೊಡುಗೆಗಳನ್ನು ನೀಡದಿದ್ದರೆ ವಿಶ್ವ ಸಂಸ್ಥೆಯು ಕೊರತೆಯನ್ನು ಎದುರಿಸುತ್ತದೆ. ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಇತ್ತೀಚೆಗೆ ಹೇಳಿದ ಪ್ರಕಾರ, “2019 ರಲ್ಲಿ ನಮ್ಮ ಸಾಮಾನ್ಯ ಬಜೆಟ್ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಒಟ್ಟು ಮೊತ್ತದ 70 % ಮಾತ್ರ ಸದಸ್ಯ ರಾಷ್ಟ್ರಗಳು ಪಾವತಿಸಿವೆ. ಇದು ಸೆಪ್ಟೆಂಬರ್ ಅಂತ್ಯದಲ್ಲಿ $ 230 ಮಿಲಿಯನ್ ನಗದು ಕೊರತೆಯಾಗಿ ಅನುವಾದಿಸುತ್ತದೆ. [ಬ್ಯಾಕ್ಅಪ್ ಲಿಕ್ವಿಡಿಟಿ ಮೀಸಲುಗಳನ್ನು ತಿಂಗಳ [ಅಕ್ಟೋಬರ್] ಅಂತ್ಯದ ವೇಳೆಗೆ ಕ್ಷೀಣಿಸುವ ಅಪಾಯವನ್ನು ನಾವು ಎದುರಿಸುತ್ತೇವೆ ಎಂದು ಹೇಳಿದೆ.
- ಭಾರತವು ತನ್ನ ಎಲ್ಲಾ ಸಾಲಗಳನ್ನು ವಿಶ್ವಬ್ಯಾಂಕಿಗೆ ಮರುಪಾವತಿ ಮಾಡಿಲ್ಲ
ವಿಶ್ವಬ್ಯಾಂಕ್ ಮಾಹಿತಿಯ ಪ್ರಕಾರ, ಸಾಲ ನೀಡುವ ಸಂಸ್ಥೆಯು ಭಾರತಕ್ಕೆ 2019 ವೇಳೆಗೆ ಒಟ್ಟು 3277 ಬಿಲಿಯನ್ ಡಾಲರ್ ಹಣವನ್ನು ನೀಡುವ ಒಪ್ಪಂದವನ್ನು ಮಾಡಿಕೊಂಡಿತ್ತು. ವಿಶ್ವ ಬ್ಯಾಂಕ್ ನ ಭಾಗವಾಗಿರುವ ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರಿಕನ್ ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ (ಐಬಿಆರ್ಡಿ) ಮತ್ತು ಐಡಿಎ (ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್) ಈ ಕೆಲಸವನ್ನು ಕೈಗೆತ್ತುಕೊಂಡಿತ್ತು.
ಕೆಳಗಿನ ಗ್ರಾಫ್ 2015 ರಿಂದ ಹಣಕಾಸು ಸಂಸ್ಥೆಯಿಂದ ಮಾಡಿದ ಮೊತ್ತವನ್ನು ತೋರಿಸುತ್ತದೆ.
ಕಳೆದ ಆರು ವರ್ಷಗಳಲ್ಲಿ ಭಾರತ ತನ್ನ ಎಲ್ಲಾ ಸಾಲಗಳನ್ನು ಮರುಪಾವತಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಳ್ಳಲಾಗುತ್ತಿದೆ. ಆದರೆ 2014ರ ನಡುವೇ ದೇಶಗಳು 21 ಯೋಜನೆ ರೂಪಿಸಿದ್ದು ಇದಕ್ಕೆ 1.1 ಬಿಲಿಯನ್ ಡಾಲರ್ ಗಿಂತ ಹೆಚ್ಚು ಹಣವನ್ನು ಐಡಿಎಗೆ ಬದ್ಧವಾಗಿ ಒದಗಿಸಿತ್ತು. ವಿಶ್ವದ ಬಡ ರಾಷ್ಟ್ರಗಳಿಗೆ ಸಹಾಯ ಮಾಡುವ ವಿಶ್ವ ಬ್ಯಾಂಕ್ ಯೋಜನೆಯಾಗಿದೆ.
ಇದಲ್ಲದೇ, ಭಾರತವು 11 ಯೋಜನೆಗಳಿಗಾಗಿ 2.3 ಬಿಲಿಯನ್ ಡಾಲರ್‌ಗಳಷ್ಟು ಐಬಿಆರ್‌ಡಿಗೆ ಬದ್ಧವಾಗಿದೆ, ಅದರಲ್ಲಿ ಒಂಬತ್ತು ಯುಪಿಎ ಸರ್ಕಾರದ ಅವಧಿಯಲ್ಲಿ ಒಪ್ಪಿಗೆಯಾಯಿತು.
ಮೇ 26, 2014 ರ ನಡುವೆ (ಪಿಎಂ ಮೋದಿ ಅಧಿಕಾರ ವಹಿಸಿಕೊಂಡಾಗ) ಇಲ್ಲಿಯವರೆಗೆ ವಿಶ್ವಬ್ಯಾಂಕ್ ಅನುಮೋದಿಸಿದ ಎಲ್ಲ ಯೋಜನೆಗಳ ಪಟ್ಟಿಯನ್ನು ಇಲ್ಲಿ ಪ್ರವೇಶಿಸಬಹುದು. ಈ 88 ಯೋಜನೆಗಳಲ್ಲಿ, ಬಹುಪಾಲು ಪೂರ್ಣಗೊಂಡಿವೆ ಮತ್ತು ಸಕ್ರಿಯವಾಗಿವೆ, ಕೆಲವನ್ನು ಕೈಬಿಡಲಾಗಿದೆ ಅಥವಾ ಪೈಪ್‌ಲೈನ್‌ನಲ್ಲಿವೆ.
ಅನುಮೋದಿಸಿದ ಇತ್ತೀಚಿನ ಯೋಜನೆಯಾದ ‘ಹವಾಮಾನ ಸ್ಥಿತಿಸ್ಥಾಪಕ ಕೃಷಿಗಾಗಿ ಒಡಿಶಾ ಇಂಟಿಗ್ರೇಟೆಡ್ ನೀರಾವರಿ ಯೋಜನೆ’. ಸೆಪ್ಟೆಂಬರ್ 30, 2019 ರಂದು ಅಂತಾರಾಷ್ಟ್ರೀಯ ಸಾಲದಾತರು ಅನುಮೋದಿಸಲಾಗಿದೆ. ಒಟ್ಟು ಯೋಜನೆಗೆ $ 235.50 ಮಿಲಿಯನ್ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ, ಅದರಲ್ಲಿ ಐಬಿಆರ್ಡಿ $ 165 ಮಿಲಿಯನ್ ಬದ್ಧವಾಗಿದೆ. ಈ ಯೋಜನೆಯು ವಿಶ್ವ ಬ್ಯಾಂಕ್ ಮಂಡಳಿಯಿಂದ ಮಾತ್ರ ಅನುಮೋದನೆಗೊಂಡಿದೆ ಆದರೆ ಒಪ್ಪಂದಕ್ಕೆ ಇನ್ನೂ ಸಹಿ ಹಾಕಿಲ್ಲ ಎಂಬುದು ಗಮನಾರ್ಹ.
ಆದ್ದರಿಂದ ಭಾರತ ತನ್ನ ಎಲ್ಲಾ ಸಾಲಗಳನ್ನು ವಿಶ್ವಬ್ಯಾಂಕ್‌ಗೆ ಮರುಪಾವತಿ ಮಾಡಿಲ್ಲ. ವಾಸ್ತವವಾಗಿ, 2016 ರಲ್ಲಿ ಸಂಸ್ಥೆಯು ಪ್ರಕಟಿಸಿದ ವರದಿಯು ಭಾರತವು ಸ್ವಾತಂತ್ರ್ಯದ ನಂತರ ಎಲ್ಲ ರಾಷ್ಟ್ರಗಳ ನಡುವೆ ಅತಿ ಹೆಚ್ಚು ಸಾಲಗಳನ್ನು ಪಡೆದಿದೆ ಎಂದು ತೋರಿಸಿದೆ. ನರೇಂದ್ರ ಮೋದಿಯವರ ಮೊದಲ ಪ್ರಧಾನ ಮಂತ್ರಿಯ ಅವಧಿಯಲ್ಲಿ ಪಡೆದ ಸಾಲಗಳು ಕೂಡ ಸೇರಿವೆ. ಬೆಳೆಯುತ್ತಿರುವ ರಾಷ್ಟ್ರವಾಗಿ ಮೂಲಸೌಕರ್ಯ ಅಗತ್ಯಗಳನ್ನು ಹೊಂದಿರುವ ಭಾರತವು ಮುಖ್ಯವಾಗಿ ಸಾರಿಗೆ, ಆರೋಗ್ಯ ರಕ್ಷಣೆ, ಶಿಕ್ಷಣ, ಇಂಧನ ಮುಂತಾದವುಗಳ ಮೇಲೆ ಕೇಂದ್ರೀಕರಿಸುವ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯಕ್ಕಾಗಿ ವಿಶ್ವಬ್ಯಾಂಕ್ ಅನ್ನು ಅವಲಂಬಿಸಿದೆ. ಈ ಹಳೆ ಸಾಲಗಳಲ್ಲಿ ಹಲವು ಮರುಪಾವತಿ ವೇಳಾಪಟ್ಟಿ ಮತ್ತು ಬಾಕಿ ಇರುವ ಕಾರಣ ವಿಶ್ವಬ್ಯಾಂಕ್ ಭಾರತಕ್ಕೆ ಹಣ ಪಾವತಿಸಿಲ್ಲ. ಉದಾಹರಣೆಗೆ, ‘ಭಾರತ: ಬಿಹಾರದಲ್ಲಿ ಶಿಕ್ಷಕರ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು’ ಯೋಜನೆಗೆ 2015ರಲ್ಲಿ ಸಹಿ ಹಾಕಲಾಯಿತು. ಈ ಯೋಜನೆಯನ್ನು ಜೂನ್ 30, 2020 ರಂದು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಆದರೆ ವಿಶ್ವಬ್ಯಾಂಕ್ಗೆ ಅಂತಿಮ ಕಂತಿನ ಪಾವತಿಯ ದಿನಾಂಕ ಮೇ 15, 2040 ಆಗಿದೆ. ಈಗಾಗಲೇ ಬಾಕಿ ಹಣವನ್ನು ವಿಶ್ವಬ್ಯಾಂಕ್ಗೆ ಕಂತನ್ನು ಪಾವತಿ ಮಾಡದೆ ಉಳಿಸಿಕೊಂಡಿರುವುದರಿಂದ ಹೆಚ್ಚಿನ ಹಣವನ್ನು ಅದರಿಂದ ತೆಗೆದುಕೊಳ್ಳಲು ಸಾಧಯವೇ ಇಲ್ಲ ಎಂಬುದು ಈ ವರದಿಯ ತಿರುಳು.
ಸೈಯದ್ ಅಕ್ಬರುದ್ದೀನ್ ಹಂಚಿಕೊಂಡ ಸ್ಕ್ರೀನ್‌ಶಾಟ್ ವಿಶ್ವಬ್ಯಾಂಕ್‌ಗೆ ಸಾಲ ಮರುಪಾವತಿಯ ಬಗ್ಗೆ ಅಲ್ಲ ಆದರೆ ಸದಸ್ಯ ರಾಷ್ಟ್ರವಾಗಿ ವಿಶ್ವಸಂಸ್ಥೆಗೆ ಬಾಕಿ ಪಾವತಿಯ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ವರದಿ ಹೇಳಿದ್ದಾರೆ.