ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ರೇವ್ಸ್ ಪಾರ್ಟಿ ಮಾಡಿ ಸಿಕ್ಕಿ ಬಿದ್ದಿರುವ ಆರ್ಯನ್ ಖಾನ್ಗೆ ಜಾಮೀನು ಎಂಬುದು ಮರೀಚಿಕೆಯಾಗಿದೆ. ಎನ್ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸದ್ಯ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಇಂದು (ಅಕ್ಟೋಬರ್ 14) ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ. ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಮುಂದೂಡಿದೆ.
ಡ್ರಗ್ಸ್ ಕೇಸ್ ನಲ್ಲಿ 23 ವರ್ಷದ ಆರ್ಯನ್ ಖಾನ್ ಗೆ ಇಂದು ಜಾಮೀನು ನೀಡದ ಮುಂಬೈ ಸೆಷನ್ಸ್ ಕೋರ್ಟ್, ಬುಧವಾರದವರೆಗೂ ಆದೇಶವನ್ನು ಕಾಯ್ದಿರಿಸಿದ್ದು, ಮತ್ತೆ ಜೈಲಿಗೆ ಕಳುಹಿಸಿದೆ. ಅಕ್ಟೋಬರ್ 8 ರಿಂದಲೂ ಆತ ಜೈಲಿನಲ್ಲಿಯೇ ಇದ್ದಾನೆ.
‘ಆರ್ಯನ್ ವಿರುದ್ಧ ಬಹಳಷ್ಟು ಸಾಕ್ಷ್ಯಗಳು ಇವೆ. ಕ್ರೂಸ್ನಲ್ಲಿ ಆರ್ಯನ್ ಖಾನ್ ಡ್ರಗ್ಸ್ ಸೇವನೆ ಮಾಡಿದ್ದಾರೆ. ಆರ್ಯನ್ಗೆ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ಗಳ ಜತೆ ನಂಟಿದೆ. ಆರ್ಯನ್ ಖಾನ್ ನಿರಂತರವಾಗಿ ಡ್ರಗ್ಸ್ ಸೇವಿಸುತ್ತಾರೆ’ ಎಂದು ಎನ್ಸಿಬಿ ಪರ ಎಎಸ್ಜಿ ಅನಿಲ್ ಸಿಂಗ್ ವಾದ ಮಂಡನೆ ಮಾಡಿದರು.
ಆರ್ಯನ್ ಖಾನ್ ಪರ ಈ ಮೊದಲು ಸತೀಶ್ ಮಾನೆಶಿಂಧೆ ಅವರು ವಾದ ಮಾಡುತ್ತಿದ್ದರು. ಆದರೆ, ಈಗ ಆರ್ಯನ್ ಪರ ವಕೀಲರನ್ನು ಬದಲಾಗಿದ್ದಅರೆ. ಅಮಿತ್ ದೇಸಾಯಿ ಅವರು ಆರ್ಯನ್ ಪರ ವಾದ ಮಂಡಿಸುತ್ತಿದ್ದಾರೆ. ಆದಾಗ್ಯೂ ಅವರಿಗೆ ಜಾಮೀನು ಸಿಗುತ್ತಿಲ್ಲ.