ರಾಷ್ಟ್ರ ರಾಜಕಾರನದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬಿಹಾರ ರಾಜಕೀಯ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಉಪರಾಷ್ಟ್ರಪತಿಯಾಗಲು ಬಯಸಿದ್ದರು ಎಂದು ಬಿಹಾರ ಮಾಜಿ ಡಿಸಿಎಂ ಸುಶೀಲ್ ಮೋದಿ ಆರೋಪಿಸಿದ್ದಾರೆ.
ಇನು ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ನಿತೀಶ್ ಸುಶೀಲ್ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾದ ಮಾತು ಹಾಗೂ ಬೋಗಸ್ ಎಂದಿದ್ದಾರೆ.
ನಾನು ಉಪರಾಷ್ಟ್ರಪತಿಯಾಗಲು ಬಯಸಿದೆ ಎಂದು ಈ ವ್ಯಕ್ತಿ ಹೇಈರುವುದನ್ನು ಕೇಳಿದ್ದೀರಿ ಎಂತಹ ತಮಾಷೆ ನಾವು ರಾಷ್ಟ್ರಪತಿ ಹಾಗು ಉಪರಾಷ್ಟ್ರಪತಿ ಚುನಾವಣೆಯಲ್ಲಿ NDA ಅಭ್ಯರ್ತಿ ಯನ್ನು ಬೆಂಬಲಿಸಿದ ಮಾತ್ರಕ್ಕೆ ನಾವು ಆಕಾಂಕ್ಷಿಯಾಗಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸುಶೀಲ್ ಮೋದಿ ಹೆಸರೇಳದೆ ಟೀಕಿಸಿದ ನಿತೀಶ್ ಸದ್ಯ ಅವರು ಯಾವುದೇ ಪ್ರಮುಖ ಹುದ್ದೆ ಹೊದಿಲ್ಲದ ಕಾರಣ ಈ ರೀತಿ ಮಾತನಾಡುತ್ತಿದ್ದಾರೆ ನನ್ನ ವಿರುದ್ದ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಏನು ಸಿಗುತ್ತದೆ ಇಂತಹ ಅಸಂಬದ್ದ ಹೇಳಿಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.