ಯಾರೇ ಪಕ್ಷಕ್ಕೆ ಬಂದ್ರೂ ಸ್ವಾಗತ ಎಂದು ಸದಾ ಹೇಳ್ತಿದ್ದ ಡಿ.ಕೆ. ಶಿವಕುಮಾರ್ (Dk shivakumar) ನಿಶಾ ಯೋಗೇಶ್ವರ್ (Nisha yogeshwar) ವಿಚಾರದಲ್ಲಿ ಮಾತ್ರ ನಿಲುವು ಬದಲಿಸಿದ್ದಾರೆ. ಕಾಂಗ್ರೆಸ್‌ಗೆ (Congress) ಸೇರ್ಪಡೆಯಾಗೋ ಬಗ್ಗೆ ಮಾತನಾಡಿದ್ದ ಯೋಗೇಶ್ವರ್ ಪುತ್ರಿ ನಿಶಾ ಆಸಕ್ತಿ ವ್ಯಕ್ತಪಡಿಸಿದ್ರು. ಇದೇ ವಿಚಾರವಾಗಿ ಕೆಲ ದಿನಗಳ ಮುನ್ನ ಖುದ್ದು ಡೆಕೆಶಿಯನ್ನ ನಿಶಾ ಭೇಟಿ ಮಾಡಿ ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ರು. ಆದ್ರೆ ನಿಶಾ ಪಕ್ಷ ಸೇರ್ಪಡೆಗೆ ಡಿಕೆಶಿ ರೆಡ್ ಸಿಗ್ನಲ್ ಕೊಟ್ಟಿದ್ದಾರೆ.
ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಡಿಕೆಶಿ ಏನನ್ನೂ ಸ್ಪಷ್ಟವಾಗಿ ಹೇಳಿರಲಿಲ್ಲ. ನಿಶಾ ನನ್ನ ಪುತ್ರಿ ಇದ್ದಂತೆಯೇ, ಆಕೆ ಇನ್ನೂ ಮದುವೆಯಾಗಬೇಕಿದೆ. ರಾಜಕೀಯದ ಹೆಸರಲ್ಲಿ ತಂದೆ ಮಗಳನ್ನು ಬೇರ್ಪಡಿಸೋದು ನನಗೆ ಸರಿ ಎನಿಸೋದಿಲ್ಲ, ಆದ್ರೂ ಅವರಿಗೆ ರಾಜಕೀಯವಾಗಿ ತೀರ್ಮಾನ ತೆಗೆದುಕೊಳ್ಳುವ ಹಕ್ಕಿದೆ ಎಂದು ಕೂಡ ಹೇಳಿದ್ರು. ಇದೀಗ ನಿಶಾರನ್ನ ಕಾಂಗ್ರೇಸ್ ಸೇರ್ಪಡೆ ಮಾಡಿಕೊಳ್ಳದ ನಿರ್ಧಾರಕ್ಕೆ ಡಿಕೆಶಿ ಬಂದಿದ್ದಾರೆ.
ಕಾಂಗ್ರೇಸ್‌ಗೆ (Congress) ಹಲವು ಕ್ಷೇತ್ರಗಳಲ್ಲಿ ಒಳೇಟಿನ ಭೀತಿ ಇರೋದ್ರಿಂದ, ಇದು ಯೋಗೀಶ್ವರ್ ರ (Yogeshwar) ತಂತ್ರಗಾರಿಕೆಯೂ ಆಗಿರಬಹುದು ಎಂಬ ಲೆಕ್ಕಾಚಾರಗಳೂ ಇದೆ. ಚೆನ್ನಪಟ್ಟಣವನ್ನ ತನ್ನ ಹಿಡಿತದಲ್ಲಿ ಉಳಿಸಿಕೊಳ್ಳಲು ಯೋಗೇಶ್ವರ್ ಪುತ್ರಿಯನ್ನ ಕಾಂಗ್ರೇಸ್ ಸೇರ್ಪಡೆ ಮಾಡಿಸೋ ಪ್ರಯತ್ನ ಮಾಡಿರಬಹುದು. ಒಂದ್ವೇಳೆ ಚೆನ್ನಪಟ್ಟಣ (chennapattana) ಬೈಎಲೆಕ್ಷನ್ ಎದುರಾದ್ರೆ, ತಂದೆ ವಿರುದ್ಧ ಪುತ್ರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದ್ರೆ ಯಾರೂ ಗೆದ್ರೂ ಅವರ ಕುಟುಂಬದ ಹಿಡಿತದಲ್ಲೇ ಚೆನ್ನಪಟ್ಟಣ ಉಳಿಯಲಿದೆ.
ಸೋ ಎಲ್ಲಾ ರೀತಿಯ ಲೆಕ್ಕಾಚಾರದ ನಂತರ ಡಿಕೆಶಿ ಬಹಳ ನಯವಾಗಿಯೇ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಪಕ್ಷ ಸೇರ್ಪಡೆಗೆ ನೋ ಅಂದಿದ್ದಾರೆ.