ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮಕಿರೋ ಸಿಎಂ ಸಿದ್ದರಾಮಯ್ಯ(Cm siddaramaiah) ಮೈಸೂರಿನಲ್ಲಿ (mysuru) ಒಕ್ಕಲಿಗ ಮತಬುಟ್ಟಿಗೆ ಕೈ ಹಾಕಿದ್ದಾರೆ. ಈ ಬಾರಿ ಚುನಾವಣೆಯನ್ನ ಪ್ರತಿಷ್ಠೆಯಾಗಿ ತಗೊಂಡಿರೋ ಸಿದ್ದು ಕಾಂಗ್ರೆಸ್ (Congress) ಅಭ್ಯರ್ಥಿಗೆ ಗೆಲುವಿಗಾಗಿ ಸಭೆ ಮೇಲೆ ಸಭೆ ನಡೆಸೋ ಮೂಲಕ ರಣತಂತ್ರ ರೂಪಿಸ್ತಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ (chamundeshwari constituency) ಒಕ್ಕಲಿಗರದ್ದೇ ಪ್ರಾಬಲ್ಯ. ಈ ಬಾರಿ ಗೆದ್ದೇ ಗೆಲ್ಲಬೇಕೆಂಬ ಸಂಕಲ್ಪದಿಂದ ಕಾಂಗ್ರೆಸ್ ಅಳೆದು ತೂಗಿ ಒಕ್ಕಲಿಗ ಎಂ.ಲಕ್ಷ್ಮಣ್ (M lakshman) ಟಿಕೆಟ್ ಕೊಟ್ಟಿದೆ.

ಕಳೆದೆರಡು ಚುನಾವಣೆಗಳಲ್ಲೂ ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ(BJP) ಲೀಡ್ ಪಡೆದುಕೊಳ್ತಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಲೀಡ್ ಪಡೆಯಲು ಸಿಎಂ ಸಿದ್ದರಾಮಯ್ಯ ಚುನಾವಣಾ ಗೇಮ್ ಪ್ಲಾನ್ (Game plan) ಮಾಡ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ಕೊಡಲೇಬೇಕೆಂದು ಸಭೆ ಮೂಲಕ ಸಿದ್ದರಾಮಯ್ಯ ಸಂದೇಶ ರವಾನಿಸಿದ್ದಾರೆ. ಈ ಕಾರಣಕ್ಕಾಗಿ ಒಕ್ಕಲಿಗ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.

ಅತ್ತ ಸಿದ್ದರಾಮಯ್ಯ ಸಭೆ ನಡೆಸಿರುವಂತೆಯೇ ಇತ್ತ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ (GT devegowda) ಅಲರ್ಟ್ (alert) ಆಗಿದ್ದಾರೆ. ಕ್ಷೇತ್ರದಲ್ಲಿ ಜಿಟಿ ದೇವೇಗೌಡ ಏನ್ ಮಹಾ ಕೆಲಸ ಮಾಡಿದ್ದಾರೆ ಅಂತಾ ಸಿದ್ದರಾಮಯ್ಯ ಹೇಳಿದ ಮಾತಿಗೆ ಶಾಸಕ ಜಿ.ಟಿ ದೇವೇಗೌಡ ತಿರುಗೇಟು ನೀಡಿದ್ದು, ಸಿಎಂಗೆ ನನ್ನ ಕೆಣಕದಿರುವಂತೆ ಎಚ್ಚರಿಸಿದ್ದಾರೆ. ಹಾಗೇನೇನಾದ್ರೂ ಕೆಲಸ ಮಾಡಿಲ್ಲ ಅಂದ್ರೆ ಮತ್ತೆ ಚುನಾವಣೆಗೆ ಬರುವಂತೆ ಪಂಥಾಹ್ವಾನ ಕೊಟ್ಟಿದ್ದಾರೆ.