ಹಳೆ ಮೈಸೂರು(old mysore) ಭಾಗದಲ್ಲಿ ಒಕ್ಕಲಿಗ ಮತ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ಎಚ್ ಡಿ ಕುಮಾರಸ್ವಾಮಿ (HD kumaraswamy) ಉರುಳಿಸಿದ ದಾಳ ಕಾಂಗ್ರೆಸ್ (Congress) ನಾಯಕರ ನಿದ್ದೆಗೆಡಿಸಿತ್ತು . ದಿಡೀರ್ ಅಂತ ಮೈತ್ರಿ ಅಭ್ಯರ್ಥಿಗಳು ಆದಿಚುಂಚನಗಿರಿ (aadi chunchanagiri ) ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದಿದ್ದು ಕಾಂಗ್ರೆಸ್ (congress) ನಾಯಕರನ್ನು ಗಲಿಬಿಲಿ ಗೊಳ್ಳುವಂತೆ ಮಾಡಿತ್ತು. ಇದೀಗ ಇದಕ್ಕೆ ಪ್ರತ್ಯಸ್ತ್ರವಾಗಿ ಕಾಂಗ್ರೆಸ್ ಪಾಳೆಯ ಹೆಚ್ ಡಿ ಕುಮಾರಸ್ವಾಮಿ ಮೇಲೆ ಫೋನ್ ಟ್ಯಾಪಿಂಗ್ (phone taping) ಆರೋಪ ಮಾಡಿದೆ.

ಕಾಂಗ್ರೆಸ್ ಜೆಡಿಎಸ್ (congress-jds) ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಆಗಿದ್ದ ಹೆಚ್ ಡಿ ಕುಮಾರಸ್ವಾಮಿ ರಾಜಕೀಯ ಕಾರಣಗಳಿಗಾಗಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಟೈಪಿಂಗ್ ಮಾಡಿಸಿದ್ರು ಎಂಬ ಗಂಭೀರ ಆರೋಗ್ಯವನ್ನು ಸಚಿವ ಚೆಲುವರಾಯಸ್ವಾಮಿ (Dk shivakumar) ಮತ್ತು ಡಿಕೆ ಶಿವಕುಮಾರ್ ಪರೋಕ್ಷವಾಗಿ ಮಾತನಾಡಿದ್ದಾರೆ. ಆ ಮೂಲಕ ಒಕ್ಕಲಿಗ ಮತ ಬ್ಯಾಂಕ್ ಕಸಿಯುವ ಹೆಚ್‍ಡಿಕೆ ಪ್ರಯತ್ನಕ್ಕೆ ಕಾಂಗ್ರೆಸ್ ನಾಯಕರು ಬ್ರೇಕ್ ಹಾಕುವ ಯತ್ನ ಮಾಡಿದ್ದಾರೆ.

ಮೈತ್ರಿ ಅಭ್ಯರ್ಥಿಗಳು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುತ್ತಿದ್ದ ಹಾಗೆ ದೇವೇಗೌಡರು ಎರಡರಿಂದ ಮೂರು ಶತಮಾನದ ಹಿಂದೆ ಆದಿಚುಂಚನಗಿರಿ ಮಠಕ್ಕೆ ಪರ್ಯಾಯ ಮಠ ಸ್ಥಾಪಿಸಿದ್ರು ಎಂಬ ಹೇಳಿಕೆ ನೀಡುವುದರ ಮೂಲಕ ಹಳೆಯ ಮಠದ ವಿಚಾರವನ್ನು ಡಿಕೆಶಿ ಮುನ್ನಡೆಗೆ ತಂದಿದ್ದರು . ಇದೀಗ ಫೋನ್ ಟ್ಯಾಪಿಂಗ್ ಅಸ್ತ್ರ ಬಳಸುವ ಮೂಲಕ ಒಕ್ಕಲಿಗ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಕುಮಾರಸ್ವಾಮಿ ವೇಗಕ್ಕೆ ಕಾಂಗ್ರೆಸ್ ಬ್ರೇಕ್ ಹಾಕುವ ಪ್ರಯತ್ನ ಮಾಡಿದೆ.