ಆಪಲ್ ಐಫೋನ್(iphone) ತನ್ನ ಗ್ರಾಹಕರಿಗೆ ಒಂದಿಲ್ಲೊಂದು ಹೊಸತನವನ್ನ ಪರಿಚಯಿಸಲು ಹೊಸ ಹೊಸ ಆವಿಷ್ಕಾರಗಳನ್ನ ಮಾಡ್ತಾಯಿರುತ್ತೆ. ಐಪೋನ್ ( iphone) ಬಳಕೆದಾರರಿಗೆ ಅದೇ ಬೆಸ್ಟ್ ಅನ್ನಿಸಿದ್ರೆ.. ಉಳಿದ ಬಳಕೆದಾರರಿಗೆ ಐಪೋನ್ ಯೂಸರ್ ಫ್ರೆಂಡ್ಲಿ ಅಲ್ಲ, ಆಂಡ್ರಾಯ್ಡ್ (android) ನಷ್ಟು ಸುಲಭವಾಗಿ ಐಪೋನ್ ಬಳಕೆ ಸಾಧ್ಯವಿಲ್ಲ ಎಂದೆಲ್ಲಾ ಹೇಳುತ್ತಾರೆ. ಈಗ ಈ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಆಪಲ್ ಐಪೋನ್ಸ್ ನಲ್ಲಿ ದೊಡ್ಡ ಬದಲಾವಣೆಗೆ ಮುಂದಾಗಿದೆ.

ನಮ್ಮ ಬಳಿ ಐಪೋನ್ ಇದ್ದು, ನಮ್ಮ ಸ್ನೇಹಿತರ ಬಳಿ ಆಂಡ್ರಾಯ್ಡ್ ಪೋನ್ ಇದ್ದರೆ, ಆಗ ನಮ್ಮ ಡೇಟಾವನ್ನ ಅವರೊಟ್ಟಿಗೆ ಅಥವಾ ಅವರ ಡೇಟಾ ನಮ್ಮೊಟ್ಟಿಗೆ ಹಂಚಿಕ್ಕೊಳ್ಳೋದು ಬಹಳ ಕಷ್ಟದ ಕೆಲಸ. ಐಪೋನ್ ಟು ಐಪೋನ್ ಆದ್ರೆ ಕ್ಷಣಮಾತ್ರದಲ್ಲಿ ಏರ್ ಡ್ರಾಪ್ (air drop) ಮೂಲಕ ಥಟ್ ಅಂತ ಡೇಟಾ ಷೇರ್ (data share) ಮಾಡಬಹುದು. ಆಂಡ್ರಾಯ್ಡ್ ಟು ಆಂಡ್ರಾಯ್ಡ್ ನಲ್ಲೂ ಇಂಥಹ ಅವಕಾಶ ಇದೆ. ಆದ್ರೆ ಐಪೋನ್ ಟು ಆಂಡ್ರಾಯ್ಡ್ ಡೇಟಾ ಟ್ರಾನ್ಸ್ಫರ್ (data transfer) ಒಂಥರ ಸವಾಲಿನ ಕೆಲಸ ಆಗಿತ್ತು. ಈಗ ಇದನ್ನ ಸರಿಪಡಿಸೋಕೆ ಆಪಲ್ ಸಂಸ್ಥೆ ಮುಂದಾಗಿದೆ.

ಐಪೋನ್ ಟು ಐಪೋನ್ (iphone to iphone) ಹೇಗೆ ಮಿಂಚಿನ ವೇಗದಲ್ಲಿ ಡೇಟಾ ಟ್ರಾನ್ಸ್ಫರ್ (data transfer) ಆಗುತ್ತೋ ಅದೇ ಮಾದರಿಯಲ್ಲಿ , ವೈರ್ಲೆಸ್ (wireless) ಸಂವಹನದ ಮೂಲಕವೇ ಐಪೋನ್ ಟು ಆಂಡ್ರಾಯ್ಡ್ ಡೇಟಾ ಶೇರಿಂಗ್ ಟಿಕ್ನಾಲಜಿಯನ್ನ (tehnology) ಕಂಡುಹಿಡಿಯಾಗಿದ್ಯಂತೆ. ಆ ಮೂಲಕ ಐಫೋನ್ ಮತ್ತು ಆಂಡ್ರಾಯ್ಡ್ ನಡುವಿನ ದೊಡ್ಡ ಅಂತರವನ್ನ ಕಡಿಮೆಗೊಳಿಸಲು ಬಹುದೊಡ್ಡ ಆವಿಷ್ಕಾರವೇ ನಡೆದಿದೆ. ಸೋ ಇನ್ಮುಂದೆ ನಿಂದು ಐಪೋನ್ ನ ಅಥವಾ ಆಂಡ್ರಾಯ್ಡಾ ?? ಅಂತ ಕೇಳದೇ ನಿರಾತಂಕವಾಗಿ ಡೇಟಾ ಶೇರಿಂಗ್ ಮಾಡುವ ವ್ಯವಸ್ಥೆ ಬರ್ತಾಯಿದೆ. ಆದ್ರೆ ಇದಿನ್ನೂ ಆರಂಭಿಕ ಹಂತದಲ್ಲಿದ್ದೂ 2024ರ ಕೊನೆ ಅಥವಾ 2025ದರ ಆರಂಭದಲ್ಲೀ ಈ ಟೆಕ್ನಾಲಕಿ (technology) ಜನರ ಕೈಸೇರಲಿದೆ ಎನ್ನಲಾಗಿದೆ.

ಇನ್ನು ಆಪಲ್ ಯಾಕೆ ಈ ರೀತಿ ಮಾಡುತ್ತಿದೆ ಎಂದು ನೋಡಿದ್ರೆ, ಐಫೋನ್ ಹಾಗೂ ಆಂಡ್ರಾಯ್ಡ್ ನಡುವೆ ಮುಕ್ತ ಸಂವಹನವನ್ನು ಪ್ರೋತ್ಸಾಹಿಸುವ ಗುರಿಯನ್ನ ಆಪಲ್ ಹೊಂದಿದೆ ಅಂತ ಹೇಳಬಹುದು. ಆ ಮೂಲಕ ವಿಭಿನ್ನ ಸ್ಮಾರ್ಟ್‌ಫೋನ್‌ಗಳ (smart phone) ನಡುವಿನ ಈ ರೀತಿಯ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಡೇಟಾ ಟ್ರಾನ್ಸ್ಫರ್ ಪ್ರಕ್ರಿಯೆಯಲ್ಲಿ ಉತ್ತಮ ಅನುಭವ ನೀಡೋ ಪ್ಲಾನ್ ಎನ್ನಲಾಗ್ತಿದೆ.. ಆ ಮೂಲಕ ಇನ್ಮುಂದೆ ಇನ್ನಷ್ಟು ಯೂಸರ್ ಫ್ರೆಂಡ್ಲಿ ಡಿವೈಸ್ ಎಂಬ ಪಟ್ಟ ಕಸಿದುಕೊಳ್ಳಲು ಐಫೋನ್ ಸಿದ್ಧತೆ ನಡೆಸಿದೆ.












