ಜೆಡಿಎಸ್ (JDS) ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Kumaraswamy) ಈ ಹಿಂದಿನ ತಮ್ಮ ರಾಮನಗರ ವಿಧಾನಸಭಾ ಚುನಾವಣೆ (Ramnagar) ಸೋಲಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಇದೆ ವೇಳೆ ನಿಖಿಲ್ ಮತ್ತೆ ಚುನಾವಣೆಗೆ ನಿಲ್ಲುವ ಮುನ್ಸೂಚನೆ ನೀಡಿದ್ದಾರೆ.

ನಾನು ಚಿಕ್ಕವಯಸ್ಸಿನವನೇ, ನಾನು ಮೂರು ಚುನಾವಣೆಗಳನ್ನ ಎದುರಿಸಿದ್ದೇನೆ. ಆದ್ರೆ ನಾನಾ ಕಾರಣಗಳಿಂದ, ಸನ್ನಿವೇಶ, ಸಂದರ್ಭಗಳಿಂದ ಸೋಲುಂಡಿದ್ದೇನೆ. ಈಗಾಗಲೇ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದೇನೆ.ಹೀಗಾಗಿ ಯಾರೂ ತಾಳ್ಮೆ ಕಳೆದುಕೊಳ್ಳಬಾರದು ಎಂದಿದ್ದಾರೆ.
ಆಶಾದಾಯಕ ಭಾವನೆಯೊಂದಿಗೆ ಮುನ್ನಡೆದಾಗ ಗುರಿ ಮುಟ್ಟಬಹುದು.ನಾನಿನ್ನು ಚುನಾಯಿತನಾಗಿಲ್ಲ,ರಾಜ್ಯದ ಜನರು ನನ್ನ ಮೇಲೆ ಅದೇನೋ ಪ್ರೀತಿ ಇಟ್ಟಿದ್ದಾರೆ.ರಾಜ್ಯದ ಜನರ ಆಶೀರ್ವಾದ ನನ್ನ ಮೇಲೆ ಇರಲಿ ಎನ್ನುವ ಮೂಲಕ ಪರೋಕ್ಷವಾಗಿ ಮತ್ತೆ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಸಂದೇಶವನ್ನು ನಿಖಿಲ್ ರವಾನಿಸಿದಂತಿದೆ.